More

    ಏಡ್ಸ್ ಜಾಗೃತಿಗಾಗಿ ತೊಗಲುಗೊಂಬೆಯಾಟ

    ಚಿಕ್ಕಮಗಳೂರು: ಜೈಲಿನಲ್ಲಿರುವ ಬಂಧಿಗಳಿಗೆ ಎಚ್‌ಐವಿ, ಏಡ್ಸ್ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ತೊಗಲುಗೊಂಬೆ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ ತಿಳಿಸಿದರು.

    ನಗರದ ಜೈಲು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ರೇಣುಕಾಮಾತ ತೊಗಲುಗೊಂಬೆ ಕಲಾತಂಡದ ಪ್ರದರ್ಶನಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
    ಕೈದಿಗಳಿಗೆ ವಿವಿಧ ವಿಷಯಗಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಹಲವು ಅರಿವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದೀಗ ತೊಗಲುಗೊಂಬೆ ನಾಟಕ ಪ್ರದರ್ಶನದ ಮೂಲಕ ಏಡ್ಸ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಒಂದು ತಾಸು ನಡೆದ ಕಲಾತಂಡಗಳ ನಾಟಕ ಪ್ರದರ್ಶನ ಅತ್ಯುತ್ತಮವಾಗಿತ್ತು. ಬಹುತೇಕ ಕೈದಿಗಳು ನಾಟಕ ಪ್ರದರ್ಶನದಲ್ಲಿ ಕಂಡು ಬಂದ ಹಾಸ್ಯ ಸನ್ನಿವೇಶಗಳಿಗೆ ಸಂತೋಷಪಟ್ಟರು.
    ಕಾರಾಗೃಹ ಸಹಾಯಕ ಜೈಲರ್ ಎಂ.ಕೆ.ನೆಲಧರಿ, ತೊಗಲುಗೊಂಬೆ ಪ್ರದರ್ಶನಕಾರರಾದ ದೇವರಾಜು, ಶೋಭಾ, ಎ.ಡಿ.ಯಶವಂತ್, ಎ.ಡಿ.ಗಗನ, ಕಾರಾಗೃಹ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts