More

    ಚುಟುಕುಗಳಿಗಿದೆ ಸಮಾಜ ಕಟ್ಟುವ ಶಕ್ತಿ

    ಕುಮಟಾ: ಬುದ್ಧಿಮತ್ತೆಗಾಗಿ ಪುಸ್ತಕ ಓದು ಎಲ್ಲರಿಗೂ ಬೇಕು. ರಾಮಾಯಣ, ಮಹಾಭಾರತದಂತಹ ಮಹಾನ್ ಗ್ರಂಥಗಳು ಬುದ್ಧಿಯನ್ನು ಸಂಸ್ಕಾರಗೊಳಿಸುತ್ತವೆ. ಚುಟುಕುಗಳಿಗೆ ಸಮಾಜ ಕಟ್ಟುವ ಶಕ್ತಿ ಇದೆ ಎಂದು ಶಿರಸಿಯ ಅನಂತಮೂರ್ತಿ ಹೆಗಡೆ ಟ್ರಸ್ಟಿನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.

    ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಭಾನುವಾರ ನಡೆದ ತಾಲೂಕು ಮೂರನೇ ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಮಾತನಾಡಿದರು. ಚುಟುಕುಗಳು ಸುಭಾಷಿತಗಳಿದ್ದಂತೆ, ಒಂದಿಡೀ ಪುಸ್ತಕದ ಸಾರವಾಗಿ ಓದುಗನ ಎದುರಿಗೆ ನಿಲ್ಲುತ್ತವೆ. ವ್ಯಂಗ್ಯ ಚಿತ್ರಣಗಳಂತೆಯೇ ಅತ್ಯಂತ ಪರಿಣಾಮಕಾರಿ ಸಾಹಿತ್ಯಿಕ ಪ್ರಕಾರವಾಗಿದೆ ಎಂದರು. ಬಳಿಕ ‘ಕುಮಟಾ ಮುಕುಟ’ ಎಂಬ ಕೃತಿ ಲೋಕಾರ್ಪಣೆಗೊಳಿಸಿದರು.

    ಸಮ್ಮೇಳನಾಧ್ಯಕ್ಷ ಬೀರಣ್ಣ ನಾಯಕ ಮಾತನಾಡಿ, ಡಿಜಿಟಲ್ ಮಾಧ್ಯಮಗಳು ಇತ್ತೀಚೆಗೆ ಏಕತಾನತೆ ಎದುರಿಸುತ್ತಿರುವ ಸಂದರ್ಭದಲ್ಲಿ ಚುಟುಕು ಸಾಹಿತ್ಯವೂ ಸೇರಿ ಎಲ್ಲ ಸಾಹಿತ್ಯ ಪ್ರಕಾರಗಳು ಪುನಃ ವಿಜೃಂಭಿಸಿ ಓದುಗರನ್ನು ಕಟ್ಟಿ ಬೆಳೆಸುವತ್ತ ಗಮನ ಕೇಂದ್ರೀಕರಿಸಬೇಕಿದೆ. ಚುಟುಕುಗಳು ಸಮಾಜದ ಪ್ರಗತಿಗೆ ಪೂರಕವಾಗಿ, ಪ್ರೇರಣೆಯಾಗಿ ಹೆಚ್ಚು ಹೊರಹೊಮ್ಮಬೇಕಿದೆ. ಎಲ್ಲೆಡೆ ಜಾತಿ-ಧರ್ಮಗಳನ್ನು ಮೀರಿ ಸಾಹಿತ್ಯ ಬೆಳೆಯಬೇಕು. ಉತ್ತರ ಕನ್ನಡ ಜಿಲ್ಲೆಯ ಆಗು-ಹೋಗುಗಳಿಗೆ, ಬೇಕು-ಬೇಡಗಳಿಗೆ ಸಾಹಿತ್ಯ ಲೋಕದಿಂದ ಅಮೂಲ್ಯ ಕೊಡುಗೆಗಳು ಒಡಮೂಡುವಂತಾಗಬೇಕು ಎಂದರು.

    ಸಮ್ಮೇಳನಾಧ್ಯಕ್ಷ ಬೀರಣ್ಣ ನಾಯಕ, ರವೀಂದ್ರ ಭಟ್ ಸೂರಿ, ರಾಘವೇಂದ್ರ ಲಕ್ಷ್ಮೇಶ್ವರ ಅವರನ್ನು ಸನ್ಮಾನಿಸಲಾಯಿತು. ವಸಂತರಾವ್, ಉದಯ ಮಡಿವಾಳ, ಜಟ್ಟಿ ಮಡಿವಾಳ, ಎಫ್.ಎಸ್. ನರೋನ್ಹಾ, ವಸಂತ ಅಡಿಗುಂಡಿ, ಇಂದಿರಾ ಅಡಿಗುಂಡಿ, ಅಶೋಕ ಮಡಿವಾಳ, ಸತೀಶ ಚಂದಾವರಕರ ಇತರರನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಜಿ.ಯು. ನಾಯಕ, ರೋಟರಿ ಅಧ್ಯಕ್ಷ ಎನ್.ಆರ್. ಗಜು, ಬಿಇಒ ರಾಜೇಂದ್ರ ಭಟ್, ತಾಲೂಕಾಧ್ಯಕ್ಷ ಗಣಪತಿ ಅಡಿಗುಂಡಿ, ಉದ್ಯಮಿ ಮಂಜುನಾಥ ಭಟ್ ಸುವರ್ಣಗದ್ದೆ, ಇತರರು ಇದ್ದರು.

    ಬಳಿಕ ಚುಟುಕು ಗೋಷ್ಠಿ, ಸಮ್ಮೇಳನಾಧ್ಯಕ್ಷರ ಬದುಕು-ಬರಹ ಗೋಷ್ಠಿ, ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಚುಟುಕು ವಾಚನ ಸ್ಪರ್ಧೆ, ಸ್ಪೂರ್ತಿ ಕಲಾತಂಡದಿಂದ ಗೀತಗಾನ, ಕಾವ್ಯ ಕುಂಚ ಪ್ರದರ್ಶನ, ನಾದಶ್ರೀ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಹಾಗೂ ಸಮ್ಮೇಳನದ ಸಮಾರೋಪ ಜರುಗಿತು.

    ಕಾರ್ಯದರ್ಶಿ ಉದಯ ಮಡಿವಾಳ, ಎಂ.ಎನ್ ಭಟ್ಟ ವಾಲಗಳ್ಳಿ, ದೇವಿದಾಸ ಎಂ.ಮಡಿವಾಳ, ಪ್ರಕಾಶ ಮಡಿವಾಳ, ನಾಗೇಶ ಎಂ. ನಾಯ್ಕ, ಸಂತೋಷ ಅಡಿಗುಂಡಿ, ಗೋಪಾಲಕೃಷ್ಣ ನಾಯ್ಕ, ಗಜಾನನ ಅಂಬಿಗ ಇತರರು ಇದ್ದರು. ರಾಮಚಂದ್ರ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts