More

    ಹೆಂಡತಿ, ಅತ್ತೆ, ಮೈದುನನ ಹೆಂಡತಿಯನ್ನೇ ಕೊಂದ ಪೊಲೀಸ್​ ಕಾನ್ಸ್​ಟೆಬಲ್​: ಇಲಾಖೆ ಕೊಟ್ಟ ಗನ್​ನಿಂದಲೇ ಕೊಲೆ

    ಮೊಗಾ: ಪೊಲೀಸ್​ ಕಾನ್ಸ್​ಟೆಬಲ್​ ತನ್ನ ಹೆಂಡತಿ, ಅತ್ತೆ ಮತ್ತು ಮೈದುನನ ಹೆಂಡತಿಯನ್ನೇ ಕೊಂದಿರುವ ಘಟನೆ ಪಂಜಾಬ್​ನ ಮೊಗಾ ಜಿಲ್ಲೆಯ ಧರಂಕೋಟ್​ನಲ್ಲಿ ನಡೆದಿದೆ. ಪೊಲೀಸ್​ ಇಲಾಖೆ ಕೊಟ್ಟ ಎಕೆ47 ಗನ್​ನಿಂದಲೇ ಆತ ಈ ಕೊಲೆಯನ್ನು ಮಾಡಿದ್ದಾನೆ ಎನ್ನಲಾಗಿದೆ.

    ಪಂಜಾಬ್​ನ ಪೊಲೀಸ್​ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕುಲವಿಂದರ್​ ಸಿಂಗ್​ಗೆ ತನ್ನ ಹೆಂಡತಿ ರಜ್ವಿಂದರ್​ ಕೌರ್​ ಕುಟುಂಬದೊಂದಿಗೆ ಆಸ್ತಿಯ ವಿಚಾರದಲ್ಲಿ ಆಗಾಗ ಜಗಳ ನಡೆಯುತ್ತಿರುತ್ತಿತ್ತು. ಶನಿವಾರ ಸಂಜೆ ಗಂಡ ಹೆಂಡತಿ ಇಬ್ಬರೂ ರಜ್ವಿಂದರ್​ ಕೌರ್​ ಮನೆಗೆ ಹೋಗಿದ್ದಾರೆ. ರಾತ್ರಿ ಕುಡಿದು ಬಂದ ಕುಲವಿಂದರ್​ ಆಸ್ತಿಯ ವಿಚಾರದಲ್ಲಿ ಜಗಳ ಆರಂಭಿಸಿದ್ದಾನೆ. ಜಗಳ ತಾರಕ್ಕೇರಿದ್ದು ಸಿಟ್ಟಿನಿಂದ ತನಗೆ ಇಲಾಖೆ ಕೊಟ್ಟಿದ್ದ ಎಕೆ47 ಗನ್​ನಿಂದಲೇ ಹೆಂಡತಿ, ಆಕೆಯ ತಾಯಿ ಮತ್ತು ಹೆಂಡತಿಯ ಸಹೋದರನ ಹೆಂಡತಿಯ ಮೇಲೆ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ಆತನ ಮೈದುನನ ಮಗಳಿಗೂ ಸಹ ಗಾಯಗಳಾಗಿದ್ದು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

    ಕುಲ್​ವಿಂದರ್​ ಸಿಂಗ್​ನ ವಿರುದ್ಧ ದೂರು ದಾಖಲಾಗಿದ್ದು, ಧರಂಕೋಟ್​ ಪೊಲೀಸರು ಆತನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts