More

    ಡಿ ಕಾಕ್ , ಡುಸೆನ್ ಶತಕದ ಅಬ್ಬರ: ಪಾಕ್ ಸೆಮೀಸ್ ಆಸೆ ಜೀವಂತವಿರಿಸಿದ ಹರಿಣಗಳ ಗೆಲುವು

    ಪುಣೆ: ವಿಕೆಟ್ ಕೀಪರ್-ಬ್ಯಾಟರ್ ಕ್ವಿಂಟನ್ ಡಿಕಾಕ್ (114 ರನ್, 116 ಎಸೆತ, 10 ಬೌಂಡರಿ, 3 ಸಿಕ್ಸರ್) ಸಿಡಿಸಿದ ಟೂರ್ನಿಯ 4ನೇ ಶತಕ ಹಾಗೂ ರಸ್ಸೀ ವಾನ್ ಡರ್ ಡುಸೆನ್ (133 ರನ್, 118 ಎಸೆತ, 9 ಬೌಂಡರಿ, 5 ಸಿಕ್ಸರ್) ದಾಖಲಿಸಿದ 2ನೇ ಸೆಂಚುರಿಯ ನೆರವಿನಿಂದ ರನ್‌ಮಳೆ ಹರಿಸಿದ ದಕ್ಷಿಣ ಆಫ್ರಿಕಾ ತಂಡ ತನ್ನ 7ನೇ ಲೀಗ್ ಪಂದ್ಯದಲ್ಲಿ ಕಿವೀಸ್ ಎದುರು 190 ರನ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ ಟೆಂಬಾ ಬವುಮಾ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದು, ಸೆಮೀಸ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ ಟಾಮ್ ಲಾಥಮ್ ಪಡೆ ಸತತ 3ನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 3ರಿಂದ 4ನೇ ಸ್ಥಾನಕ್ಕಿಳಿದಿದೆ.
    ಎಂಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ, ಡಿಕಾಕ್-ಡುಸೆನ್ ದ್ವಿಶತಕದ ಜತೆಯಾಟ ಹಾಗೂ ಡೇವಿಡ್ ಮಿಲ್ಲರ್ (53 ರನ್, 30 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಆಟದ ಬಲದಿಂದ 4 ವಿಕೆಟ್‌ಗೆ 357 ರನ್ ಕಲೆಹಾಕಿತು. ಪ್ರತಿಯಾಗಿ ಮಾರ್ಕೋ ಜಾನ್ಸೆನ್ (31ಕ್ಕೆ 3) ಹಾಗೂ ಕೇಶವ್ ಮಹಾರಾಜ್ (46ಕ್ಕೆ 3) ಮಾರಕ ದಾಳಿಗೆ ತತ್ತರಿಸಿ ಎರಂಡಕಿ ಮೊತ್ತಕ್ಕೆ 5 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್, ಅಂತಿಮವಾಗಿ 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಸರ್ವಪತನ ಕಂಡಿತು. ಕೊನೆಯಲ್ಲಿ ಗ್ಲೆನ್ ಫಿಲಿಪ್ಸ್ (60 ರನ್, 50 ಎಸೆತ, 4 ಬೌಂಡರಿ, 4 ಸಿಕ್ಸರ್) ಸೋಲಿನ ಅಂತರ ತಗ್ಗಿಸಲು ಹೋರಾಡಿದರು.
    ದಕ್ಷಿಣ ಆಫ್ರಿಕಾ: 4 ವಿಕೆಟ್‌ಗೆ 357 ( ಬವುಮಾ 24, ಡಿ ಕಾಕ್ 114, ಡುಸೆನ್ 133, ಡೇವಿಡ್ ಮಿಲ್ಲರ್ 53, ಕ್ಲಾಸೆನ್ 15*, ಮಾರ್ಕ್ರಮ್ 6*, ಸೌಥಿ 77ಕ್ಕೆ 2). ನ್ಯೂಜಿಲೆಂಡ್: 35.3 ಓವರ್‌ಗಳಲ್ಲಿ 167 ( ಕಾನ್ ವೇ 2, ಯಂಗ್ 33, ರಚಿನ್ 9, ಡೆರಿಲ್ 24, ಲಾಥಮ್ 4, ಫಿಲಿಪ್ಸ್ 60, ಜಾನ್ಸೆನ್ 31ಕ್ಕೆ 3, ಕೇಶವ್ ಮಹಾರಾಜ್ 46ಕ್ಕೆ 3, ಕೋಟ್‌ಜೀ41ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts