More

    ಸಾವಿರ ಹಾಸಿಗೆಗಳ ಐಸೋಲೇಷನ್​ ಕೇಂದ್ರವಾಗಿ ಪರಿವರ್ತನೆಗೊಂಡ ಪಂಜಾಬ್​​ನ ವಸತಿ ಶಾಲೆ…

    ಕೋವಿಡ್​- 19 ರೋಗಿಗಳಿಗಾಗಿ ನೂತನ ತಂತ್ರಜ್ಞಾನದೊಂದಿಗೆ ಪಂಜಾಬ್​ನ ಅಮೃತಸರದ ವಸತಿ ಶಾಲೆಯೊಂದನ್ನು 1,000 ಹಾಸಿಗೆಗಳ ಐಸೋಲೇಷನ್​ ಕೇಂದ್ರವನ್ನಾಗಿ ಪರಿವತಿರ್ಸಲಾಗಿದ್ದು, ಇದು ರಾಜ್ಯದಲ್ಲೇ ಮೊದಲನೆಯದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲಕ್ಷಣ ರಹಿತ ರೋಗಿಗಳಿಗೆ ಮತ್ತು ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿದವರಿಗೆ ಐಸೋಲೇಷನ್​ ಮುಖ್ಯವಾಗಿದ್ದು, ಪ್ರತಿಷ್ಠಿತ ಶಾಲೆಯಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗಿದೆ ಎಂದು ರಾಜ್ಯಾದ್ಯಂತ ಕೊರೊನಾ ವೈರಸ್​ ಪ್ರಕರಣಗಳ ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿಕೊಂಡಿರುವ ವಿಶೇಷ ಮುಖ್ಯ ಕಾರ್ಯದರ್ಶಿ ಕೆಬಿಎಸ್​ ಸಿಧು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

    ಲುಧಿಯಾನ, ಜಲಂಧರ್​ ಹಾಗೂ ಮೊಹಾಲಿ ನಗರಗಳಲ್ಲಿ ಇಂಥ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಜನರ ನಡುವಿನ ಸಂಪರ್ಕವನ್ನು ಕಡಿಮೆಗೊಳಿಸಲು ಸ್ಥಳಿಯವಾಗಿ ನೂತನ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

    ವಾರ್ಡ್​ಗಳಲ್ಲಿನ ರೋಗಿಗಳಿಗೆ ನೀರು, ಆಹಾರ ಔಷಧಿ ಇತ್ಯಾದಿ ಪೂರೈಸಲು ರಿಮೋಟ್​ ಆಧಾರಿತ ಸಾಧನಗಳಿರುತ್ತವೆ ಎಂದು ತಿಳಿಸಿದರು,

    10 ಪ್ರತಿಷ್ಠಿತ ಶಾಲೆಗಳಲ್ಲಿನ ಹಾಸ್ಟೆಲ್​ಗಳನ್ನು ರಾಜ್ಯ ಶಿಕ್ಷಣ ಇಲಾಖೆ ಕೋವಿಡ್​ ರೋಗಿಗಳ ಆರೈಕೆಗೆ ಐಸೋಲೇಷನ್​ ಕೇಂದ್ರಗಳನ್ನು ನಿಮಿರ್ಸಲು ನೀಡಿದೆ. ಇಲ್ಲಿ 8346 ಹಾಸಿಗೆ ಅಳವಡಿಸಲು ಅವಕಾಶವಿದೆ.
    200 ಕ್ಲಾಸ್​ರೂಮ್​ಗಳನ್ನು ಆರೋಗ್ಯ ಸಿಬ್ಬಂದಿ ಬಳಕೆಗಾಗಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಮೃತ್​ಸರ್​ದಲ್ಲಿರುವ ಕೋವಿಡ್​ -19 ರೋಗಿಗಳ ಆರೈಕೆ ಕೇಂದ್ರವು ಏಪ್ರಿಲ್​ 30ರಂದು ಕಾರ್ಯಾರಂಭ ಮಾಡಬೇಕಿತ್ತು. ಆದರೆ ಗಡುವಿನ ಮೊದಲೇ ಕಾರ್ಯನಿರ್ವಹಿಸಲಿದೆ ಹಾಗೂ ಕೇಂದ್ರದಲ್ಲಿ ಸಮಾಲೋಚನೆ ಹಾಗೂ ಲಾಂಡ್ರಿ ಕೇಂದ್ರಗಳು ಇರಲಿವೆ, ಕೇಂದ್ರದ ಹೊರಗಿನ ಭದ್ರತೆಯನ್ನು ರಾಜ್ಯ ಪೊಲೀಸ್​ ಇಲಾಖೆ ಒದಗಿಸಲಿದೆ ಎಂದು ಉಪ ಆಯುಕ್ತ ಶಿವ್​ದುಲರ್​ ಸಿಂಗ್​ ಧಿಲ್ಲೋನ್​ ತಿಳಿಸಿದ್ದಾರೆ.

    ಅಮೃತ್​ಸರ್​ದ 14 ವ್ಯಕ್ತಿಗಳಿಗೆ ಕೊರೊನಾ ವೈರಸ್​ ಇರುವುದು ಪತ್ತೆಯಾಗಿದ್ದು, ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ. ಅಮೃತಸರದಲ್ಲಿ ಪ್ರಸ್ತುತ 7 ಪ್ರಕರಣಗಳಿವೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts