More

    ಇಲಿ ಹಿಡಿಯುವವರು ಬೇಕಾಗಿದ್ದಾರೆ… ವಾರ್ಷಿಕ ವೇತನ 1.38 ಕೋಟಿ ರೂ.!

    ನ್ಯೂಯಾರ್ಕ್​​: ನಗರದಲ್ಲಿರುವ ಇಲಿಗಳಿಗೆ ಚಿಂತೆಯಾಗಿದೆ! ಇದಕ್ಕೆ ಕಾರಣ ನಗರದ ಮೇಯರ್​ ಎರಿಕ್ ಆಡಮ್ಸ್ ಹೊರಡಿಸಿರುವ ಹೊಸ ಆದೇಶದ ಜಾಹೀರಾತು. ನಮ್ಮ ನ್ಯೂಯಾರ್ಕ್​ ನಗರದ ನಿಜವಾದ ಶತ್ರು ಇಲಿಗಳು. ಇದರ ವಿರುದ್ಧ ನಾವೀಗ ಹೋರಾಡಬೇಕಿದೆ. ಇದಕ್ಕಾಗಿ ಇಲಿಗಳನ್ನು ಹಿಡಿಯುವ ಸೂಕ್ತ ಅಭ್ಯರ್ಥಿಗಳ ನೇಮಕ ಮಾಡಲಾಗುವುದು. ಇವರಿಗೆ ವಾರ್ಷಿಕ ವೇತನ 1.38 ಕೋಟಿ ರೂ (USD 1,70,000) ನೀಡಲಾಗುವುದು ಎಂದು ಜಾಹೀರಾತು ನೀಡಲಾಗಿದೆ.

    ಆಯ್ಕೆಯಾದ ಅಭ್ಯರ್ಥಿಗಳು ದಿನದ 24 ಗಂಟೆಯೂ, ವಾರದ 7 ದಿನವೂ ಕೆಲಸ ನಿರ್ವಹಿಸಬೇಕು. ನಗರದ ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ, ಉತ್ಸಾಹದಿಂದ ಸಮಾಜದ ಕಡೆಗೆ ಸಕಾರಾತ್ಮಕ ದೃಷ್ಟಿಕೋನದಿಂದ ಕೆಲಸ ಮಾಡಬೇಕು. ಇದರಿಂದ 80 ಲಕ್ಷ ನಗರ ನಿವಾಸಿಗಳು ಇಲಿಗಳ ಉಪಟಳದಿಂದ ಪಾರಾಗಬಹುದು ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

    ಇಲಿಗಳ ಕಾಟದಿಂದ ಪಾರಾಗಲು ಈ ಹಿಂದೆಯೂ ಅನೇಕ ಕ್ರಮಗಳನ್ನು ವಹಿಸಲಾಗಿದೆ. ಆದರೆ ಬೀದಿ ಬದಿ ವ್ಯಾಪಾರ, ಕಸದ ಸಮಸ್ಯೆ, ಜನರ ಬೇಜವಾಬ್ದಾರಿ ತನದಿಂದ ಇಲಿಗಳ ಸಮಸ್ಯೆಯಿಂದ ಪಾರಾಗಲು ಸಾಧ್ಯವಾಗಿಲ್ಲ. ಇದಕ್ಕಾಗಿ ಇಲಿ ಹಿಡಿಯಲು ಜನರನ್ನು ನೇಮಿಸಲು ಪಾಲಿಕೆ ಮುಂದಾಗಿದೆ ಎಂದು ವರದಿಯಾಗಿದೆ.

    2019ನೇ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಇಲಿಗಳ ಕಾಟ ಇದೆ ಎಂದು ಬಂದ ದೂರು 67% ಹೆಚ್ಚಿದೆ. ಅಂಕಿ-ಅಂಶಗಳ ಪ್ರಕಾರ ನ್ಯೂಯಾರ್ಕ್​ ನಗರದಲ್ಲಿ 20ಲಕ್ಷಕ್ಕೂ ಅಧಿಕ ಇಲಿಗಳು ಇವೆ. ವರದಿಯ ಪ್ರಕಾರ ನ್ಯೂಯಾರ್ಕ್​ ವಿಶ್ವದಲ್ಲಿಯೇ ಅತೀ ಹೆಚ್ಚು ಇಲಿಗಳು ಇರುವ ನಗರವೆಂದು ಕರೆಸಿಕೊಳ್ಳುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts