More

    ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಸಾಹಸ

    ಬೆಂಗಳೂರು: ‘ದಯವಿಟ್ಟು ಯಾರೂ ಇಂಥ ಸಾಹಸ ಮಾಡಬೇಡಿ..’ ಎಂದು ಮೊದಲು ಎಚ್ಚರಿಕೆ ಕೊಟ್ಟೇ ಹೊಸ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ ಪುನೀತ್. ನಟನೆ, ನಿರ್ಮಾಣದಲ್ಲಿ ಪುನೀತ್​ಗೆ ಅದೆಷ್ಟು ಆಸಕ್ತಿಯೋ, ಸಾಹಸ ಕ್ರೀಡೆ, ಸೈಕ್ಲಿಂಗ್ ಮತ್ತು ಫಿಟ್ನೆಸ್​ನಲ್ಲೂ ಅವರಿಗೆ ಅಷ್ಟೇ ಆಸಕ್ತಿ. ಕೆಲವು ದಿನಗಳ ಹಿಂದೆ, ಕಾರವಾರ ಬಳಿಯ ನೇತ್ರಾಣಿ ದ್ವೀಪಕ್ಕೆ ಹೋಗಿದ್ದ ಪುನೀತ್, ಬೋಟ್​ನಿಂದ ಬ್ಯಾಕ್​ಫ್ಲಿಪ್ ಮಾಡಿ ಸಮುದ್ರಕ್ಕೆ ಜಿಗಿದಿದ್ದಾರೆ.

    ಪುನೀತ್ ಅವರ ಈ ಸಾಹಸಕ್ಕೆ ಅವರ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಬ್ಯಾಕ್​ಫ್ಲಿಪ್ ಮಾಡುವುದರಲ್ಲಿ ನಿಸ್ಸೀಮರಾಗಿರುವ ಪುನೀತ್, ಗೋಕರ್ಣ ಬೀಚ್​ನಲ್ಲಿ ಇದೇ ರೀತಿ ಬ್ಯಾಕ್​ಫ್ಲಿಪ್ ಮಾಡುವ ವಿಡಿಯೋವೊಂದನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಿದ್ದರು. ಈಗ, ‘ಯಾರೂ ಇಂತಹ ಸಾಹಸಕ್ಕೆ ಕೈಹಾಕಬೇಡಿ’ ಎಂಬ ಮನವಿಯೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ.

    Video| ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ, ಆಫೀಸ್ ಬೇರೆ ಮಾಡ್ಬೇಕಾ?: ಡಾ.ರಾಜ್​ ಕುರಿತು ನಾಲಿಗೆ ಹರಿಬಿಟ್ಟ ಶಾಸಕ

    ಮೊದಲ ಬಾರಿ ಒಂದಾದ ರಾಘಣ್ಣ-ಸುಧಾರಾಣಿ; ರಾಜ್ ಕುಟುಂಬದ ಐವರ ಜತೆ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts