More

    ಇಂಗ್ಲೀಷ್​ ಮೇಷ್ಟ್ರು ಗೋಪಿಯಾಗಿ ಬಂದ್ರು ದಾನಿಶ್​

    ಬೆಂಗಳೂರು: ಅಮೇಜಾನ್​ ಪ್ರೈಮ್​ನಲ್ಲಿ ‘ಫ್ರೆಂಚ್​ ಬಿರಯಾನಿ’ ಬಿಡುಗಡೆಯಾಗಿ ಐದು ತಿಂಗಳುಗಳಾಗಿವೆ. ಈ ಐದು ತಿಂಗಳುಗಳಲ್ಲಿ ಆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ದಾನಿಶ್​, ಬೇರೆ ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ದಾನಿಶ್​, ‘ಒನ್​ ಕಟ್​ ಟೂ ಕಟ್​’ ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

    ಇದನ್ನೂ ಓದಿ:ಏಪ್ರಿಲ್​ಗೆ ಯುವರತ್ನ ಸಿನಿಮಾ ಬಿಡುಗಡೆ

    ‘ಒನ್​ ಕಟ್​ ಟೂ ಕಟ್​’ ಚಿತ್ರವನ್ನು ವಂಸಿಧರ್​ ಭೋಗರಾಜು ಎನ್ನುವವರು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ಗೋಪಿ ಎಂಬ ಇಂಗ್ಲೀಷ್​ ಮೇಷ್ಟ್ರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ದಾನಿಶ್​. ಹೊಸ ವರ್ಷದ ಅಂಗವಾಗಿ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಯಾಗಿದೆ.

    ವಿಶೇಷವೆಂದರೆ, ಈ ಚಿತ್ರವನ್ನು ಪುನೀತ್​ ರಾಜಕುಮಾರ್​ ನಿರ್ಮಿಸುತ್ತಿದ್ದಾರೆ. ಈ ಹಿಂದೆ, ದಾನಿಶ್​ ಅಭಿನಯದಲ್ಲಿ ‘ಫ್ರೆಂಚ್​ ಬಿರಿಯಾನಿ’ ಚಿತ್ರವನ್ನು ನಿರ್ಮಿಸಿದ್ದರು. ಈಗ ದಾನಿಶ್​ ಅಭಿನಯದ ಇನ್ನೊಂದು ಚಿತ್ರವನ್ನು ಪುನೀತ್​ ತಮ್ಮ ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಸಹ ಚಿತ್ರಮಂದಿರಗಳಿಗಿಂತ ಓವರ್​ ದಿ ಟಾಪ್​ನಲ್ಲೇ (ಓಟಿಟಿ) ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಸಿನಿಮಾ ವಿಮರ್ಶೆ | ಆಂತರಿಕ ಯುದ್ಧದಲ್ಲಿ ಚದುರಂಗದಾಟ

    ಈ ಚಿತ್ರದ ಪೋಸ್ಟರ್​ನ್ನು ಸೋಷಿಯಲ್​ ಮೀಡಿಯಾ ಮೂಲಕ ಬಿಡುಗಡೆ ಮಾಡಿರುವ ಪುನೀತ್​, ‘ಒನ್​ ಕಟ್​ ಟೂ ಕಟ್​’ ಒಂದು ಪಕ್ಕಾ ಕಾಮಿಡಿ ಚಿತ್ರ ಎಂದು ಹೇಳಿದ್ದಾರೆ. ಚಿತ್ರೀಕರಣ ಫೆಬ್ರವರಿಯಿಂದ ಪ್ರಾರಂಭವಾಲಿದ್ದು, ಅಷ್ಟರಲ್ಲಿ ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಸಿಗುವ ನಿರೀಕ್ಷೆ ಇದೆ.

    ನಿರಂಜನ್​ಗೆ ಝಾರಾ ಜೋಡಿ; ಶೀಘ್ರದಲ್ಲಿ ಶೂಟಿಂಗ್ ಶುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts