More

    ಹಿರೇಕೆರೂರ ಕ್ಷೇತ್ರಕ್ಕೆ 25 ಕೋಟಿ ರೂ. ಮಂಜೂರು

    ರಟ್ಟಿಹಳ್ಳಿ: ಹಿರೇಕೆರೂರ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 25 ಕೋಟಿ ರೂ. ಅನುದಾನ ಮಂಜೂರಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಕ್ಷೇತ್ರದ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ 6.60 ಕೋಟಿ ರೂ. ಮತ್ತು ಕ್ಷೇತ್ರದ ವ್ಯಾಪ್ತಿಯ ಅಲ್ಪಸಂಖ್ಯಾತ ಇಲಾಖೆಗೆ 4 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

    ಪಟ್ಟಣದ ವ್ಯಾಪ್ತಿಯ ತೋಟಗಂಟಿ ಗ್ರಾಮದ ಬಳಿ ಸೇತುವೆ ಸಹಿತ ಬಾಂದಾರ ಬಳಿ ರಸ್ತೆ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    25 ಕೋಟಿ ರೂ. ನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ 4 ಕೋಟಿ ರೂ. ನೀಡಿದ್ದು, ವಿವಿಧಡೆ ಒಟ್ಟು 15 ಕಾಮಗಾರಿ ಮಾಡಲಾಗುತ್ತಿದೆ. ರಟ್ಟಿಹಳ್ಳಿ ಖಬರಸ್ತಾನ ರಕ್ಷಣಾ ಗೋಡೆ ನಿರ್ಮಾಣಕ್ಕೆ 25 ಲಕ್ಷ ರೂ., ಹಿರೇಮಾದಾಪುರ ಗ್ರಾಮದ ಜಾಮ ಮಸೀದಿ ಬಳಿ ಮದರಸಾ ನಿರ್ಮಾಣಕ್ಕೆ 20 ಲಕ್ಷ ರೂ., ಕುಡುಪಲಿ ಗ್ರಾಮದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ 30 ಲಕ್ಷ ರೂ., ಕುಡುಪಲಿ ಗ್ರಾಮದ ಚರ್ಚ ದುರಸ್ಥಿಗೆ 15 ಲಕ್ಷ, ಪರ್ವತ ಸಿದ್ದಗೇರಿ ಗ್ರಾಮದಲ್ಲಿ ಶಾದಿಮಹಲ್ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ನೀಡಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ 7 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 2 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಗೆ 2 ಕೋಟಿ ರೂ., ಹಿರೇಕೆರೂರು ಮತ್ತು ರಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ 2 ಕೋಟಿ 90 ಲಕ್ಷ ರೂ., ಹಿರೇಕೆರೂರು ತಾಲೂಕು ಕ್ರೀಡಾಂಗಣ ನೆಲ ಸಮತಟ್ಟು ಮಾಡಲು 50 ಲಕ್ಷ ರೂ., ರಟ್ಟಿಹಳ್ಳಿ ಪಟ್ಟಣದ ಅಗ್ನಿಶಾಮಕ ಠಾಣೆಯ ಬಳಿ ಸಿ.ಡಿ. ಮತ್ತು ರಸ್ತೆ ನಿರ್ಮಾಣಕ್ಕೆ 40 ಲಕ್ಷ ರೂ. ಅನುದಾನ ಮತ್ತು ಕ್ಷೇತ್ರದ ಅಲ್ಪಸಂಖ್ಯಾತರ ಕಾಲನಿಗಳ ಅಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.

    ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಮಾತನಾಡಿ, ತೋಟಗಂಟಿ ಗ್ರಾಮದ ಬಳಿ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಅಂದಾಜು ಮೊತ್ತ 8 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರ, ರವೀಂದ್ರ ಮುದಿಯಪ್ಪನವರ, ನಾಗನಗೌಡ ಕೋಣ್ತಿ, ವಿಜಯ ಅಂಗಡಿ, ದ್ಯಾಮನಗೌಡ ಕಡೂರು, ಪರಮೇಶಪ್ಪ ಕಟ್ಟೇಕಾರ, ಮಹ್ಮದ್‌ಹುಸೇನ್ ಖಾಜಿ, ಮಂಜುನಾಥ ಮಾಸೂರು, ಬೀರೇಶ ಕರಡಣ್ಣನವರ, ನಾಗನಗೌಡ ಪಾಟೀಲ, ಕುಬೇರಪ್ಪ ಗುಬ್ಬಿ, ರುದ್ರಗೌಡ ಪಾಟೀಲ, ಸೋಮನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಶಂಕ್ರಗೌಡ ದೊಡ್ಡಗೌಡ್ರ, ಪರಮೇಶಪ್ಪ ಗುಬ್ಬಿ, ಉಮೇಶಗೌಡ ಪಾಟೀಲ, ಕರಬಸಪ್ಪ ಹೊಸಳ್ಳಿ, ಮಹೇಶ ಗುಬ್ಬಿ, ಆನಂದಪ್ಪ ಓಲೇಕಾರ, ಶಿವಪ್ಪ ಚಿಕ್ಕಮೊರಬ, ಹುಸೇಮಿಯ ಜಡದಿ, ಅಬ್ಬಾಸ ಗೋಡಿಹಾಳ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts