ದಿನಾಂಕ ಅದೇ … ಬಿಡುಗಡೆಯಾಗುತ್ತಿರುವ ಚಿತ್ರ ಮಾತ್ರ ಬೇರೆ …

blank

ಹೈದರಾಬಾದ್​: ಕರೊನಾ ಎರಡನೇ ಅಲೆಯಿಂದಾಗಿ ಎಲ್ಲ ಭಾಷೆಯ ಚಿತ್ರರಂಗಗಳಲ್ಲೂ ಗೊಂದಲ ಏರ್ಪಟ್ಟಿದೆ. ಈ ವರ್ಷ ಕೆಲವು ದೊಡ್ಡ ಬಜೆಟ್​ನ ಮತ್ತು ಪ್ಯಾನ್​ ಇಂಡಿಯಾ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದ್ದವು. ಆದರೆ, ಇದೀಗ ಲಾಕ್​​ಡೌನ್​ ಮತ್ತು ಚಿತ್ರಪ್ರದರ್ಶನ ರದ್ದಾದ ಹಿನ್ನೆಲೆಯಲ್ಲಿ ಎಲ್ಲ ಚಿತ್ರಗಳ ಬಿಡುಗಡೆ ದಿನಾಂಕದಲ್ಲಿ ಗೊಂದಲ ಏರ್ಪಟ್ಟಿದೆ.

ಇದನ್ನೂ ಓದಿ: ಅಮೆಜಾನ್​ ಪ್ರೈಂನಲ್ಲಿ ಪವರ್​ ಪ್ಲೇ; ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆರಂಭಿಸಿದ ಚಿತ್ರ

ಪ್ರಮುಖವಾಗಿ, ತೆಲುಗು ಚಿತ್ರರಂಗದಲ್ಲಿ ಮೂರು ಪ್ಯಾನ್​ ಇಂಡಿಯಾ ಸಿನಿಮಾಗಳು ಈ ವರ್ಷ ಬಿಡುಗಡೆಯಾಗಬೇಕಿತ್ತು. ಪ್ರಭಾಸ್​ ಅಭಿನಯದ ರಾಧೇ ಶ್ಯಾಮ್​, ಅಲ್ಲು ಅರ್ಜುನ್​ ಅಭಿನಯದ ಪುಷ್ಪಾ ಮತ್ತು ರಾಜಮೌಳಿ ನಿರ್ದೇಶನದ ಆರ್​ಆರ್​ಆರ್ ಚಿತ್ರಗಳು ಬಿಡುಗಡೆಯಾಗಬೇಕಿತ್ತು.

ಈ ಪೈಕಿ, ಪುಷ್ಪಾ ಚಿತ್ರವು ಆಗಸ್ಟ್​ 13ಕ್ಕೆ ಬಿಡುಗಡೆಯಾಗಬೇಕಿದ್ದರೆ, ಆರ್​ಆರ್​ಆರ್​ ಚಿತ್ರವು ಅಕ್ಟೋಬರ್​ 13ಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಲಾಕ್​ಡೌನ್​ನಿಂದಾಗಿ ಚಿತ್ರಗಳ ಬಿಡುಗಡೆಯಲ್ಲಿ ಏರುಪೇರಾಗಿದ್ದು, ಪುಷ್ಪಾ ಚಿತ್ರವು ಅಕ್ಟೋಬರ್​ 13ಕ್ಕೆ ಬಿಡುಗಡೆಯಾದರೆ, ಆರ್​ಆರ್​ಆರ್ ಚಿತ್ರವು 2022ರ ಸಂಕ್ರಾಂತಿ ಹೊತ್ತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸೆನ್ಸಾರ್ ಅನುಮತಿ ಕೊಟ್ಟರೂ, ಸ್ವಯಂಪ್ರೇರಿತವಾಗಿ 21 ಕಟ್ ಮಾಡಿದ `ರಾಧೆ’ ಚಿತ್ರತಂಡ

ಈ ಮಧ್ಯೆ, ಪುಷ್ಪಾ ಚಿತ್ರವನ್ನು ಬಾಹುಬಲಿ ಮತ್ತು ಕೆಜಿಎಫ್​ ಚಿತ್ರಗಳ ತರಹ ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ, ಮೊದಲ ಭಾಗಕ್ಕೆ ಇನ್ನೂ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದ್ದು, ಲಾಕ್​ಡೌನ್​ ಮುಗಿದ ಮೇಲೆ ಚಿತ್ರೀಕರಣ ಮುಗಿಸಿ ಅಕ್ಟೋಬರ್​ 13ಕ್ಕೆ ಬಿಡುಗಡೆ ಮಾಡಲಾಗುತ್ತದಂತೆ. ಇನ್ನು, ಎರಡನೆಯ ಭಾಗದ ಚಿತ್ರೀಕರಣವನ್ನು ಈ ವರ್ಷದ ಕೊನೆಯಲ್ಲಿ ಪ್ರಾರಂಭಿಸಿ, ಮುಂದಿನ ವರ್ಷದ ಕೊನೆಗೆ ಬಿಡುಗಡೆ ಮಾಡಬೇಕು ಎಂದು ಚಿತ್ರತಂಡವೇನೋ ಸ್ಕೆಚ್​ ಹಾಕಿದೆ. ಯಾರಿಗೆ ಗೊತ್ತು, ಈ ಪ್ಲಾನ್​ನಲ್ಲಿ ಏನೇನು ಬದಲಾವಣೆ ಆಗುತ್ತದೆ ಎಂದು.

ಪ್ರಿಯಾಂಕಾ ಚೋಪ್ರಾ ಬೆನ್ನ ಹಿಂದಿದ್ದಾಳೆ ಮಹಾಕಾಳಿ; ವಿಶೇಷ ವಿನ್ಯಾಸದ ದಿರಿಸು ತೊಟ್ಟ ಪಿಗ್ಗಿ

 

Share This Article

ಶ್ರಾವಣ ಮಾಸದಲ್ಲಿ ಮನೆಯ ಈ ದಿಕ್ಕಿನಲ್ಲಿ ದೀಪ ಬೆಳಗಿಸಿದರೆ ಸಂಪತ್ತು, ಸಮೃದ್ಧಿ ಹೆಚ್ಚುತ್ತದೆ..! Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾದ ಮಾಸ. ಈ ತಿಂಗಳಲ್ಲಿ ಪೂಜೆ, ಉಪವಾಸ ಮತ್ತು ಧ್ಯಾನಕ್ಕೆ…

ಕುಂಬಳಕಾಯಿ ಬೀಜದ ಪ್ರಯೋಜನಗಳೇನು? ಇದು ‘ಹೃದಯ’ಕ್ಕೆ ಉತ್ತಮ, ಇಲ್ಲಿದೆ ಉಪಯುಕ್ತ ಮಾಹಿತಿ | Pumpkin Seeds

Pumpkin Seeds: ಸಾಮಾನ್ಯವಾಗಿ ಕುಂಬಳಕಾಯಿಯಲ್ಲಿ ಹಲವಾರು ರೀತಿಯ ಅಡುಗೆಗಳನ್ನು ತಯಾರಿಸಲಾಗುತ್ತದೆ. ಕೆಲವರು ಕುಂಬಳಕಾರಿ ಚಟ್ನಿ, ಸಾರು,…