More

    VIDEO| ಕ್ವಾರಂಟೈನ್ ಕೊಠಡಿಯಲ್ಲಿ ಇಲಿ ಕಾಟ! ಟೆನಿಸ್ ಆಟಗಾರ್ತಿಯ ಅಳಲು

    ಮೆಲ್ಬೋರ್ನ್: ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ಪೂರ್ವಭಾವಿಯಾಗಿ ಇದೀಗ ಎಲ್ಲ ಟೆನಿಸ್ ತಾರೆಯರು ಆತಿಥೇಯ ಆಸ್ಟ್ರೇಲಿಯಾದಲ್ಲಿ ಒಟ್ಟುಗೂಡಿದ್ದು, ಕೋವಿಡ್-19 ಪರೀಕ್ಷೆಯ ಬಳಿಕ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಲಾಸ್ ಏಂಜಲಿಸ್‌ನಿಂದಾಗಿ ಟೂರ್ನಿಗಾಗಿ ಆಟಗಾರರನ್ನು ಕರೆತಂದ ಬಾಡಿಗೆ ವಿಮಾನದಲ್ಲಿದ್ದ ನಾಲ್ವರಿಗೆ ಪಾಸಿಟಿವ್ ಬಂದಿದೆ. ಇದರಿಂದಾಗಿ 47 ಆಟಗಾರರನ್ನು ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿಡಲಾಗಿದೆ. ಈ ನಡುವೆ ಮೆಲ್ಬೋರ್ನ್‌ನ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವೇಳೆ ಕಜಾಕ್‌ಸ್ತಾನದ ಆಟಗಾರ್ತಿ ಯೂಲಿಯಾ ಪುಟಿನ್‌ಸೇವಾಗೆ ‘ರೂಮ್‌ಮೇಟ್’ ಕೂಡ ದೊರೆತಿದ್ದು, ಇದರಿಂದ ಅವರು ಐಸೋಲೇಷನ್‌ನಲ್ಲೂ ಭೀತಿಯಿಂದಲೇ ದಿನಗಳನ್ನು ಕಳೆಯುವಂತಾಗಿದೆ.

    ವಿಶ್ವ ನಂ. 28 ಆಟಗಾರ್ತಿ ಪುಟಿನ್‌ಸೇವಾ ಕ್ವಾರಂಟೈನ್ ವೇಳೆ ಒದಗಿಸಿರುವ ಕೊಠಡಿಯ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೂಮ್‌ನಲ್ಲಿ ಇಲಿ ಕಾಟ ಇರುವ ಬಗ್ಗೆಯೂ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.

    ಇದನ್ನೂ ಓದಿ: ಗಾಲೆಯಲ್ಲಿ ಲಂಕಾ ಪ್ರತಿರೋಧದ ನಡುವೆ ಗೆಲುವಿನ ಸನಿಹ ಇಂಗ್ಲೆಂಡ್

    ‘ನನ್ನ ಕ್ವಾರಂಟೈನ್ ಕೊಠಡಿ ಬದಲಾಯಿಸಿಕೊಳ್ಳಲು 2 ಗಂಟೆಗಳಿಂದ ಪ್ರಯತ್ನಿಸುತ್ತಿರುವೆ. ಆದರೆ ಕ್ವಾರಂಟೈನ್ ಪರಿಸ್ಥಿತಿಯಿಂದಾಗಿ ಯಾರೂ ನೆರವಿಗೆ ಬರುತ್ತಿಲ್ಲ ಎಂದು ಪುಟಿನ್‌ಸೇವಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ತಮ್ಮ ಕೊಠಡಿಯಲ್ಲಿ ಇಲಿಯೊಂದು ಯಾವುದೇ ಹೆದರಿಕೆ ಇಲ್ಲದೆ ಓಡಾಡಿಕೊಂಡಿರುವ ವಿಡಿಯೋವನ್ನೂ ಪ್ರಕಟಿಸಿದ್ದಾರೆ.

    ಈ ನಡುವೆ ಪುಟಿನ್‌ಸೇವಾರ ಟ್ವೀಟ್‌ಗೆ ಬ್ರಿಟನ್ ಟೆನಿಸ್ ತಾರೆ ಆಂಡಿ ಮರ‌್ರೆ ಅವರ ತಾಯಿ ಜ್ಯೂಡಿ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು, ‘ನಿಮ್ಮ ಸಮಸ್ಯೆ ಬಗೆಹರಿಸಲು ಬೆಕ್ಕು ಒಂದರ ಅಗತ್ಯವಿದೆ’ ಎಂದಿದ್ದಾರೆ. ಈ ನಡುವೆ ಮೆಲ್ಬೋರ್ನ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ಇತರ ಕೆಲ ಆಟಗಾರರು-ಆಟಗಾರ್ತಿಯರೂ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ವಾರಂಟೈನ್‌ನಲ್ಲಿರಬೇಕಾದ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ. ಆದರೆ ಇದಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನಾದರೂ ಒದಗಿಸಿ. ಯಾಕೆಂದರೆ ನಾವು ಮುಂದಿನ ದಿನಗಳಲ್ಲಿ ಪ್ರಮುಖವಾದ ಟೂರ್ನಿಯೊಂದರಲ್ಲಿ ಆಡಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿ ಈ ಬಾರಿ 3 ವಾರ ತಡವಾಗಿ ನಡೆಯಲಿದ್ದು, ಫೆಬ್ರವರಿ 8ರಂದು ಮೆಲ್ಬೋರ್ನ್‌ನಲ್ಲಿ ಆರಂಭಗೊಳ್ಳಲಿದೆ. ಇದಕ್ಕಾಗಿ ಈಗಾಗಲೆ ವಿವಿಧ ದೇಶಗಳಿಂದ ಸುಮಾರು 15 ವಿಶೇಷ ವಿಮಾನಗಳಲ್ಲಿ ಆಟಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಿತ 1,200 ಮಂದಿ ಮೆಲ್ಬೋರ್ನ್‌ಗೆ ಆಗಮಿಸಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.

    ಶಾರ್ದೂಲ್ ಸುಂದರ ಬ್ಯಾಟಿಂಗ್, ಬ್ರಿಸ್ಬೇನ್‌ನಲ್ಲಿ ಭಾರತ ದಿಟ್ಟ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts