More

    ಬೆನಕನಹಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿ

    ಸೇಡಂ: ಬೆನಕನಹಳ್ಳಿ ಗ್ರಾಮದಲ್ಲಿ ಸೂಕ್ತ ರಸ್ತೆ, ಚರಂಡಿ ಇಲ್ಲದೆ ಜನರು ಪರದಾಡುತ್ತಿದ್ದು, ಕೂಡಲೇ ಎಲ್ಲೆಡೆ ಸಿಸಿ ರಸ್ತೆ ನಿರ್ಮಿಸುವುದರ ಜತೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಬೆನಕನಹಳ್ಳಿ ಗ್ರಾಮ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಕಾಕಲವಾರ ಒತ್ತಾಯಿಸಿದರು.

    ಈ ಕುರಿತು ಬೆನಕನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಶನಿವಾರ ಮನವಿಪತ್ರ ಸಲ್ಲಿಸಿದ್ದು, ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಅದರಲ್ಲೂ ಗ್ರಾಮ ದೇವತೆ ಮರಗಮ್ಮ ದೇವಿ ದೇವಸ್ಥಾನದಿಂದ ಚಂದಣ್ಣೇಶ್ವರ ದೇಗುಲಕ್ಕೆ ರೋಡಿನಲ್ಲಿ ದೊಡ್ಡ-ದೊಡ್ಡ ತಗ್ಗುಗಳು ಬಿದ್ದಿವೆ. ಚರಂಡಿ ನೀರು ನಿಂತು, ದೇಗುಲಕ್ಕೆ ಹೋಗಲು ಹರಸಾಹಸ ಪಡುವಂತಾಗಿದೆ. ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳು ಸಾಕಷ್ಟಿವೆ ಎಂದು ದೂರಿದರು.

    ಎಂಟು ದಿನದೊಳಗಾಗಿ ರಸ್ತೆಗಳನ್ನು ಸರಿಪಡಿಸಬೇಕು. ಅಲ್ಲದೆ ಎಲ್ಲೆಡೆ ಸುಗಮ ಚರಂಡಿ ನಿರ್ಮಾಣ ಮಾಡಬೇಕು. ಈ ಬಗ್ಗೆ ನಿರ್ಲಕ್ಷÈ ವಹಿಸಿದರೆ ಗ್ರಾಮಸ್ಥರೊಂದಿಗೆ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರಮುಖರಾದ ಬಸಲಿಂಗಪ್ಪ, ಚನ್ನಬಸ್ಸು, ಅಯ್ಯಪ್ಪ ಮರಗಣ್, ನರಸಪ್ಪ ಹುಡೆದ್, ಸಂತು ಜೋಗಿ, ಬಸವರಾಜ ಕೊಳಕೂರ, ರೋಬಿನ್ ಕೊರವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts