More

    ಪುನೀತ್ ಇಲ್ಲದ ಒಂದು ವರ್ಷ; ಸಾವಿರಾರು ಅಭಿಮಾನಿಗಳಿಂದ ಸಮಾಧಿ ದರ್ಶನ

    ಬೆಂಗಳೂರು: ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ (ಅ.29) ಒಂದು ವರ್ಷ. ಮೊದಲನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಪುಣ್ಯಭೂಮಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಭೇಟಿ ಕೊಡುತ್ತಿದ್ದಾರೆ.

    ಇದನ್ನೂ ಓದಿ: ‘ನೀವು ಒಂದ್ ಸಲ ಹೊಗಳಿದ್ರೆ …’; ರಜನಿಕಾಂತ್​ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಭ್​

    ಪುನೀತ್ ಇಲ್ಲದ ಒಂದು ವರ್ಷ; ಸಾವಿರಾರು ಅಭಿಮಾನಿಗಳಿಂದ ಸಮಾಧಿ ದರ್ಶನಕಳೆದ ವರ್ಷ ಅ. 29ರಂದು ತೀವ್ರ ಹೃದಯಾಘಾತದಿಂದ ಪುನೀತ್​ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗಿತ್ತು. ಈ ಪುಣ್ಯಭೂಮಿಗೆ ಅಲ್ಲಿಂದ ಇಲ್ಲಿಯವರೆಗೂ ಲಕ್ಷಾಂತರ ಜನ ಭೇಟಿ ನೀಡಿದ್ದು, ಇಂದು ಪುಣ್ಯ ಸ್ಮರಣೆ ಅಂಗವಾಗಿ ನಿನ್ನೆ ರಾತ್ರಿಯಿಂದಲೇ ಸಾವಿರಾರು ಜನರು ಬರುತ್ತಿದ್ದಾರೆ. ರಾತ್ರಿ ಇಡೀ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.

    ಇನ್ನು, ಇಂದು ಬೆಳಿಗ್ಗೆಯೇ ಪುನೀತ್​ ಅವರ ಕುಟುಂಬಸ್ಥರು ಮತ್ತು ಆಪ್ತರು ಪುನೀತ್ ಪುಣ್ಯಭೂಮಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪುನೀತ್​ ಅವರ ಪತ್ನಿ ಅಶ್ವಿನಿ, ಸಹೋದರರಾದ ಶಿವರಾಜಕುಮಾರ್​, ರಾಘವೇಂದ್ರ ರಾಜಕುಮಾರ್​, ಧನ್ಯಾ ರಾಮ್ ಕುಮಾರ್, ಅಮೋಘವರ್ಷ, ಯುವ ರಾಜಕುಮಾರ್​, ವಿನಯ್​ ರಾಜಕುಮಾರ್​ ಸೇರಿದಂತೆ ಹಲವರು ಇದ್ದರು.

    ಪುನೀತ್​ ಅವರ ಸಮಾಧಿಗೆ ಪ್ರದಕ್ಷಿಣೆ ಹಾಕುವ ವೇಳೆ ಅಶ್ವಿನಿ ಮತ್ತು ಕುಟುಂಬದವರು ಭಾವುಕರಾಗಿ ಕಣ್ಣೀರು ಹಾಕಿದರು. ಆ ನಂತರ ಸಾವಿರಾರು ಸಂಖ್ಯೆಯಲ್ಲಿ ಕಾದಿದ್ದ ಅಭಿಮಾನಿಗಳಿಗೆ ಅಶ್ವಿನಿ ಅವರಿಂದ ಅನ್ನ ಸಂತರ್ಪಣೆಗೆ ಚಾಲನೆ ನೀಡಲಾಯಿತು.

    ಇದನ್ನೂ ಓದಿ: ‘ವರಾಹ ರೂಪಂ’ ಹಾಡನ್ನು ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ಕೋರ್ಟ್​ ಆದೇಶ

    ಪುನೀತ್ ಇಲ್ಲದ ಒಂದು ವರ್ಷ; ಸಾವಿರಾರು ಅಭಿಮಾನಿಗಳಿಂದ ಸಮಾಧಿ ದರ್ಶನಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಏರಿದ ರಾಘವೇಂದ್ರ ರಾಜಕುಮಾರ್, ಮನೋಜವಂ ಆತ್ರೇಯ ಹಾಡಿದ ‘ಎಲ್ಲಿ ಮರೆಯಾದೆ ವಿಠಲ …’ ಹಾಡನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನಿನ್ನ ಧ್ವನಿಯಲ್ಲಿ ಸಲ ಕೇಳಿದರೂ ಬೇಸರವಾಗುವುದಿಲ್ಲ. ನಮ್ಮ ತಂದೆ ಇದ್ದಿದ್ದರೆ, ನಿನ್ನಂದಲೇ ಹಾಡಿಸುತ್ತಿದ್ದರು’ ಎಂದು ಹೇಳಿದ್ದರ ಜತೆಗೆ, ಪುನೀತ್​ ನೆನಪಲ್ಲಿ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ … ಹಾಡನ್ನು ಹಾಡಿದರು. ಶಿವರಾಜಕುಮಾರ್​ ಸಹ ಒಂದು ಹಾಡು ಹಾಡಿದರು. ಈ ಸಂದರ್ಭದಲ್ಲಿ ಸುನೀಲ್​ ರಾವ್, ಸಾಧು ಕೋಕಿಲ ಸೇರಿದಂತೆ ಹಲವರು ಹಾಜರಿದ್ದರು.

    ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ: ಕಂಠೀರವ ಸ್ಟುಡಿಯೋ ಬಳಿ ಬಿಗಿ ಬಂದೋಬಸ್ತ್, ಇಡೀ​ ದಿನ ಅನ್ನಸಂತರ್ಪಣೆ, ವಿಶೇಷ ಕಾರ್ಯಕ್ರಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts