More

    ಗಾಲೆಯಲ್ಲಿ ಲಂಕಾ ಪ್ರತಿರೋಧದ ನಡುವೆ ಗೆಲುವಿನ ಸನಿಹ ಇಂಗ್ಲೆಂಡ್

    ಗಾಲೆ: ಆರಂಭಿಕ ಲಹಿರು ತಿರಿಮನ್ನೆ (111 ರನ್, 251 ಎಸೆತ, 12 ಬೌಂಡರಿ) ಶತಕದ ಪ್ರತಿರೋಧದ ನಡುವೆಯೂ ಪ್ರವಾಸಿ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವಿನತ್ತ ಮುನ್ನಡೆದಿದೆ.

    ಭಾನುವಾರ 2 ವಿಕೆಟ್‌ಗೆ 156 ರನ್‌ಗಳಿಂದ 4ನೇ ದಿನದಾಟ ಆರಂಭಿಸಿದ ಲಂಕಾ, ಚಹಾ ವಿರಾಮದ ಬಳಿಕ 359 ರನ್‌ಗೆ ಆಲೌಟ್ ಆಯಿತು. ಇದರಿಂದ ಗೆಲುವಿಗೆ 74 ರನ್ ಸವಾಲು ಪಡೆದ ಇಂಗ್ಲೆಂಡ್ ತಂಡ ಆರಂಭಿಕ ಆಘಾತದ ನಡುವೆ ದಿನದಂತ್ಯಕ್ಕೆ 3 ವಿಕೆಟ್‌ಗೆ 38 ರನ್ ಗಳಿಸಿದೆ. ಅಂತಿಮ ದಿನದಾಟದಲ್ಲಿ ಗೆಲುವಿಗೆ ಇನ್ನೂ 36 ರನ್ ಗಳಿಸಬೇಕಿದೆ. ಜಾನಿ ಬೇರ್‌ಸ್ಟೋ (11*) ಮತ್ತು ಡ್ಯಾನ್ ಲಾರೆನ್ಸ್ (7*) ಕ್ರೀಸ್‌ನಲ್ಲಿದ್ದಾರೆ.

    ಇದನ್ನೂ ಓದಿ: ಶಾರ್ದೂಲ್ ಸುಂದರ ಬ್ಯಾಟಿಂಗ್, ಬ್ರಿಸ್ಬೇನ್‌ನಲ್ಲಿ ಭಾರತ ದಿಟ್ಟ ಹೋರಾಟ

    ಇದಕ್ಕೆ ಮುನ್ನ 76 ರನ್‌ನಿಂದ ದಿನದಾಟ ಮುಂದುವರಿಸಿದ ಲಹಿರು ತಿರಿಮನ್ನೆ ಆಂಗ್ಲರಿಗೆ ದಿಟ್ಟ ಪ್ರತಿರೋಧ ಒಡ್ಡಿದರು. ಈ ಮೂಲಕ ಲಂಕಾ ತಂಡವನ್ನು ಇನಿಂಗ್ಸ್ ಸೋಲಿನ ಭೀತಿಯಿಂದ ಪಾರು ಮಾಡಿದರು. ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ (71) ಕೂಡ ಆಂಗ್ಲರು ನಾಲ್ಕನೇ ದಿನವೇ ಗೆಲುವು ಒಲಿಸಿಕೊಳ್ಳುವುದನ್ನು ತಪ್ಪಿಸಿದರು. ಎಡಗೈ ಸ್ಪಿನ್ನರ್ ಜಾಕ್ ಲೀಚ್ (122ಕ್ಕೆ 5) ಲಂಕಾದ ಕೆಳ ಸರದಿಗೆ ಕಡಿವಾಣ ಹಾಕಿದರು.

    ಲಹಿರು ತಿರಿಮನ್ನೆ ಟೆಸ್ಟ್ ಕ್ರಿಕೆಟ್‌ನಲ್ಲಿ 8 ವರ್ಷಗಳ ಬಳಿಕ ಶತಕ ಸಿಡಿಸಿದರು. 2013ರಲ್ಲಿ ಬಾಂಗ್ಲಾದೇಶ ವಿರುದ್ಧ ಇದೇ ತಾಣದಲ್ಲಿ ಅವರ ಕೊನೆಯ ಶತಕ ಬಾಂಗ್ಲಾದೇಶ ವಿರುದ್ಧ ಬಂದಿತ್ತು. ಇದೀಗ 54 ಇನಿಂಗ್ಸ್‌ಗಳ ಬಳಿಕ ಅವರು ಶತಕ ಸಿಡಿಸಿದ್ದಾರೆ.

    ಶ್ರೀಲಂಕಾ: 135 ಮತ್ತು 136.5 ಓವರ್‌ಗಳಲ್ಲಿ 359 (ಲಹಿರು ತಿರಿಮನ್ನೆ 111, ಮ್ಯಾಥ್ಯೂಸ್ 71, ಡಿಕ್‌ವೆಲ್ಲಾ 29, ದಿಲ್ರುವಾನ್ 24, ಜಾಕ್ ಲೀಚ್ 122ಕ್ಕೆ 5, ಬೆಸ್ 100ಕ್ಕೆ 3, ಸ್ಯಾಮ್ ಕರ‌್ರನ್ 37ಕ್ಕೆ 2), ಇಂಗ್ಲೆಂಡ್: 421 ಮತ್ತು 15 ಓವರ್‌ಗಳಲ್ಲಿ 3 ವಿಕೆಟ್‌ಗೆ 38 (ಕ್ರೌಲಿ 8, ಸಿಬ್ಲೆ 2, ರೂಟ್ 1, ಬೇರ್‌ಸ್ಟೋ 11*, ಲಾರೆನ್ಸ್ 7*, ಎಂಬುಲ್ಡೆನಿಯಾ 13ಕ್ಕೆ 2).

    ಐಪಿಎಲ್ ಹರಾಜಿಗಾಗಿ ಆಟಗಾರರ ನೋಂದಣಿಗೆ ಗಡುವು ನಿಗದಿಪಡಿಸಿದ ಬಿಸಿಸಿಐ

    ಪಾಕಿಸ್ತಾನಕ್ಕೆ ರಾಹುಲ್ ದ್ರಾವಿಡ್ ಮಾದರಿಯಾಗಲಿ ಎಂದು ಅಫ್ರಿದಿ ಹೇಳಿದ್ದೇಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts