More

    ತ್ರೈಮಾಸಿಕ ಲಾಭ ದುಪ್ಟಟ್ಟು: ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿದ ಟಾಟಾ ಮೋಟಾರ್ಸ್​ ಷೇರು

    ನವದೆಹಲಿ: ಡಿಸೆಂಬರ್ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ಲಿಮಿಟೆಡ್​ (Tata Motors Ltd.) ನಿವ್ವಳ ಲಾಭದಲ್ಲಿ ಎರಡು ಪಟ್ಟು ಏರಿಕೆಯಾಗಿ 7,100 ಕೋಟಿ ರೂಪಾಯಿಗಳಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಸೋಮವಾರ, ಫೆ. 5ರಂದು ಟಾಟಾ ಮೋಟಾರ್ಸ್ ಷೇರುಗಳ ಬೆಲೆ ಅಂದಾಜು ಶೇಕಡಾ 6 ರಷ್ಟು ಏರಿಕೆಯಾಗಿದೆ.

    ಸೋಮವಾರದ ಕೊನೆಯಲ್ಲಿ ಈ ಷೇರು 5.47 ರಷ್ಟು ಏರಿಕೆ ಕಂಡು ಬಿಎಸ್‌ಇಯಲ್ಲಿ 926.80 ರೂ. ತಲುಪಿತು.
    ಇಂಟ್ರಾ ಡೇ ವಹಿವಾಟಿನಲ್ಲಿ ಇದು ಶೇಕಡಾ 8 ರಷ್ಟು ಹೆಚ್ಚಳವಾಗಿ ದಾಖಲೆಯ ಗರಿಷ್ಠ ಬೆಲೆಯಾದ 949.60 ರೂಪಾಯಿ ತಲುಪಿತ್ತು. ಎನ್‌ಎಸ್‌ಇಯಲ್ಲಿ ಶೇ.5.80ರಷ್ಟು ಏರಿಕೆ ಕಂಡು 929.75 ರೂ. ತಲುಪಿತು.

    ಕಂಪನಿಯ ಮಾರುಕಟ್ಟೆ ಬಂಡವಾಳೀಕರಣ (ಎಂಕ್ಯಾಪ್) 15,949.67 ಕೋಟಿ ರೂ.ಗಳಿಂದ 3,07,961.47 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಕಂಪನಿಯು ಹಿಂದಿನ ವರ್ಷದ ಡಿಸೆಂಬರ್​ ತ್ರೈಮಾಸಿಕ ಅವಧಿಗೆ ರೂ 3,043 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು,

    ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯವು ವರ್ಷದಿಂದ ವರ್ಷಕ್ಕೆ ಶೇ 25 ರಷ್ಟು ಏರಿಕೆಯಾಗಿ 1,10,600 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಕಂಪನಿಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

    “ನಾವು ಎಲ್ಲಾ ವ್ಯವಹಾರಗಳಲ್ಲಿ ಬೆಳವಣಿಗೆ ದಾಖಲಿಸಿದ್ದೇವೆ. Q4 (ಮಾರ್ಚ್ ತ್ರೈಮಾಸಿಕ) ನಲ್ಲಿ ಕಾರ್ಯಕ್ಷಮತೆಯು ಇನ್ನಷ್ಟು ಸುಧಾರಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಡಿಸೆಂಬರ್ ತ್ರೈಮಾಸಿಕದಲ್ಲಿ ನಾವು ರೂ 9,500 ಕೋಟಿ ನಿವ್ವಳ ಸಾಲ ಕಡಿತವನ್ನು ಸಾಧಿಸಿದ್ದೇವೆ” ಎಂದು ಟಾಟಾ ಮೋಟಾರ್ಸ್ ಹೇಳಿಕೆಯಲ್ಲಿ ತಿಳಿಸಿದೆ.

    ಷೇರು ಬೆಲೆ ಒಂದೇ ತಿಂಗಳಲ್ಲಿ 50% ಹೆಚ್ಚಳ: ಸರ್ವೇಶ್ವರ್ ಫುಡ್ಸ್ ಮತ್ತೆ ಅಪ್ಪರ್​ ಸರ್ಕ್ಯೂಟ್​ ಹಿಟ್​; ಫೆಬ್ರವರಿ 10ರಂದು ಮತಹ್ವದ ಸಭೆ

    ಮಂಗಳವಾರ 55% ಲಾಭಾಂಶ ಹಂಚಿಕೆ: ನೈಸರ್ಗಿಕ ಅನಿಲ ಉತ್ಪಾದಕ ಕಂಪನಿಯ ಎಕ್ಸ್-ಡಿವಿಡೆಂಡ್‌ ಸ್ಟಾಕ್​ ಖರೀದಿಗೆ ಬ್ರೋಕರೇಜ್​ ಸಂಸ್ಥೆಗಳ ಸಲಹೆ

    ಸೋಲಾರ್​ ಘಟಕ ಸ್ಥಾಪಿಸುವ ದೊಡ್ಡ ಗುತ್ತಿಗೆ: ಕೆಪಿಐ ಗ್ರೀನ್ ಎನರ್ಜಿ ಷೇರು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ; ಬೋನಸ್​ ಷೇರು ವಿತರಣೆಗೆ ಕಂಪನಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts