More

    ವಧು-ವರ ಸೇರಿದಂತೆ ಮದುವೆಗೆ ಬಂದಿದ್ದ 43 ಮಂದಿಗೂ ಕರೊನಾ ಸೋಂಕು…!

    ಕಾಸರಗೋಡು (ಕೇರಳ): ಮಹಾಮಾರಿ ಕರೊನಾ ವೈರಸ್​ ಯಾವ ರೀತಿಯಲ್ಲಿ ಹರಡುತ್ತಿದೆ ಎಂದರೆ ತನ್ನ ಬಳಿ ಬರೋ ಯಾರನ್ನು ಬಿಡುವುದಿಲ್ಲ ಎನ್ನುವುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಮದುವೆಯೊಂದು ಸಾಕ್ಷಿಯಾಗಿದೆ.

    ವಧು-ವರ ಸೇರಿದಂತೆ ಮದುವೆಗೆ ಬಂದಿದ್ದ 43 ಮಂದಿಗೂ ಕರೊನಾ ಸೋಂಕು ಅಂಟಿಕೊಂಡಿದೆ. ಇದೀಗ ಎಲ್ಲರೂ ಕ್ವಾರಂಟೈನ್​ಗೆ ಹೋಗುವಂತೆ ಕಾಸರಗೋಡು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಅಂದಹಾಗೆ ಮದುವೆ ಜುಲೈ 17ರಂದು ಜಿಲ್ಲೆಯ ಚೆಂಗಲಾ ಪಂಚಾಯಿತಿ 4ನೇ ವಾರ್ಡ್​ನಲ್ಲಿ ನಡೆಯಿತು.

    ಇದನ್ನೂ ಓದಿ: PHOTOS: ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಚಿರತರುಣಿ ಸುಮನ್​ ರಂಗನಾಥನ್​…

    ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಡಿಎಂಒ ಡಾ. ಮನೋಜ್​, ವಧು ಹಾಗೂ ವರ ಎರಡು ಮನೆಯವರಿಗೆ ಕರೊನಾ ದೃಢಪಟ್ಟಿದೆ. ಇದೀಗ ಎಲ್ಲರೂ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಮದುವೆಯಲ್ಲಿ ಎಷ್ಟು ಮಂದಿ ಪಾಲ್ಗೊಂಡಿದ್ದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.

    ಸುಮಾರು 50ಕ್ಕಿಂತ ಹೆಚ್ಚು ಮಂದಿ ಇದ್ದರು ಎನ್ನಲಾಗಿದೆ. ಆದರೆ, ಕೆಲ ನೀತಿ ನಿಯಮಗಳು ಇರುವುದರಿಂದ ಎಲ್ಲರೂ ಒಟ್ಟಿಗೆ ಭಾಗವಹಿಸಿಲ್ಲ. ಅಲ್ಲದೆ, ಸೋಂಕಿನ ಮೂಲ ಯಾವುದು ಎಂಬುದ ಸಹ ತಿಳಿದಿಲ್ಲ. ಮದುವೆ ನಡೆದ ಕುಟುಂಬದ ಯಾರೋ ಒಬ್ಬರಿಂದ ಹರಡಿರುವ ಸಂಶಯವಿದೆ. ಸೋಂಕಿಗೆ ಒಳಗಾಗಿರುವ 43 ಮಂದಿಯೂ ಸಹ ವಧು-ವರರ ಸಂಬಂಧಿಕರೆ ಎಂದು ಡಾ. ಮನೋಜ್​ ಮಾಹಿತಿ ನೀಡಿದರು.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಅನಾರೋಗ್ಯದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಿರ್ದೇಶಕ ರೂಮಿ ಜೆಫ್ರಿ

    ಇದರೊಂದಿಗೆ ಕೇರಳ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ 2020 ಪ್ರಕಾರ ಮದುವೆ ಆಯೋಜಿಸಿದವರ ವಿರುದ್ಧ ಕ್ರಮಕ್ಕೆ ಕಾಸರಗೋಡು ಜಿಲ್ಲಾಡಳಿತ ಸೂಚಿಸಿದೆ. ಇದರ ಪ್ರಕಾರ ಎರಡು ವರ್ಷ ಶಿಕ್ಷೆ ಅಥವಾ 10 ಸಾವಿರ ದಂಡ ಕಟ್ಟಬೇಕಾಗುತ್ತದೆ. ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್​ ಇಲಾಖೆಗೆ ಸೂಚಿಸಲಾಗಿದೆ. (ಏಜೆನ್ಸೀಸ್​)

    ಲಾಕ್​ಡೌನ್​ನಿಂದ ಅಂಗಡಿ ಮುಚ್ಚಿದ ಅಪ್ಪ, ಉಳುಮೆಗೆ ಇಬ್ಬರು ಪುತ್ರಿಯರೇ ಎತ್ತುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts