More

    ಇನ್ಮುಂದೆ ಪುಟ್ಟಣ್ಣ ಕಣಗಾಲ್ ಜಯಂತಿ ‘ನಿರ್ದೇಶಕರ ದಿನ’ವಾಗಿ ಆಚರಣೆ …

    ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಲ್ ಜನ್ಮದಿನ ಇಂದು. ಈ ದಿನವನ್ನು ಮುಂದಿನ ದಿನಗಳಲ್ಲಿ ‘ನಿರ್ದೇಶಕರ ದಿನ’ ಎಂದು ಆಚರಿಸಲು ವಾಣಿಜ್ಯ ಮಂಡಳಿ ನಿರ್ಧರಿಸಿದೆ.

    ಇದನ್ನೂ ಓದಿ: ಅವನನ್ನು ಸಪೋರ್ಟ್​ ಮಾಡೋ ನಾಯಕಿಯರಿಗೆ ನಾಚಿಕೆ ಆಗಬೇಕು … ಸಲ್ಮಾನ್​ ವಿರುದ್ಧ ಹರಿಹಾಯ್ದ ಸೋಮಿ ಅಲಿ

    ಇನ್ಮುಂದೆ ಪುಟ್ಟಣ್ಣ ಕಣಗಾಲ್ ಜಯಂತಿ 'ನಿರ್ದೇಶಕರ ದಿನ'ವಾಗಿ ಆಚರಣೆ …ಇಂದು ಪುಟ್ಟಣ್ಣ ಕಣಗಾಲ್​ ಅವರ ಹುಟ್ಟುಹಬ್ಬದ ಅಂಗವಾಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುಟ್ಟಣ್ಣ ಕಣಗಲ್ ಜಯಂತಿಯನ್ನು ಆಚರಣೆ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್, ‘ತೆಲುಗು ಚಿತ್ರರಂಗದಲ್ಲೂ ‘ನಿರ್ದೇಶಕರ ದಿನ’ ಎಂದಿದೆ. ನಮ್ಮಲ್ಲೂ ಪ್ರತಿ ವರ್ಷ ಡಿಸೆಂಬರ್ 1ರಂದು ಪುಟ್ಟಣ್ಣ ಕಣಗಲ್ ಜನ್ಮದಿನದ ಪ್ರಯುಕ್ತ ‘ನಿರ್ದೇಶಕರ ದಿನ’ವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಈಗಿನವರ ಜೊತೆಗೆ ಮುಂದಿನ ಪೀಳಿಗೆಗೂ ಅವರ ಸಿನಿಮಾಗಳ ಬಗ್ಗೆ, ನಿರ್ದೇಶನದ ಬಗ್ಗೆ ತಿಳಿಸಿಕೊಡುವಂತಹ ಕೆಲಸ ಇದರಿಂದಾಗಬೇಕು. ಆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

    ಇದನ್ನೂ ಓದಿ: ದಿಗಂತ್​ ಕಾಲಿಗೆ ಬ್ಯಾಂಡೇಜ್​; ಕುಂಟುತ್ತಲೇ ‘ತಿಮ್ಮಯ್ಯ ಅಂಡ್​ ತಿಮ್ಮಯ್ಯ’ ಚಿತ್ರದ ಪ್ರಚಾರ ಮಾಡುತ್ತಿರುವ ದೂಧ್​ ಪೇಡ

    ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಆರ್. ನಂಜುಂಡೇಗೌಡ ಮತ್ತು ಇತರೆ ಪದಾಧಿಕಾರಿಗಳನ್ನು ಕರೆದು ಇದೇ ಸಂದರ್ಭದಲ್ಲಿ ಸನ್ಮಾಸಿಲಾಯಿತು. ‘ನಾವು ಮಾಡಬೇಕಾದ ಕೆಲಸ ತುಂಬಾ ಇದೆ ಎಂಬ ಜವಾಬ್ದಾರಿಯನ್ನು ಈ ಸನ್ಮಾನ ನೀಡಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕರಿಗೆ ಗೌರವ ತಂದು ಕೊಡುವ ಕೆಲಸವನ್ನು ನಮ್ಮ ಸಂಘ ಮಾಡಲಿದೆ. ಹಲವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋದಾಗಿ ನಂಜುಂಡೇಗೌಡ’ ಇದೇ ಸಂದರ್ಭದಲ್ಲಿ ಹೇಳಿದರು.

    ಸ್ವಾತಂತ್ರ್ಯ ಹೋರಾಟಗಾರನ ಮಗನ ಭೂಗತ ಲೋಕದ ಪಯಣ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts