More

    ‘ಯುವರತ್ನ’ನಿಗೆ ಗುರುರಾಯರ ಅನುಗ್ರಹ; ಪುನೀತ್​ ರಾಜ್​ಕುಮಾರ್​, ಜಗ್ಗೇಶ್​ ಅವರಿಗೆ ಸುಬುಧೇಂದ್ರ ತೀರ್ಥರ ಆಶೀರ್ವಾದ

    ರಾಯಚೂರು: ಬಿಡುಗಡೆಯಾದ ಬೆನ್ನಿಗೇ ಕರೊನಾ ಕಾರಣಕ್ಕೆ ಸಂಕಷ್ಟಕ್ಕೆ ಒಳಗಾಗಿ ಆತಂಕ ಎದುರಿಸಿದ್ದ ‘ಯುವರತ್ನ’ನಿಗೆ ಸರ್ಕಾರದ ಕೃಪೆಯಿಂದ ಕೊಂಚ ನಿರಾಳತೆ ಸಿಕ್ಕಿದೆ. ಇದೀಗ ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥರಿಂದಲೂ ಆಶೀರ್ವಾದ ಸಿಕ್ಕಿದೆ.

    ಪುನೀತ್ ರಾಜ್​ಕುಮಾರ್ ಅಭಿನಯದ ಸಿನಿಮಾ ‘ಯುವರತ್ನ’ ಕಳೆದ ಗುರುವಾರ ಬಿಡುಗಡೆ ಆಗಿದೆ. ಆದರೆ ಕರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿ, ಚಿತ್ರಮಂದಿರಗಳಲ್ಲಿ ಶೇ. 50 ಆಸನ ಭರ್ತಿಗಷ್ಟೇ ಅವಕಾಶ ನೀಡಿ ನಿರ್ಬಂಧ ವಿಧಿಸಿತ್ತು. ಇದರಿಂದ ಆಗಷ್ಟೇ ಬಿಡುಗಡೆ ಆಗಿದ್ದ ‘ಯುವರತ್ನ’ ಸಿನಿಮಾಗೆ ದೊಡ್ಡ ಹಿನ್ನಡೆಯಾಗಿದ್ದು, ಚಿತ್ರರಂಗದ ಅನೇಕ ಗಣ್ಯರು ‘ಯುವರತ್ನ’ ಪರವಹಿಸಿ ಮಾತನಾಡಿದ್ದಲ್ಲದೆ, ನಿರ್ಬಂಧ ಸಡಿಲಿಸುವಂತೆಯೂ ಕೋರಿದ್ದರು. ಆ ಬಳಿಕ ಪುನೀತ್ ರಾಜ್​ಕುಮಾರ್ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ನಂತರ ಆಸನ ಭರ್ತಿಗೆ ವಿಧಿಸಿದ್ದ ನಿರ್ಬಂಧವನ್ನು ನಾಲ್ಕು ದಿನಗಳ ಕಾಲ ಸಡಿಲಿಸುವಂತೆ ಸಿಎಂ ಸೂಚನೆ ನೀಡಿದ್ದರಿಂದ ಸರ್ಕಾರ ಆ ಕುರಿತ ಆದೇಶ ನೀಡಿತ್ತು.

    ಇದನ್ನೂ ಓದಿ: ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

    ಇದಾದ ಬಳಿಕ ‘ಯುವರತ್ನ’ ಭರ್ಜರಿ ಪ್ರದರ್ಶನ ಕಂಡು, ಜನಮೆಚ್ಚುಗೆ ಗಳಿಸಲಾರಂಭಿಸಿದ ಕಾರಣ ನಟ ಪುನೀತ್ ರಾಜ್​ಕುಮಾರ್, ನಿರ್ದೇಶಕ ಸಂತೋಷ್​ ಆನಂದ್​ರಾಮ್​, ನಿರ್ಮಾಪಕ ಕಾರ್ತಿಕ್​ ಗೌಡ ಇಂದು ಮಂತ್ರಾಲಯಕ್ಕೆ ತೆರಳಿದ್ದರು. ರಾಯರ ದರ್ಶನ ಪಡೆದ
    ಪುನೀತ್ ರಾಜ್​ಕುಮಾರ್​, ಜಗ್ಗೇಶ್​, ಸಂತೋಷ್ ಆನಂದ್​ರಾಮ್​, ಕಾರ್ತಿಕ್ ಗೌಡ ಅವರನ್ನು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸನ್ಮಾನಿಸಿ, ಆಶೀರ್ವದಿಸಿದರು. ಚಿತ್ರಮಂದಿರ ಭರ್ತಿಗೆ ವಿಧಿಸಿದ್ದ ನಿರ್ಬಂಧಕ್ಕೆ ನೀಡಿದ್ದ ವಿನಾಯಿತಿ ಏ. 7ರ ಮಧ್ಯೆ ರಾತ್ರಿಗೆ ಮುಗಿಯಲಿದ್ದು, ಆ ಬಳಿಕ ಸರ್ಕಾರ ಮುಂದೇನು ಕ್ರಮಕೈಗೊಳ್ಳಲಿದೆ ಎಂಬ ಕುತೂಹಲ ಈಗ ಸಿನಿಪ್ರಿಯರಲ್ಲಿದೆ.

    ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ಪೊಲೀಸರ ವಿರುದ್ಧ ಉದ್ರಿಕ್ತರಾದ ಜನರು; ಆರಕ್ಷಕರಿಂದ ತಪ್ಪಿಸಿಕೊಳ್ಳುವಾಗ ಬೈಕ್​ನಿಂದ ಬಿದ್ದ ತಾಯಿ-ಮಗನಿಗೆ ಗಾಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts