More

    ಕನ್ನಡದಲ್ಲಿ ಬೆರೆತಿರುವ ಶಕ್ತಿ ಅಪ್ಪು

    chethan| ಚೇತನ್ ಕುಮಾರ್
    ‘ಜೇಮ್ಸ್’ ಚಿತ್ರದ ನಿರ್ದೇಶಕ

    ಅವರು ಇಲ್ಲ ಅಂತ ಯಾವತ್ತೂ ಊಹಿಸಲೂ ಸಾಧ್ಯವಿಲ್ಲ. ಈಗಲೂ ಎಲ್ಲೋ ಶೂಟಿಂಗ್​ನಲ್ಲಿದ್ದಾರೇನೋ? ಎಲ್ಲೋ ಹೋಗಿದ್ದಾರೇನೋ? ಮತ್ತೆ ಬರುತ್ತಾರೆ ಅಂತನ್ನಿಸುತ್ತದೆ. ಮೊದಲು ಅವರನ್ನು ಭೇಟಿ ಮಾಡಲು ಪಿಆರ್​ಕೆ ಕಚೇರಿಗೆ ಹೋಗುತ್ತಿದ್ದೆವು. ಈಗ ಅವರು ಎಲ್ಲಾ ಕಡೆ ಇದ್ದಾರೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿದ್ದಾರೆ. ಆಟೋ, ಕಾರು, ಬಸ್… ಹೀಗೆ ಎಲ್ಲೆಡೆ ಇದ್ದಾರೆ. ಅವರಿಂದಲೇ ನಮ್ಮ ದಿನ ಪ್ರಾರಂಭವಾಗುತ್ತದೆ.

    ಅಪ್ಪು ಸರ್ ನಮ್ಮಲ್ಲಿಯೇ ಲೀನವಾಗಿದ್ದಾರೆ. ಅ. 29 ಕರಾಳ ದಿನ. ಪ್ರತಿ ವರ್ಷ ಅಕ್ಟೋಬರ್ ಬಂದರೆ ಸಾಕು ಬೇಸರವಾಗುತ್ತದೆ. ಎರಡು ವರ್ಷ ಆಗಿಹೋಯಿತಾ ಅಂತ ಅನ್ನಿಸುತ್ತದೆ. ದೇವಮಾನವನ ರೀತಿ ಬಂದು, ನಮ್ಮ ಜತೆ ಇದ್ದು, ಮಾನವೀಯ ಮೌಲ್ಯಗಳ ಒಂದೊಳ್ಳೆ ಸಂದೇಶ ಕೊಟ್ಟು ಹೋದರು. ಅಪ್ಪಾಜಿಯಂತೆ ಅಪು್ಪ ಸರ್ ಕೂಡ ಕನ್ನಡದೊಳಗೆ ಬೆರೆತು ಹೋಗಿದ್ದಾರೆ. ಅವರು ಕನ್ನಡದ ರಾಯಭಾರಿ. ಹೇಗೆ ಬದುಕಬೇಕು? ಅಂತ ಹೇಳಿಕೊಟ್ಟವರು. ತಮ್ಮ ನಿಷ್ಕಲ್ಮಶ ನಗು, ಎಲ್ಲರಿಗೂ ಒಳ್ಳೆಯದನ್ನು ಬಯಸುವ ಮನಸ್ಸಿನ ಮೂಲಕ ಅದೆಷ್ಟು ಅಭಿಮಾನಿಗಳ ಹೃದಯದಲ್ಲಿದ್ದಾರೆ. ಅವರನ್ನು ಮೊದಲಿನಂತೆ ದೈಹಿಕವಾಗಿ ಭೇಟಿಯಾಗಲು, ಅವರ ಅಪು್ಪಗೆಯನ್ನು, ನನ್ನ ಭುಜದ ಮೇಲೆ ಕೈ ಇಟ್ಟು ಮಾತನಾಡಿಸುತ್ತಿದ್ದ ರೀತಿಯನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತೇನೆ.

    ಎಷ್ಟೋ ಬಾರಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗದಿದ್ದರೆ, ಅಪು್ಪ ಸರ್ ಇದ್ದಿದ್ದರೆ ಏನು ಹೇಳುತ್ತಿದ್ದರು? ಅಂತ ಯೋಚಿಸುತ್ತೇನೆ. ಕೊನೆಯ ಎರಡು ಮೂರು ವರ್ಷ, ವಾರದಲ್ಲಿ ಎರಡು, ಮೂರು ಬಾರಿಯಾದರೂ ಅವರನ್ನು ಭೇಟಿ ಯಾಗುತ್ತಿದ್ದೆ. ಶಿವಣ್ಣ ನಟಿಸಿರುವ ‘ಘೋಸ್ಟ್’ ಚಿತ್ರದ ಬಗ್ಗೆ ಅಪು್ಪ ಸರ್ ಏನಂತಿದ್ದರು? ‘ಟಗರು ಪಲ್ಯ’ ನೋಡಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತ್ತಿತ್ತು? ಅಂತ ಯೋಚಿಸುತ್ತಿರುತ್ತೇನೆ. ಎಲ್ಲರ ಗೆಲುವನ್ನೂ ನಮ್ಮ ಗೆಲುವು ಅಂತ ಆಸ್ವಾದಿಸುತ್ತಿದ್ದರು. ಚಿತ್ರರಂಗಕ್ಕೆ ಒಳ್ಳೆಯದಾಗಬೇಕು. ಹೊಸಬರು ಬೆಳೆಯಬೇಕು ಅಂತ ಯಾವಾಗಲೂ ಯೋಚಿಸುತ್ತಿದ್ದರು. ಅವರು ದೈವಶಕ್ತಿ, ರಾಜ್ಯದ ಶಕ್ತಿ. ಅವರನ್ನು ದೇವಸ್ಥಾನದಲ್ಲಿಟ್ಟು, ಮನೆಯಲ್ಲಿ ದೇವರ ಫೋಟೋಗಳ ಜತೆಗಿಟ್ಟು ಲಕ್ಷಾಂತರ ಜನ ಕೈಮುಗಿದು, ಪೂಜಿಸಿ ತಮ್ಮ ದಿನ ಪ್ರಾರಂಭಿಸುತ್ತಾರೆ. ಅವರಿಗೆ ದೇವರು ಒಂದೇ ಒಂದು ಅವಕಾಶ ನೀಡಬೇಕಿತ್ತು. ಅವರನ್ನು ನೆನಪಿಸಿಕೊಂಡರೆ ಮನಸ್ಸಿನಲ್ಲಿ ಒಂದೇ ಭಾವನೆ ಅಂತ ಹೇಳಲಾಗುವುದಿಲ್ಲ. ನೂರಾರು ಭಾವನೆಗಳಿವೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಒಂದು ಪೀಳಿಗೆಗೆ ಸ್ಪೂರ್ತಿ, ಪಾಠ ಹೇಳಿಕೊಟ್ಟರು. ಒಳ್ಳೆಯ ವಿಚಾರಗಳಿಗೆ ರಾಯಭಾರಿಯಾಗಿದ್ದವರು.

    ವಿಶ್ವಕಪ್​ನಲ್ಲಿ ಸತತ 4 ಪಂದ್ಯ ಸೋತರೂ, ಸೆಮಿಫೈನಲ್​ ಆಸೆ ಕೈಬಿಟ್ಟಿಲ್ಲ ಪಾಕಿಸ್ತಾನ! ಹೀಗಿದೆ ಲೆಕ್ಕಾಚಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts