More

    ಕೃಷಿ ಜತೆಗೆ ಹೈನುಗಾರಿಕೆಗೆ ಆದ್ಯತೆ ನೀಡಿ

    ವಿಜಯವಾಣಿ ಸುದ್ದಿಜಾಲ ಹಿರೇಕೆರೂರ

    ರೈತರು ಉಪಕಸಬುಗಳಲ್ಲಿ ಒಂದಾದ ಹೈನುಗಾರಿಕೆಗೆ ಆದ್ಯತೆ ನೀಡಿದಲ್ಲಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಶಂಕರಪ್ಪ ಮೊಗದ ಹೇಳಿದರು.

    ಪಟ್ಟಣದ ಹಾಲು ಶೀಥಲೀಕರಣ ಘಟಕದ ಆವರಣದಲ್ಲಿ ಭಾನುವಾರ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಧಾರವಾಡ ಹಾಲು ಒಕ್ಕೂಟದ ಗುಣಮಟ್ಟ ಸುಧಾರಣೆ ಯೋಜನೆಯಡಿ 1.30 ಕೋಟಿ ರೂ. ಅನುದಾನದಲ್ಲಿ ಕಚೇರಿ ಕಟ್ಟಡ ನಿರ್ವಣ, ಮೂಲ ಸೌಕರ್ಯ, ಗುಣಮಟ್ಟದ ಯಂತ್ರೋಪಕರಣ ಒದಗಿಸುವುದು ಮತ್ತು ಶೀಥಲೀಕರಣ ಘಟಕದ ನವೀಕರಣ ಮಾಡಲಾಗುವುದು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ಮಾತನಾಡಿ, ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರತಿ ನಿತ್ಯ 2.40 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಿಂದ ಪ್ರತಿ ದಿನ 45-50 ಸಾವಿರ ಲೀಟರ್ ಗುಣಮಟ್ಟದ ಹಾಲು ಸಂಗ್ರಹವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಕ್ಕೂಟದಿಂದ ಹೈನು ಉದ್ಯಮಕ್ಕೆ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

    ಕೆ.ಎಂ.ಎಫ್. ಪ್ರತಿನಿಧಿ ಎಚ್.ಜಿ. ಹಿರೇಗೌಡರ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ ಬಣವಿ, ಶಂಕರ ಹೆಗಡೆ, ಮಂಜುನಥಗೌಡ ಪಾಟೀಲ, ಬಸನಗೌಡ ಮೇಲಿನಮನಿ, ಸಹಕಾರಿ ಇಲಾಖೆ ಉಪನಿಬಂಧಕ ನಾಗಪ್ಪ ಕುಮ್ಮುರ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್.ಜಿ. ಸುಣಗಾರ, ಜಗದೀಶ ಮಾಳಗಿ, ರುದ್ರೇಶ, ಡಾ. ಬಸನಗೌಡ, ಎಂ.ಬಿ. ಬಣಕಾರ, ಪ್ರವೀಣ ಮಾಳೆಯವರ, ತಾಲೂಕಿನ ಸರ್ವ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಾಹಕರು ಮತ್ತು ಶೀಥಲೀಕರಣದ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts