More

    ಎಲ್ಲ ಪ್ರಜೆಗಳಿಗೂ ಕೋವಿಡ್​ಗೆ ಉಚಿತ ಲಸಿಕೆ ಕೊಡಲಿದೆ ಈ ದೇಶ!

    ಟೋಕ್ಯೊ(ಜಪಾನ್​): ಇಡೀ ಜಗತ್ತು ಮಹಾಮಾರಿ ಕರೊನಾ ಸೋಂಕಿಗೆ ತತ್ತರಿಸಿದೆ. ಹಲವರ ಬದುಕು ಮೂರಾಬಟ್ಟೆಯಾಗಿದೆ. ಅದೆಷ್ಟೋ ಜನರು ಆಸ್ಪತ್ರೆ ಬಿಲ್​ ಕಟ್ಟಲಾಗದೆ, ಸೂಕ್ತ ಚಿಕಿತ್ಸೆಯೂ ಪಡೆಯಲಾಗದೆ ಪ್ರಾಣಬಿಟ್ಟಿದ್ದಾರೆ. ಈ ನಡುವೆ ಇಲ್ಲೊಂದು ದೇಶ ತನ್ನ ಪ್ರಜೆಗಳಿಗೆ ಉಚಿತವಾಗಿ ಕರೊನಾ ಲಸಿಕೆ ಕೊಡಲು ಸಜ್ಜಾಗಿದೆ.

    ಹೌದು, ಇಂತಹ ಮಹತ್ವದ ನಿರ್ಧಾರವನ್ನು ಜಪಾನ್​ ಕೈಗೊಂಡಿದೆ. ಅದಕ್ಕಾಗಿಯೇ ಜಪಾನ್​ ಸರ್ಕಾರ 2020ನೇ ಹಣಕಾಸು ವರ್ಷದ ಬಜೆಟ್​ನಲ್ಲಿ ಸುಮಾರು 670 ಬಿಲಿಯನ್​ ಹಣ ಮೀಸಲಿಟ್ಟಿದೆ! ಇನ್ನು ಮುಂದಿನ ಅಂದರೆ 2021ನೇ ವರ್ಷದ ಬಜೆಟ್​ನಲ್ಲೂ ಉಚಿತ ಲಸಿಕೆಗಾಗಿ ಹೆಚ್ಚಿನ ಹಣ ಮೀಸಲಿಡಲು ಚಿಂತನೆ ಮಾಡಿದೆ.

    ಜಪಾನ್ ಸರ್ಕಾರವು ದೇಶದ ಎಲ್ಲ ಪ್ರಜೆಗಳಿಗೂ ಶೀಘ್ರವೇ ಉಚಿತವಾಗಿ ಲಸಿಕೆ ವಿತರಿಸಲಿದೆ. ಮುಂದಿನ ವಾರ ಜಪಾನ್ ಆರೋಗ್ಯ ಸಚಿವಾಲಯದ ಸಲಹಾ ಸಮಿತಿ ಸಭೆ ನಡೆಸಲಿದ್ದು, ಹೇಗೆ? ಯಾವ ಕ್ರಮದಲ್ಲಿ ವಿತರಿಸಬೇಕು, ಲಸಿಕೆ ವಿತರಣೆ ಕಾರ್ಯಕ್ರಮ ಅನುಷ್ಠಾನದ ವಿಧಾನ ಸೇರಿ ಇತ್ಯಾದಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಕೋವಿಡ್​ ಲಸಿಕೆ ಪ್ರತಿಯೊಬ್ಬ ಪ್ರಜೆಗೂ ಲಸಿಕೆ ಸಿಗುವಂತಾಗಬೇಕು ಧೇಯದೊಂದಿಗೆ ಜಪಾನ್​ ಸರ್ಕಾರ ಶ್ರಮಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿರಿ 2021ರ ಜುಲೈ ಒಳಗೆ 25 ಕೋಟಿ ಜನರಿಗೆ ಕರೊನಾ ಲಸಿಕೆ; ಸರ್ಕಾರದ ಗುರಿ..

    ಜಪಾನ್​ನಲ್ಲಿ ಸುಮಾರು 85,345 ಮಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. 1,594 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಾನ್​ ಹಾಪ್ಕಿನ್ಸ್​ ಯೂನಿರ್ವಸಿಟಿ ವರದಿ ಮಾಡಿದೆ.

    ಹಲವು ದೇಶಗಳು ಕೋವಿಡ್​ಗೆ ಸೂಕ್ತ ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿವೆ. ಜಪಾನ್ ಸರ್ಕಾರವು ಕೋವಿಡ್​ ಲಸಿಕೆಗಾಗಿ ಯನೈಟೆಡ್​ ಸ್ಟೇಟ್ಸ್​ನ ಫಿಜರ್ ಇಂಕ್ ಮತ್ತು ಬ್ರಿಟಿಷ್​ನ ಅಸ್ಟ್ರಾಜೆನೆಕಾ ಪಿಎಲ್ಸಿ ಜತೆ ಒಡಂಬಡಿಕೆ ಮಾಡಿಕೊಂಡಿದೆ. (ಏಜೆನ್ಸೀಸ್​)

    ನಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲು

    PHOTO GALLERY| ಚಿರು ಫೋಟೋ ಇಟ್ಟುಕೊಂಡು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್​

    ಒಂದೇ ಆಂಬುಲೆನ್ಸ್​ನಲ್ಲಿ ಇಬ್ಬರಿಗೆ ಹೆರಿಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts