More

    ಡ್ರಗ್ಸ್​ ದುಷ್ಪರಿಣಾಮಗಳ ಕುರಿತಾದ ‘ಕ್ವಿಟ್​’ …

    ಬೆಂಗಳೂರು: ಡ್ರಗ್ಸ್​ ನಿರ್ಮೂಲನೆ ಮತ್ತು ಅದರ ನಶೆಯಿಂದಾಗುವ ದುಷ್ಪರಿಣಾಮಗಳ ಕುರಿತಾಗಿ ಇದುವರೆಗೂ ಹಲವು ಸಿನಿಮಾಗಳು ಮತ್ತು ವೀಡಿಯೋ ಆಲ್ಬಂಗಳು ಬಂದಿವೆ. ಈಗ ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಸಹ ಈ ಕುರಿತು ಒಂದು ಹಾಡು ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

    ಇದನ್ನೂ ಓದಿ: ಚಂದನ್​ ಜತೆಗೆ ಹೆಜ್ಜೆ ಹಾಕಿದ ಸಂಜನಾ … ‘ಸೂತ್ರಧಾರಿ’ ಚಿತ್ರದಲ್ಲೊಂದು ವಿಶೇಷ ಹಾಡು …

    ಈ ಹಿಂದೆ ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಹಲವು ಸಮಾಜಮುಖಿ ವಿಡಿಯೋ ಹಾಡುಗಳನ್ನು ಮಾಡಿದ್ದ ಆದರ್ಶ್​, ಈಗ ‘ಕ್ವಿಟ್’ ಎಂಬ ವಿಡಿಯೋ ಹಾಡಿನ ಮೂಲಕ ಸಮಾಜಕ್ಕೆ ಮತ್ತು ಕುಟುಂಬಗಳಿಗೆ ಹೊರೆಯಾಗಿರುವ ಡ್ರಗ್ಸ್​ನ ನಿರ್ಮೂಲನೆ ಮತ್ತು ಅದರ ನಶೆಯಿಂದಾಗುವ ಪರಿಣಾಮಗಳ ಕುರಿತು ಒಂದು ಹಾಡನ್ನು ಹೊರತಂದಿದ್ದಾರೆ.

    ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ಸಂಯೋಜಿಸಿದ್ದು, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶನ ಮಾಡಿರುವ ಈ ಹಾಡು ಒಂದು ಕುಟುಂಬ ಮತ್ತು ಆ ಕುಟುಂಬದ ಹುಡುಗ ಡ್ರಗ್ ವ್ಯಸನಿಯಾಗಿ ಅದರಿಂದ ಹೊರಬರುವ ಚಿತ್ರಣವನ್ನು ಒಳಗೊಂಡಿದೆ.

    ಇದನ್ನೂ ಓದಿ: ಇದೊಂದು ಫೇಕ್​ ನ್ಯೂಸ್​ … ಕಂಗನಾ ಹೀಗೆ ಹೇಳಿದ್ದು ಯಾವ ವಿಷಯದ ಬಗ್ಗೆ?

    ಈ ಹಾಡಿನಲ್ಲಿ ಆದರ್ಶ್ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಜತೆಗೆ ತೆಲುಗಿನ ‘ಡಿ’ ಡ್ಯಾನ್ಸ್ ಸೀಸನ್ 13ರ ಸ್ಪರ್ಧಿ ಹಾಗೂ ‘ದಮಯಂತಿ’ ಚಿತ್ರದಲ್ಲಿ ಅಭಿನಯಿಸಿದ್ದ ನಿತ್ಯದಾಸ್ ಗೌಡ, ಆದರ್ಶ್ ಅವರಿಗೆ ಜೋಡಿಯಾಗಿದ್ದಾರೆ. ಈ ಹಾಡು ಯೂಟ್ಯೂಬ್​ನ ಶ್ರೀಕೃಷ್ಣ ಪ್ರೊಡಕ್ಷನ್ಸ್ ಚಾನಲ್​ನಲ್ಲಿ ಲಭ್ಯವಿದೆ.

    ಯಾರಿಗೂ ಬೇಡವಾದ ಪುರಿ ಜಗನ್ನಾಥ್​ಗೆ ಸಾಥ್​ ನೀಡಿದ ಸಲ್ಮಾನ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts