More

    ಬನ್ನೂರು ಸಾರ್ವಜನಿಕ ಆಸ್ಪತ್ರೆಗೆ ಮೂಲಸೌಲಭ್ಯ ಒದಗಿಸಿ

    ಬನ್ನೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಚುಚ್ಚುಮದ್ದು, ಔಷಧ ದೊರಕದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ನೀಡಿ ಪಡೆಯುವಂತಾಗಿದ್ದು, ಕೂಡಲೇ ಜಿಲ್ಲಾ ವೈದ್ಯಾಧಿಕಾರಿ ಇತ್ತ ಗಮನಹರಿಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ರೈತ ಸಂಘ(ಮೂಲಸಂಘಟನೆ) ದಿಂದ ಮಂಗಳವಾರ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಯಿತು.

    ನಾಯಿ ಕಚ್ಚಿದಾಗ ಸಿಗಬೇಕಾದ ಚುಚ್ಚುಮದ್ದಾಗಲಿ, ಇನ್ಸುಲಿನ್ ಆಗಲಿ ಇಲ್ಲದೆ ಜನರು ಖಾಸಗಿ ಆಸ್ಪತ್ರೆ ಅವಲಂಬಿಸಬೇಕಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಸೌಲಭ್ಯ ಮಾಯವಾಗಿದೆ. ಶೌಚಗೃಹ ದುಸ್ಥಿತಿಯಲ್ಲಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜಿಲ್ಲಾ ವೈದ್ಯಾಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದು, ರೋಗಿಗಳು ಪರದಾಟಕ್ಕೆ ಮುಕ್ತಿ ಇಲ್ಲ ಎನ್ನುವಂತಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

    ಬಡ ಮಹಿಳೆಯರಿಗೆ ಅನುಕೂಲ ಮಾಡಿಕೊಡುತ್ತಿದ್ದ ಹೆರಿಗೆ ಶಸ್ತ್ರಚಿಕಿತ್ಸಕ ವೈದ್ಯ ಪುರುಷೋತ್ತಮ್ ಅವರನ್ನು ವರ್ಗಾವಣೆ ಮಾಡಿ ಬೇರೆಯವರನ್ನು ನಿಯೋಜಿಸುತ್ತಿರುವುದು ಸರಿಯಲ್ಲ. ತಕ್ಷಣ ಅವರ ವರ್ಗಾವಣೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.

    ಸಮಸ್ಯೆ ಬಗೆಹರಿಸುವತ್ತ ಸಂಬಂಧಪಟ್ಟವರು ಕ್ರಮ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಬೀಗ ಹಾಕಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ನಾರಾಯಣ್ ಎಚ್ಚರಿಸಿದರು.

    ಸಮಾಜ ಸೇವಕ ವೈ.ಎಸ್. ರಾಮಸ್ವಾಮಿ, ರೈತ ಮುಖಂಡರಾದ ಅತ್ತಹಳ್ಳಿ ರಾಜು, ಹರೀಶ್, ಎಂ.ವಿ. ಕೃಷ್ಣಪ್ಪ, ಜಯರಾಂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts