More

    ಪುನೀತ್ ಧಾರಾವಾಹಿ ನಿರ್ಮಾಣ; ಭಕ್ತಿಪ್ರಧಾನ ನೇತ್ರಾವತಿ ಸೀರಿಯಲ್​ಗೆ ಬಂಡವಾಳ..

    ಬೆಂಗಳೂರು: ಡಾ. ರಾಜಕುಮಾರ್ ಕುಟುಂಬ ನಟನೆಯ ಜತೆಗೆ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನೂ ನಿರ್ಮಾಣ ಮಾಡಿದೆ. ವಜ್ರೇಶ್ವರಿ ಕಂಬೈನ್ಸ್ ಹೆಸರಲ್ಲಿ ಪಾರ್ವತಮ್ಮ ರಾಜಕುಮಾರ್ ಆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ನಿರ್ಮಾಣ ಸಂಪ್ರದಾಯ ಈಗಲೂ ಮುಂದುವರಿದಿದ್ದು, ಕೇವಲ ಸಿನಿಮಾಗಳನ್ನಷ್ಟೇ ಅಲ್ಲ ಧಾರಾವಾಹಿಗಳಿಗೂ ರಾಜ್ ಕುಟುಂಬ ಬಂಡವಾಳ ಹೂಡುತ್ತಿದೆ. ಇದೀಗ ಪುನೀತ್ ಮೊದಲ ಬಾರಿ ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೌದು, ಇಲ್ಲಿಯವರೆಗೂ ಪಿಆರ್​ಕೆ ಪ್ರೊಡಕ್ಷನ್ಸ್​ನಲ್ಲಿ ಕೇವಲ ಸಿನಿಮಾ ನಿರ್ಮಾಣ ಮಾಡಿಕೊಂಡು ಬಂದಿದ್ದ ಪುನೀತ್, ಇದೀಗ ಮೊದಲ ಬಾರಿ ಧಾರಾವಾಹಿಗೂ ನಿರ್ಮಾಪಕರಾಗುತ್ತಿದ್ದಾರೆ. ಆ ಧಾರಾವಾಹಿ ಹೆಸರು ‘ನೇತ್ರಾವತಿ’. ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿಯ ಭಕ್ತೆಯಾಗಿ ನೇತ್ರಾವತಿಯ ಕಥೆ ಸಾಗಲಿದ್ದು, ಭಕ್ತಿಪ್ರಧಾನ ಧಾರಾವಾಹಿ ಇದಾಗಿರಲಿದೆಯಂತೆ. ಸದ್ಯಕ್ಕೆ ಬಹುತೇಕ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡಿರುವ ತಂಡ, ಶೀಘ್ರದಲ್ಲಿ ಪ್ರಸಾರವಾಗಲಿರುವ ವಾಹಿನಿ ಮತ್ತು ತಾರಾಗಣದ ಬಗ್ಗೆ ಮಾಹಿತಿ ಬಿಟ್ಟುಕೊಡಲಿದೆ.

    ಯುವರತ್ನನಿಂದ ಪಾಠಶಾಲಾ ಹಾಡು: ಏ.1ರಂದು ಕನ್ನಡ ಮತ್ತು ತೆಲುಗಿನಲ್ಲಿ ಪುನೀತ್ ನಟನೆಯ ‘ಯುವರತ್ನ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ನಿಮಿತ್ತ ಚಿತ್ರತಂಡ ಒಂದಾದ ನಂತರ ಒಂದು ಹಾಡುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಬುಧವಾರ ‘ಪಾಠಶಾಲಾ’ ಎಂಬ ಹಾಡು ಹೊರ ಬಂದಿದ್ದು, ಗುರಿ ತೋರುವ ಗುರುವಿಗೆ ಹಾಡಿನ ಮೂಲಕ ನಮನ ಸಲ್ಲಿಸಿದ್ದಾರೆ. ಥಮನ್ ಸಂಗೀತ ನಿರ್ದೇಶನದ ಈ ಹಾಡಿಗೆ, ನಿರ್ದೇಶಕ ಸಂತೋಷ್ ಆನಂದ್​ರಾಮ್ ಸಾಹಿತ್ಯ ಬರೆದಿದ್ದಾರೆ. ಹೊಂಬಾಳೆ ಫಿಲಂಸ್ ಈ ಚಿತ್ರ ನಿರ್ವಿುಸಿದೆ.

    ಶಿವಣ್ಣ, ರಾಘಣ್ಣ ಬಳಿಕ ಅಪ್ಪು: ಈಗಾಗಲೇ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ನಟನೆಯ ಜತೆಗೆ ಧಾರಾವಾಹಿ ನಿರ್ಮಾಣಕ್ಕೂ ಇಳಿದಿದ್ದಾರೆ. ‘ಮಾನಸ ಸರೋವರ’ ಧಾರಾವಾಹಿಯನ್ನು ಶಿವರಾಜ್​ಕುಮಾರ್ ಶ್ರೀಮುತ್ತು ಸಿನಿ ಸರ್ವಿಸಸ್ ಮೂಲಕ ನಿರ್ಮಾಣ ಮಾಡಿದರೆ, ರಾಘವೇಂದ್ರ ರಾಜಕುಮಾರ್ ‘ಜೀವ ಹೂವಾಗಿದೆ’ ಧಾರಾವಾಹಿ ನಿರ್ವಿುಸಿದ್ದರು. ಇದೀಗ ಮೊದಲ ಬಾರಿ ಪವರ್​ಸ್ಟಾರ್ ಪುನೀತ್ ರಾಜಕುಮಾರ್ ‘ನೇತ್ರಾವತಿ’ ಶೀರ್ಷಿಕೆಯ ಭಕ್ತಿ ಪ್ರಧಾನ ಧಾರಾವಾಹಿಯ ನಿರ್ಮಾಣಕ್ಕಿಳಿದಿದ್ದಾರೆ. ಪಿಆರ್​ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಈಗಾಗಲೇ ನಾಲ್ಕೈದು ಚಿತ್ರಗಳು ನಿರ್ಮಾಣವಾಗಿ ಬಿಡುಗಡೆ ಆಗಿವೆ. ಇನ್ನು ಕೆಲವು ಚಿತ್ರಗಳು ಶೂಟಿಂಗ್ ಹಂತದಲ್ಲಿವೆ.

    ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…

    ಒಂದೇ ದಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ನ ಇಬ್ಬರು ವಿದ್ಯಾರ್ಥಿಗಳ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts