More

    ಸ್ವಾತಂತ್ರ್ಯ ಹೋರಾಟಗಾರನ ಮಗನ ಭೂಗತ ಲೋಕದ ಪಯಣ …

    ಬೆಂಗಳೂರು: ಆರ್​. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ, ಸುದೀಪ್​ ಮುಂತಾದವರು ಅಭಿನಯಿಸಿರುವ ‘ಕಬ್ಜ’ ಪ್ರಾರಂಭಗಾಗಿ ಎರಡು ವರ್ಷಗಳೇ ಆಗಿವೆ. ಈ ಎರಡು ವರ್ಷಗಳಲ್ಲಿ ಹಲವು ಪತ್ರಿಕಾಗೋಷ್ಠಿಗಳಾಗಿವೆ. ಆರ್​. ಚಂದ್ರ ಬಹಳಷ್ಟು ಬಾರಿ ಮಾಧ್ಯಮದವರ ಜತೆಗೆ ಮಾತನಾಡಿದ್ದಾರೆ. ಆದರೆ, ಇಷ್ಟು ಸಮಯದಲ್ಲಿ ಒಂದೇ ಒಂದು ಬಾರಿ ಸಹ ಅವರು ಚಿತ್ರದ ಕಥೆಯನ್ನು ಬಿಟ್ಟು ಕೊಟ್ಟಿಲ್ಲ.

    ಇದನ್ನೂ ಓದಿ: ರಮ್ಯಾ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ; ಗೋಡೆ ಮೇಲೆ 35 ಅಡಿ ಚಿತ್ರ

    ಚಿತ್ರದ ಕಥೆ ಏನು? ಇದರಲ್ಲಿ ಉಪೇಂದ್ರ ಅವರ ಪಾತ್ರವೇನು? ಎಂದು ಕೇಳಿದಾಗಲೆಲ್ಲ, 1960ರಿಂದ 80ರ ದಶಕದಲ್ಲಿ ನಡೆಯುವ ಭಾರತದ ಭೂಗತ ಲೋಕದ ಕಥೆ ಎಂದಷ್ಟೇ ಹೇಳಿದ್ದರು. ಮಿಕ್ಕಂತೆ ಚಿತ್ರ ನೋಡಿ ಎಂದು ಬಾಯಿ ಮುಚ್ಚಿಸುತ್ತಿದ್ದರು ಚಂದ್ರು. ಈಗ ಚಿತ್ರದ ಒಂದೆಳೆ ಹೊರಬಿದ್ದಿದೆ.

    ಅದರ ಪ್ರಕಾರ, ಇದೊಬ್ಬ ಸ್ವಾತಂತ್ರ್ಯ ಹೋರಾಟಗಾರನ ಮಗನ ಕಥೆಯಂತೆ. ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ‘ಕಬ್ಜ’ ಚಿತ್ರದಲ್ಲಿದೆ. ಆತ ಭೂಗತ ಜಗತ್ತಿನ ರಾಜನಾದ ಮೇಲೆ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.

    ಈ ಮಧ್ಯೆ, ಚಿತ್ರದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್​​ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಆನಂದ್ ಮೋಷನ್ ಪಿಕ್ಚರ್ಸ್ ತನ್ನದಾಗಿಸಿಕೊಂಡಿದ್ದು, ಮೊದಲ ಹಂತವಾಗಿ ಇಂದು ಹಿಂದಿ ಟೀಸರ್ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಯಶ್ ಮುಂದಿನ ಚಿತ್ರಕ್ಕೆ ಮಗಳೇ ನಿರ್ಮಾಪಕಿ? ಐರಾ ಹೆಸರಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭ ಸಾಧ್ಯತೆ …

    ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶ್ರೀಯಾ ಶರಣ್, ಮುರಳಿ ಶರ್ಮ, ಪೋಸಾನಿ ಕೃಷ್ಣಮುರಳಿ, ಕಬೀರ್ ಸಿಂಗ್​ ದುಹಾನ್​ ಸೇರಿದಂತೆ ಪ್ರತಿಭಾವಂತರ ದೊಡ್ಡ ದಂಡೇ ಇದ್ದು, ಚಿತ್ರಕ್ಕೆ ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

    ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್​​ಗೆ ‘ಕಬ್ಜ’ ಚಿತ್ರದ ಹಿಂದಿ ಅವತರಣಿಕೆ ಹಕ್ಕುಗಳು; ಹಿಂದಿ ಟೀಸರ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts