More

    ಹಾಲು ಒಕ್ಕೂಟಗಳ ಮುಂದೆ ಪ್ರತಿಭಟನೆ ಎಚ್ಚರಿಕೆ

    ಶಿವಮೊಗ್ಗ: ಹಾಲು ಒಕ್ಕೂಟಗಳು ಆರ್ಥಿಕ ಸಂಕಷ್ಟವನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳಬೇಕು. ಹಾಲು ಉತ್ಪಾದಕರ ಮೇಲೆ ಹೇರಿದರೆ ಬಿಜೆಪಿ ಸುಮ್ಮನೆ ಇರಲ್ಲ. ವಾರದೊಳಗೆ ರೈತರಿಗೆ ದರ ಕಡಿತ ಮಾಡಿರುವ ಆದೇಶ ಹಿಂಪಡೆಯದಿದ್ದರೆ ಪ್ರತಿ ಒಕ್ಕೂಟದ ಎದುರು ಪ್ರತಿಭಟನೆ ನಡೆಸಲಾಗುವುದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಎಚ್ಚರಿಕೆ ನೀಡಿದರು.

    ಹಾಲು ಒಕ್ಕೂಟಗಳ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿವೆ. ಪ್ರತಿ ಒಕ್ಕೂಟಗಳೂ ಸರಾಸರಿ 25 ಕೋಟಿ ರೂ. ನಷ್ಟದಲ್ಲಿವೆ. ರೈತರಿಗೆ ದರ ಹೆಚ್ಚಳ ಮಾಡುವ ಸಂಬಂಧ ಗ್ರಾಹಕರ ಹಾಲಿನ ದರ 3 ರೂ. ಹೆಚ್ಚಳ ಮಾಡಿದ್ದರು. ಕಾಂಗ್ರೆಸ್ 5ರಿಂದ 7 ರೂ. ಪ್ರೋತ್ಸಾಹ ಧನ ನೀಡುವುದಾಗಿ ಹೇಳಿತ್ತು. ಆದರೆ ಯಡಿಯೂರಪ್ಪ ಸರ್ಕಾರ ನೀಡಿದ್ದ 5 ರೂ. ಪ್ರೋತ್ಸಾಹ ಧನ ಸ್ಥಗಿತಗೊಳಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಳೆದ ಜೂನ್‌ನಿಂದ ಪ್ರೋತ್ಸಾಹ ಧನ ನಿಲ್ಲಿಸಲಾಗಿದೆ. ಹಾಲಿನ ಒಕ್ಕೂಟಗಳು ಉಳಿಯಬೇಕಿದೆ. ಆದರೆ ಅದೇ ನೆಪದಲ್ಲಿ ರೈತರಿಗೆ ಹೊರೆ ಮಾಡುವುದು ಸರಿಯಲ್ಲ. 1200 ರೂ. ಇದ್ದ ಪಶು ಆಹಾರವನ್ನು ಒಂದು ಚೀಲಕ್ಕೆ 50 ರೂ. ಹೆಚ್ಚಳ ಮಾಡಲಾಗಿದೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts