More

    ಮಂತ್ರಿಗಳ ಎದುರೇ ಚಳವಳಿಗಾರರಿಗೆ ಚಳಿ ಬಿಡಿಸಿದ ರೈತರು!

    ಮಂಡ್ಯ: ಮೈಶುಗರ್ ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕೆಂದು ಹೇಳುತ್ತಿರುವವರು ಕಬ್ಬು ಬೆಳೆಗಾರರಲ್ಲ. ಅದು ಎಲ್ಲ ರೈತರ ಕೂಗಲ್ಲ. ಪಿಎಸ್‌ಎಸ್‌ಕೆ ಮಾದರಿಯೋ, ಸರ್ಕಾರವೋ ಹೇಗಾದರೂ ಸರಿ ತಕ್ಷಣ ಕಬ್ಬು ಅರೆಯುವಿಕೆ ಆರಂಭಿಸಿ ಎಂದು ಮೈಶುಗರ್ ವ್ಯಾಪ್ತಿಯ ರೈತರು ಮಂತ್ರಿಗಳಿಬ್ಬರೆದುರು ಹಕ್ಕೊತ್ತಾಯ ಮಂಡಿಸಿದರು.

    ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಅವರು ಕಾರ್ಖಾನೆ ಪರಿಶೀಲನೆಗೆ ಬುಧವಾರ ಆಗಮಿಸಿದ ವೇಳೆ ಜಮಾಯಿಸಿದ್ದ ನೂರಾರು ರೈತರು, ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸಬೇಕೆಂದು ಪ್ರತಿಭಟನೆ ನಡೆಸುತ್ತ ಮನವಿ ಸಲ್ಲಿಸಲು ಆಗಮಿಸಿದ ರೈತ ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಸಿ.ಕುಮಾರಿ, ಸುಧೀರ್‌ಕುಮಾರ್, ಇಂಡುವಾಳು ಚಂದ್ರಶೇಖರ್ ನೇತೃತ್ವದ 15ಕ್ಕೂ ಹೆಚ್ಚು ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ ರೈತರು, ‘‘ಇಲ್ಲಿಂದ ತೊಲಗಿ’’ ಎನ್ನುತ್ತ ಅವರತ್ತ ನುಗ್ಗುತ್ತಿದ್ದಾಗ ಪೊಲೀಸರು ಪ್ರತಿಭಟನಾಕಾರರಿಗೆ ರಕ್ಷಣೆ ನೀಡಿದರು.

    ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಬ್ಯಾನರ್ ಅಡಿ ಬಂದಿರುವ ಮುಖಂಡರು ಮೈಶುಗರ್ ವ್ಯಾಪ್ತಿಯ ರೈತರು ಅಲ್ಲ, ಕಬ್ಬು ಬೆಳೆಗಾರರು ಅಲ್ಲ. ನಾವು ಮೈಶುಗರ್‌ಗೆ ಕಬ್ಬು ಪೂರೈಸುವ ರೈತರು. ನಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಕಬ್ಬನ್ನು ಹೊರ ಜಿಲ್ಲೆಯ ಕಾರ್ಖಾನೆಗೆ ಸಾಗಿಸಲಾಗದೆ, ಅದರ ವೆಚ್ಚವನ್ನು ಭರಿಸಲಾಗದೆ ಹೈರಾಣಾಗಿದ್ದೇವೆ. ನಿತ್ಯವೂ ಸಂಕಟ ಅನುಭವಿಸುತ್ತಿದ್ದೇವೆ. ಕಾರ್ಖಾನೆಯನ್ನು ಯಾರಾದರೂ ನಡೆಸಲು ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ರೈತರು ಹೇಳಿದರು.

    ಎಲ್ಲರ ಮಾತು ಆಲಿಸಿದ ಸಚಿವರು, ಈ ಸಂಬಂಧ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಕಾರ್ಖಾನೆಯನ್ನು ಗುತ್ತಿಗೆ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಆ ಪ್ರಸ್ತಾವನೆಯನ್ನೇ ಕೈಬಿಟ್ಟಿದ್ದು, ಈಗ ಕಾರ್ಯಾಚರಣೆ ಮತ್ತು ನಿರ್ವಹಣೆ ಅಡಿ ನೀಡಲು ಮುಂದಾಗಿದ್ದೇವೆ. ಅದಕ್ಕೂ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಷ್, ಶಾಸಕ ಎಂ.ಶ್ರೀನಿವಾಸ್, ಜಿ.ಪಂ. ಸದಸ್ಯ ಚಂದಗಾಲು ಶಿವಣ್ಣ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮೊದಲಾದವರ ಸಮ್ಮುಖದಲ್ಲೇ ಈ ಘಟನೆ ನಡೆಯಿತು.

    ಸಚಿವ ಸಂಪುಟದಲ್ಲಿ ಮೈಶುಗರ್ ತೀರ್ಮಾನ

    ಮೈಶುಗರ್ ಗ್ರಹಚಾರ ಇನ್ನೂ ಸರಿಯಾಗಿಲ್ಲ: ಸಿಎಂ ಏನ್ ಹೇಳ್ತಾರೆ ಅನ್ನೋ ಕುತೂಹಲ ಎಲ್ರಿಗೂ…

    ರಾಜಕೀಯಕ್ಕೆ ಸೀಮಿತವಾಯ್ತು ಮೈಶುಗರ್ ವಿಷಯ

    ಮೈಶುಗರ್ ಖಾಸಗೀಕರಣಕ್ಕೆ ವಿರೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts