More

    ಗುಣಮಟ್ಟದ ಶಿಕ್ಷಣ ಕೆಎಲ್‌ಇ ಧ್ಯೇಯ

    ಚಿಕ್ಕೋಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೆಎಲ್‌ಇ ಸಂಸ್ಥೆಗೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಮುಖ್ಯ ಧ್ಯೇಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಸವರಾಜ ಪಾಟೀಲ ಹೇಳಿದರು.

    ಪಟ್ಟಣದ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಪಿಯು ಕಾಲೇಜಿನ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕೃತಿಕ ಹಾಗೂ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ಕೆಎಲ್‌ಇ ಸಂಸ್ಥೆಯು ಪರಿಣಾಮಕಾರಿಯಾದ ಶಿಕ್ಷಣ ನೀಡಲು ವರ್ಷವಿಡೀ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

    ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರತರಲು ಪಠ್ಯೇತರ ಚಟುವಟಿಕೆ ಆಯೋಜಿಸುವುದು ಅವಶ್ಯ ಎಂದರು. ಮುಖ್ಯ ಅತಿಥಿಯಾಗಿ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಸಮಿತಿ ಸದಸ್ಯ ಮಹೇಶ ಭಾತೆ ಮಾತನಾಡಿ, ಪಾಲಕರು ಮಕ್ಕಳಿಗೆ ಮಾದರಿಯಾಗಿರಬೇಕು ಎಂದರು.

    ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಸಮಿತಿ ಸದಸ್ಯ ಎನ್.ಎಸ್.ವಂಟಮುತ್ತೆ ಮಾತನಾಡಿದರು. ಪ್ರಾಚಾರ್ಯ ಪ್ರಕಾಶ ಕೋಳಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾನಿಕ ಸಮಿತಿ ಸದಸ್ಯ ಎಸ್.ಎಸ್.ಕವಲಾಪುರೆ, ಪ್ರಾಚಾರ್ಯ ಡಾ.ಬಿ.ಜಿ. ಕುಲಕರ್ಣಿ ಇದ್ದರು. ತಿಪ್ಪಣ್ಣ ಖೋತ ಸ್ವಾಗತಿಸಿದರು. ಪಿ.ಜೆ.ಕೊಂಬಾರೆ, ವಿ.ಬಿ. ಉಗ್ರಾಣಿ ನಿರೂಪಿಸಿದರು. ಎಸ್.ಜಿ. ಅವರಾದೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts