More

    ಪಂಪ್ವೆಲ್ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಶುರು

    ಮಂಗಳೂರು: ನಿರ್ಮಾಣ ಪ್ರಕ್ರಿಯೆ ಆರಂಭಗೊಂಡು, ದಶಕ ಬಳಿಕ ಪಂಪ್‌ವೆಲ್ ಮೇಲ್ಸೇತುವೆ ಶುಕ್ರವಾರ ಲೋಕಾರ್ಪಣೆಗೊಂಡಿತು.

    ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ವಿಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ಹಲವು ಬಾರಿ ಪ್ರತಿಭಟನೆ ನಡೆಸಿತ್ತು. ಹಲವು ಬಾರಿ ದಿನ ನಿಗದಿಯಾಗಿ, ಕಾಮಗಾರಿ ಮುಗಿಯದೆ ಮುಂದೂಡಲಾಗುತ್ತಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಟ್ರೋಲ್ ಮಾಡಿದ್ದರು. ಕೇರಳದ ಚೆಂಡೆ, ವಾದ್ಯ, ಬೊಂಬೆಗಳ ಜತೆಗೆ ಮಿಸ್ಟರ್ ಬೀನ್ ಬೊಂಬೆ ಕೂಡಾ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಗಮನ ಸೆಳೆಯಿತು. ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಪಂಪ್‌ವೆಲ್ ನೂತನ ಮೇಲ್ಸೇತುವೆ ಉದ್ಘಾಟನೆ ಅನಂತರ ವಾಹನ ಸಂಚಾರ ಆರಂಭ ಗೊಂಡಿತು.

    ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಕಾರಣ. 1.1ಕಿ.ಮೀ.ಉದ್ದದ ಮೇಲ್ಸೇತುವೆ 2.2 ವರ್ಷಗಳಲ್ಲಿ ಪೂರ್ಣಗೊಂಡಿದೆ. ಗುತ್ತಿಗೆ ಕಂಪನಿ ನೀಡಿದ ಅವಧಿಗಿಂತ 6 ತಿಂಗಳು ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸಿದೆ. ಮನಪಾ ಒಪ್ಪಿಗೆ ನೀಡದ ಕಾರಣ 2016ರ ತನಕ ಕಾಮಗಾರಿ ಆರಂಭವಾಗಿಲ್ಲ. ವಿಪಕ್ಷದವರು ಬಹಳಷ್ಟು ನಾಡಕವಾಡಿದರು. ವಿಳಂಬವಾದರೂ ಕಾಮಗಾರಿ ವೇಗವಾಗಿ ನಡೆದಿದೆ.
    – ನಳಿನ್ ಕುಮಾರ್ ಕಟೀಲ್, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts