More

    ಕಷ್ಟಪಟ್ಟು ದುಡಿದ ಹಣದಲ್ಲಿ 10 ಲಕ್ಷ ಕೊಡ್ತೇನೆ, ನೀವು 20 ಲಕ್ಷ ಕೊಡಿ: ಜನಪ್ರತಿನಿಧಿಗಳಿಗೆ ವಕೀಲೆ ಸವಾಲು!

    ಮಂಗಳೂರು: ಇದನ್ನು ನೀವು ಚಾಲೆಂಜ್​ ಅಂತಾನೋ ಅಥವಾ ಆಫರ್​ ಎಂದು ಸ್ವೀಕರಿಸುತ್ತಿರೋ ನಿಮಗೆ ಬಿಟ್ಟಿದ್ದು. ನಾನು ಕಷ್ಟಪಟ್ಟು ದುಡಿದ ಹಣದಲ್ಲಿ 10 ಲಕ್ಷ ರೂ. ಕೊಡುತ್ತೇನೆ. ನೀವು 20 ಲಕ್ಷ ರೂ. ಕೊಡಲು ಸಿದ್ಧರಿದ್ದೀರಾ….

    ಇದು ಪುತ್ತೂರಿನ ವಕೀಲೆ ವಿ. ಶೈಲಜಾ ಅಮರನಾಥ್ ಎಂಬುವರು ರಾಜ್ಯದ ಎಲ್ಲಾ ಜನಪ್ರತಿನಿಧಿಗಳಿಗೆ ಎಸೆದಿರುವಂತಹ ಸವಾಲು. ಈ ಬಗ್ಗೆ ಮಾತನಾಡಿ ಎರಡು ದಿನಗಳ ಹಿಂದೆ ತಮ್ಮ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

    ಇದನ್ನೂ ಓದಿ: ವಧು-ವರ ಸೇರಿದಂತೆ ಮದುವೆಗೆ ಬಂದಿದ್ದ 43 ಮಂದಿಗೂ ಕರೊನಾ ಸೋಂಕು…!

    ವಿಡಿಯೋದಲ್ಲಿ ಏನಿದೆ?: ಕೋವಿಡ್​ ನಿರ್ಮೂಲನೆ ಮಾಡಲು ಜನಪ್ರತಿನಿಧಿಗಳಿಗೆ ಸವಾಲು ಹಾಕಿರುವ ಶೈಲಜಾ ಅವರು, ಕೋವಿಡ್​ ನಿರ್ಮೂಲನಾ ಸಮಿತಿಯೊಂದನ್ನು ರಚನೆ ಮಾಡೋಣ. ನಾನು ಕಷ್ಟಪಟ್ಟು ದುಡಿದ ಹಣದಲ್ಲಿ 10 ಲಕ್ಷ ರೂ. ಸಮಿತಿಗೆ ಕೊಡುತ್ತೇನೆ. ಆದರೆ, ನೀವು ಚುನಾವಣಾ ಸಮಯದಲ್ಲಿ ಕೋಟಿಗಟ್ಟಲೇ ಹಣ ಸುರಿದು ಗೆದ್ದಿದ್ದೀರಾ ಎಂಬುದು ಪ್ರತಿಯೊಬ್ಬರಿಗೂ ಹಾಗೂ ನಿಮ್ಮ ಮನಸಾಕ್ಷಿಗೆ ಗೊತ್ತಿರುವ ವಿಚಾರ.

    ನಾನು ಹತ್ತು ಲಕ್ಷ ರೂ. ಹಾಕಿದರೆ, ನೀವು 20 ಲಕ್ಷ ರೂ ಹಾಕಬಹುದು. ರಾಜ್ಯದಲ್ಲಿ 224 ಶಾಸಕರಿದ್ದಾರೆ. ಪ್ರತಿಯೊಬ್ಬರು 20 ಲಕ್ಷ ರೂ. ಹಾಕಿ, ಆ ಹಣವನ್ನು ಅವರವರ ಕ್ಷೇತಕ್ಕಾಗಿಯೇ ಬಳಸಿಕೊಳ್ಳೋಣ. ಹೇಗೆ ಕೋವಿಡ್ ನಿರ್ಮೂಲನೆ ಮಾಡೋಕ್ಕಾಗಲ್ಲ ಎಂಬುದನ್ನು ನೋಡೇ ಬಿಡೋಣ. ಈ ಸರ್ಕಾರಕ್ಕೆ ನಾವೇನು ತೆರಿಗೆ ಹಣ ಕಟ್ಟಿದ್ದೇವೆ, ಅದರಲ್ಲಿ ಏನು ಭ್ರಷ್ಟಾಚಾರ ಆಗಿದೆ. ಅದನೆಲ್ಲಾ ಪಕ್ಕಕ್ಕೆ ಇಡೋಣ. ಒಂದು ಸಮಿತಿ ರಚನೆ ಮಾಡಿ, ಹಣ ಹಾಕೋಣ. ಒಂದು ಆ್ಯಪ್​ ಸೃಷ್ಟಿಸಿ, ಹಣದ ವ್ಯವಹಾರ ಪ್ರತಿಯೊಬ್ಬರಿಗೂ ತಿಳಿಯುವಂತೆ ಮಾಡೋಣ. ಪ್ರತಿಯೊಂದು ಮಾಹಿತಿಯು ಸಹ ಪ್ರತಿಯೊಬ್ಬರಿಗೆ ತಿಳಿಬೇಕು. ಹೀಗೆ ಮಾಡಿದರೆ ಕರೊನಾ ಇಲ್ಲದಂತೆ ಮಾಡಬಹುದು.

    ಈಗಲ್ಲ ಈ ಮೊದಲು ಸಹ ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋಗಿ ನೋಡಿದರು ಯಾವುದು ಸ್ವಚ್ಛವಾಗಿರಲಿಲ್ಲ. ಇನ್ನು ಮುಂದೆ ಆ ರೀತಿ ಆಗದಂತೆ ಒಂದು ಸಮಿತಿ ರಚನೆ ಮಾಡಿ, ಚುನಾವಣೆಗೆ ಎಷ್ಟೋ ಕೋಟಿಗಳನ್ನು ಖರ್ಚು ಮಾಡುತ್ತೀರಲ್ಲ, ಈ ಬಗ್ಗೆ ಯೋಚಿಸಿ, ಇದನ್ನು ಸವಾಲು ಎಂದು ಸ್ವೀಕರಿಸಿ, ಕೋಟಿ ಹಾಕೋದು ಬೇಡ ಕೇವಲ 20 ಲಕ್ಷ ರೂ. ಹಾಕಿ ಕೋವಿಡ್​ ಹೇಗೆ ನಿರ್ಮೂಲನೆ ಆಗಲ್ಲ ನೋಡೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.

    ಇದನ್ನೂ ಓದಿ: ಬೆಟ್​ ಕಟ್ಟಿ ಲಾಫಿಂಗ್​ ಗ್ಯಾಸ್​ ಬಾಟಲ್​ ನುಂಗಿದ ಯುವಕ: ವೈದ್ಯರ ಬಳಿ ಹೋದವನಿಗೆ ಕಾದಿತ್ತು ಬಿಗ್​ ಶಾಕ್!​

    Dear government,Nothing to think! let’s fight for our mask less day.V Shylaja Amarnath Advocate Mob; 9902699525.

    Posted by Adv V Shylaja Amarnath on Thursday, July 23, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts