More

    ಲಾಕ್​ಡೌನ್​ನಿಂದ ಅಂಗಡಿ ಮುಚ್ಚಿದ ಅಪ್ಪ, ಉಳುಮೆಗೆ ಇಬ್ಬರು ಪುತ್ರಿಯರೇ ಎತ್ತುಗಳು!

    ಅಮರಾವತಿ: ಅಂದಾಜು 20 ವರ್ಷಗಳಿಂದ ಚಹಾದ ಅಂಗಡಿ ನಡೆಸುತ್ತಿದ್ದ ಅಪ್ಪ, ತನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಕಷ್ಟು ಶ್ರಮಿಸುತ್ತಿದ್ದ. ಆದರೆ, ಕೋವಿಡ್​-19 ಲಾಕ್​ಡೌನ್​ನಿಂದಾಗಿ ಚಹಾದ ಅಂಗಡಿ ಮುಚ್ಚುವ ಪರಿಸ್ಥಿತಿ ಏರ್ಪಟ್ಟಿತು. ಮನೆ ಬಾಡಿಗೆ ಕಟ್ಟಲು ಹಣ ಇಲ್ಲದಾಗಿ ಸ್ವಂತ ಊರು ಸೇರಿಕೊಂಡ ಅಪ್ಪ, ಕುಟುಂಬದ 2.5 ಎಕರೆ ಭೂಮಿ ಉಳುಮೆ ಮಾಡಿ ಸಂಸಾರ ಆಧರಿಸಲು ನಿರ್ಧರಿಸಿದ.

    ಬೀಜ ಖರೀದಿಸಲು ಹಣ ಇರಲಿಲ್ಲವಾದ್ದರಿಂದ, 3 ಸಾವಿರ ರೂ. ಕೈಗಡ ಪಡೆದು ಬೀಜವನ್ನೇನೋ ತಂದ. ಆದರೆ, ಭೂಮಿ ಉಳುಮೆಗೆ ಎತ್ತುಗಳನ್ನು ತರಲು ಅಥವಾ ಟ್ರ್ಯಾಕ್ಟರ್​ ಅನ್ನು ಬಾಡಿಗೆ ತರಲು ಶಕ್ತಿ ಇರಲಿಲ್ಲ. ಆದ್ದರಿಂದ, ತಾವೇ ಎತ್ತುಗಳಾಗಿ ನೊಗವನ್ನು ಹೊರಲು ಆತನ ಇಬ್ಬರು ಪುತ್ರಿಯರು ಮುಂದಾಗಿ, ಉಳುಮೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

    ಇದನ್ನೂ ಓದಿ: ಆರಂಭವಾಗಿದೆ ಅನ್​ಲಾಕ್​ 3.0ಗೆ ಕ್ಷಣಗಣನೆ; ಶಾಲೆ-ಕಾಲೇಜು, ಮೆಟ್ರೋ ಪುನರಾರಂಭ ಅನುಮಾನ

    ಇದು ಚಿತ್ತೂರಿನ ಕೆ.ವಿ. ಪಲ್ಲಿ ಮಂಡಳದ ನಿವಾಸಿ ನಾಗೇಶ್ವರ್​ರಾವ್​ (50) ಮತ್ತವರ ಇಬ್ಬರು ಪುತ್ರಿಯರ ಕತೆ ಇದು. 20 ವರ್ಷದ ಹಿಂದೆ ಮದನಪಲ್ಲಿಗೆ ತೆರಳಿದ್ದ ಇವರು ಅಲ್ಲಿ ಚಹಾದ ಅಂಗಡಿ ಇಟ್ಟುಕೊಂಡಿದ್ದರು. ನಾನು ಇಲ್ಲಿ ಬಂದು ಅಂಗಡಿ ತೆರೆದಾಗ ನನ್ನೊಬ್ಬನದ್ದೇ ಚಹಾದ ಅಂಗಡಿ ಇತ್ತು. ಆದರೆ, ಈಗ ಸಾಕಷ್ಟು ಚಹಾದ ಅಂಗಡಿಗಳಾಗಿವೆ. ಲಾಕ್​ಡೌನ್​ನಿಂದಾಗಿ ವ್ಯಾಪಾರವೂ ಇಲ್ಲದಾಗಿ ನಾನು ಸಂಪೂರ್ಣ ಬರಿಗೈ ಆಗಿದ್ದೆ. ಹಾಗಾಗಿ ಕೆ.ವಿ. ಪಲ್ಲಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

    ಸಾಲ ಮಾಡಿ ಅಪ್ಪ ಬೀಜ ತಂದಿದ್ದು ಆಯಿತು. ಆದರೆ, ಎತ್ತುಗಳನ್ನಾಗಲಿ ಅಥವಾ ಗಂಟೆಗೆ 1,500 ರೂ.ನಂತೆ ಟ್ರ್ಯಾಕ್ಟರ್ ಅನ್ನು ಬಾಡಿಗೆ ಪಡೆಯುವ ಶಕ್ತಿ ನಮಗಿರಲಿಲ್ಲ. ಹಾಗಾಗಿ ನೊಗಕ್ಕೆ ಹೆಗಲಾಗಲು ಸಹೋದರಿಯರಾದ ನಾವಿಬ್ಬರೂ ನಿರ್ಧರಿಸಿದೆವು ಎಂದು ವೆನ್ನೆಲಾ (17) ತಿಳಿಸಿದ್ದಾರೆ.
    ನಮ್ಮಿಬ್ಬರಿಗೂ ಉತ್ತಮ ಶಿಕ್ಷಣ ಕೊಡಿಸಲು ಅಪ್ಪ ಎಷ್ಟು ಕಷ್ಟಪಡುತ್ತಿದ್ದರು ಎಂಬ ಸತ್ಯದ ಅರಿವು ನಮ್ಮಿಬ್ಬರಿಗೂ ತಿಳಿದಿದೆ. ಓದಲು ಪೂರಕವಾದ ವಾತಾವರಣ ಸಿಗಲಿ ಎಂಬ ಕಾರಣಕ್ಕೆ ಅವರು ಸ್ಥಳವನ್ನು ಬದಲಿಸುತ್ತಲೇ ಇರುತ್ತಿದ್ದರು. ನಮಗೆ ಈಗ ಯಾವುದೇ ಆದಾಯವಿಲ್ಲ. ಕೃಷಿಯೊಂದೇ ನಮಗಿದ್ದ ಆಧಾರ. ಆದ್ದರಿಂದ, ನಾವಿಬ್ಬರೂ ತಂದೆಯ ಸಹಾಯಕ್ಕೆ ನಿಂತೆವು ಎಂದು ತಿಳಿಸಿದ್ದಾರೆ. ಓದಿನಲ್ಲಿ ಚುರುಕಾಗಿರುವ ವೆನ್ನೆಲಾ ವೈದ್ಯೆಯಾಗುವ ಕನಸು ಕಾಣುತ್ತಿದ್ದರೆ, ತಂಗಿಗೂ ಯಾವುದಾದರೂ ವೃತ್ತಿಪರ ಕೋರ್ಸ್​ನಲ್ಲಿ ತೊಡಗಿಸುವುದು ಅವರ ಬಯಕೆಯಾಗಿದೆ.

    ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ನೋವು ಮರೆಸಿದ ‘ಕಾರ್ಗಿಲ್’ ಗೆಲುವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts