More

    ಉದ್ಯಮ ಕ್ಷೇತ್ರಕ್ಕೆ ಅಗತ್ಯ ಕೌಶಲ – ಆಕಾಶ್ ಎಸ್.ಕೆ. ಹೇಳಿಕೆ – ವಿವೇಕಾನಣದ ಕಾಲೇಜಿನಲ್ಲಿ ಏಕತ್ರ -೨೦೨೪


    ಪುತ್ತೂರು: ಉದ್ಯಮವನ್ನು ಯಶಸ್ವಿಯಾಗಿ ನಡೆಸಲು ಎದುರಾಗುವ ಹಲವು ಸಮಸ್ಯೆಗಳನ್ನು ಯೋಚಿಸಿ ಪರಿಹಾರವನ್ನು ಕಂಡುಕೊಂಡು ಮುಂದುವರಿಯುವ ಶಕ್ತಿ ನಮ್ಮಲ್ಲಿರಬೇಕು. ಉದ್ಯಮ ಕ್ಷೇತ್ರಕ್ಕೆ ಕೌಶಲ ಅಗತ್ಯವಿದ್ದು, ಬದಲಾವಣೆಗೆ ಹೊಂದಿಕೊಂಡು ಕೆಲಸದಲ್ಲಿ ಹೊಸತನವನ್ನು ಕಂಡು ಯಶಸ್ವಿಗೊಳ್ಳಬೇಕಾಗಿದೆ ಎಂದು ಉದ್ಯಮಿ ಆಕಾಶ್ ಎಸ್.ಕೆ. ಹೇಳಿದರು.
    ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ವಾಣಿಜ್ಯ ವಿಭಾಗ, ಕಾಮರ್ಸ್ ಅಸೋಸಿಯೇಶನ್ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜಿಸಿದ ಏಕತ್ರ -೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಮಾತನಾಡಿ ನಮ್ಮ ದೇಶ ವಿಶ್ವದಲ್ಲಿ ಮೂರನೇ ಬಲಿಷ್ಠ ರಾಷ್ಟ್ರವಾಗಿ ಮುಂದುವರಿಯುತ್ತಿದ್ದು, ಇದಕ್ಕೆ ವಾಣಿಜ್ಯಕ್ಷೇತ್ರ ಬಹು ದೊಡ್ಡ ಕೊಡುಗೆಯನ್ನು ನೀಡಿದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವುದನ್ನು ಪ್ರಾಯೋಗಿಕವಾಗಿ ಅನುಸರಣೆ ಮಾಡಬೇಕಾದರೆ ಶ್ರಮ ಪಡಬೇಕು ಎಂದು ತಿಳಿಸಿದರು.
    ಉದ್ಯಮಿ ಆಕಾಶ್‌ಎಸ್.ಕೆ ಹಾಗೂ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿ ಭವ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗಾಗಿ ೧೫ಕ್ಕೂ ಹೆಚ್ಚು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಏಕತ್ರ ೨೦೨೪ ಸ್ಪರ್ಧೆಯ ಸಮಗ್ರ ಪ್ರಶಸ್ತಿಯನ್ನು ದ್ವಿತೀಯ ಬಿಕಾಂ ಎ ಮತ್ತು ರನ್ನರ್ ಅಪ್ ಪ್ರಶಸ್ತಿಯನ್ನು ಪ್ರಥಮ ಬಿಕಾಂ ಸಿ ಪಡೆದುಕೊಂಡಿತು.
    ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್., ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಎಚ್.ಜಿ ಶ್ರೀಧರ್, ವಿಶೇಷಾಽಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯ್ಕ್ ಬಿ. ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ತೃತೀಯ ವಾಣಿಜ್ಯ ವಿಭಾಗದ ಪವನ್‌ರಾಜ್ ಉಪಸ್ಥಿತರಿದ್ದರು.
    ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸ್ವಾತಿ ಪಿ.ಎನ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಭವ್ಯ ಹಿತೇಶ್ ಕುಮಾರ್ ವಂದಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts