More

    ಯುಎಸ್​ ಕ್ಯಾಪಿಟಲ್​ಗೆ ಪ್ಯಾಲೆಸ್ತೀನ್​ ಬೆಂಬಲಿಗರ ಮುತ್ತಿಗೆ: ಕದನ ವಿರಾಮಕ್ಕೆ ಒತ್ತಾಯ, 300 ಮಂದಿ ಬಂಧನ

    ವಾಷಿಂಗ್ಟನ್​: ನೂರಾರು ಪ್ಯಾಲೆಸ್ತೀನ ಪರ ಬೆಂಬಲಿಗರು ವಾಷಿಂಗ್ಟನ್​ ಡಿಸಿಯಲ್ಲಿರುವ ಯುಎಸ್ ಕ್ಯಾಪಿಟಲ್​ ಕಟ್ಟಡಕ್ಕೆ ಬುಧವಾರ ದಿಢೀರ್​ ಮುತ್ತಿಗೆ ಹಾಕಿ, ಪ್ರಸ್ತುತ ಇಸ್ರೇಲ್​ ಮತ್ತು ಹಮಾಸ್​ ನಡುವಿನ ಸಂಘರ್ಷಕ್ಕೆ ಕದನ ವಿರಾಮಕ್ಕಾಗಿ ಒತ್ತಾಯ ಮಾಡಿ, ಪ್ರತಿಭಟಿಸಿದರು. ಈ ವೇಳೆ ಸುಮಾರು 300 ಪ್ರತಿಭಟನಾಕಾರರನ್ನು ಯುಎಸ್​ ಪೊಲೀಸರು ಬಂಧಿಸಿರುವುದಾಗಿ ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ. ​

    ಕದನ ವಿರಾಮಕ್ಕಾಗಿ ಒತ್ತಾಯಿಸಿ ಪ್ರತಿಭಟನಾಕಾರರು ಉಂಟು ಮಾಡಿದ ಅಡಚಣೆಯ ಬಳಿಕ ಕ್ಯಾಪಿಟಲ್ ಸಂಕೀರ್ಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ವಿವಿಧ ಸಂಘಟನೆಗಳಿಗೆ ಸೇರಿದ ಪ್ರತಿಭಟನಾಕಾರರು “ಕದನ ವಿರಾಮ ಬೇಕು” ಎಂದು ಘೋಷಣೆ ಕೂಗಿದರು. “ಕದನ ವಿರಾಮ” ಮತ್ತು “ಯಹೂದಿಗಳು ಹೇಳುತ್ತಾರೆ, ಈಗ ಕದನ ವಿರಾಮ” ಎಂಬ ಫಲಕಗಳನ್ನು ಹೊತ್ತ ಯಹೂದಿ ಸಂಘಟನೆಗಳ ಸದಸ್ಯರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾದರು.

    ಪ್ರತಿಭಟನೆಗಳು ಶುರುವಾಗುತ್ತಿದ್ದಂತೆ ಯುಎಸ್​ ಕ್ಯಾಪಿಟಲ್​ನ ಮುಖ್ಯ ದ್ವಾರ ಮತ್ತು ನಿರ್ಗಮನ ಬಾಗಿಲುಗಳ ಬದಲಿಗೆ ಭೂಗತ ಸುರಂಗಗಳನ್ನು ಬಳಸಲು ಪೊಲೀಸರು, ಕ್ಯಾಪಿಟಲ್​ ಹಿಲ್​ ಸಿಬ್ಬಂದಿಗೆ ಸಲಹೆ ನೀಡಿದ್ದಾರೆ. ಪ್ರತಿಭಟನಾಕಾರರ ಕ್ಯಾಂಪಸ್​ ಪ್ರವೇಶವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸಂದರ್ಶಕರಿಗೆ ಒಂದೇ ಬಾಗಿಲಿಗೆ ಸೀಮಿತ ಪ್ರವೇಶದ ಬಗ್ಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಮತ್ತೆ ಹೋರಾಟಕ್ಕೆ ಮರಳುತ್ತೇವೆ: ಸುಪ್ರೀಂಕೋರ್ಟ್​ ಮುಂದೆಯೇ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗ ಜೋಡಿ!

    ನಿನ್ನೆ ಗಾಜಾದ ಅಲ್-ಅಹ್ಲಿ ಆಸ್ಪತ್ರೆ ಮೇಲೆ ನಡೆದ ರಾಕೆಟ್​ ದಾಳಿಯಲ್ಲಿ 500 ಮಂದಿ ಮೃತಪಟ್ಟಿದ್ದಾರೆ. ಈ ವಿಚಾರದಲ್ಲಿ ಇಸ್ರೇಲ್​ ಮತ್ತು ಪ್ಯಾಲೆಸ್ತೀನ್​ ಅಧಿಕಾರಿಗಳು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಇದರ ಬೆನ್ನಲ್ಲೇ ಪ್ಯಾಲೆಸ್ತೀನ್​ ಪರ ಬೆಂಬಲಿಗರು ಯುಎಸ್​ ಕ್ಯಾಪಿಟಲ್​ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಗಮನ ಸೆಳೆದು ಕದನ ತೀವ್ರತೆಗೆ ಅಂತ್ಯವಾಡಬೇಕು ಎಂಬುದು ಪ್ರತಿಭಟನಾಕಾರರ ಉದ್ದೇಶವಾಗಿದೆ. ಏಕೆಂದರೆ, ಅಮೆರಿಕ ಮತ್ತು ಇಸ್ರೇಲ್​ ಮಿತ್ರ ರಾಷ್ಟ್ರವಾಗಿದ್ದು, ಇಸ್ರೇಲ್​, ಅಮೆರಿಕ ಮಾತನ್ನು ಕೇಳುತ್ತದೆ.

    ನಿನ್ನೆ ಜೋ ಬೈಡೆನ್​ ಅವರು ಇಸ್ರೇಲ್​ಗೆ ಭೇಟಿ ನೀಡಿ, ಅಲ್ಲಿನ ಪ್ರಧಾನಿ ಬೆಂಜಮಿನ್​ ನೇತನ್ಯಾಹು ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಜೋ ಬೈಡೆನ್​ ಮನವಿಯಂತೆ ಗಾಜಾಗೆ ಸೀಮಿತ ಅಗತ್ಯಗಳನ್ನು ಪೂರೈಸಲು ನೇತನ್ಯಾಹು ಅನುಮತಿಸಿದ್ದಾರೆ.

    ಅಕ್ಟೋಬರ್​ 7ರಂದು ಮುಂಜಾನೆ ಹಮಾಸ್​​ ಉಗ್ರರು 5000 ರಾಕೆಟ್​ಗಳಿಂದ ಇಸ್ರೇಲ್​ ಮೇಲೆ ದಿಢೀರ್​ ದಾಳಿ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್​ ಹಮಾಸ್​ ಉಗ್ರರ ಮೇಲೆ ದಾಳಿ ನಡೆಸಿದ್ದು, ಹಮಾಸ್​ ಮತ್ತು ಇಸ್ರೇಲ್​ ನಡುವಿನ ಯುದ್ಧ ಮುಂದುವರಿದಿದೆ. ಸದ್ಯ ಎರಡೂ ಕಡೆಗಳಿಂದ 4 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. (ಏಜೆನ್ಸೀಸ್​)

    ಪತ್ನಿಗೆ ಅಡುಗೆ ಮಾಡಲು ಬರಲ್ಲ ಅಂತ ಡಿವೋರ್ಸ್​ ಕೇಳಿದ ಗಂಡ: ಹೈಕೋರ್ಟ್​ ಕೊಟ್ಟ ತೀರ್ಪು ಹೀಗಿದೆ….

    ಭಾರತವನ್ನು ಸೋಲಿಸಲು ಬಾಂಗ್ಲಾಗೆ ಮೆಗಾ​ ಆಫರ್​ ಕೊಟ್ಟ ಪಾಕಿಸ್ತಾನದ ಸೆಹರ್​ ಶಿನ್ವಾರಿ ಹಿನ್ನೆಲೆ ಏನು?

    ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts