More

    ಹಂಚಿನಾಳ ದಲಿತ ಕೇರಿಯಲ್ಲಿ ಪ್ರತಿಭಟನೆ

    ಕುಂದಗೋಳ: ತಾಲೂಕಿನ ಹಂಚಿನಾಳ ಗ್ರಾಮದ ದಲಿತ ಕೇರಿಗೆ ಮೂಲಸೌಕರ್ಯ ಕಲ್ಪಿಸಿದಿರುವುದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಯಿತು.

    ಸಮಿತಿ ಅಧ್ಯಕ್ಷ ಸುರೇಶ ಕಾನಾಪೂರ ಮಾತನಾಡಿ, ಗ್ರಾಮದ ದಲಿತ ಕೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಇರುವ ಒಂದೇ ಟ್ಯಾಂಕ್ ಮಲೀನವಾಗಿದೆ. ಸಿ.ಸಿ. ರಸ್ತೆ, ಚರಂಡಿ ವ್ಯವಸ್ಥೆ, ಬೀದಿದೀಪಗಳ ವ್ಯವಸ್ಥೆಯಿಲ್ಲ. 2021-22, 2022-23ನೇ ಸಾಲಿನ ಎಸ್‌ಟಿಪಿ/ಎಸ್‌ಸಿಪಿ ಅನುದಾನ ಕ್ರಮವಾಗಿ 7.51 ಲಕ್ಷ, 7.13 ಲಕ್ಷ ರೂಪಾಯಿ ತಾಲೂಕಿನಲ್ಲಿ ಬಳಕೆಯಾದರೂ ದಲಿತ ಕೇರಿ ಇಂತಹ ಸ್ಥಿತಿಯಲ್ಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ತಾಪಂ ಇಒ ಸ್ಥಳಕ್ಕೆ ಬರುವವರೆಗೆ ಧರಣಿ ನಿಲ್ಲಿಸುವುದಿಲ್ಲ ಎಂದರು.

    ಸಮಿತಿ ತಾಲೂಕು ಅಧ್ಯಕ್ಷ ಉಮೇಶ ಮಾದರ ಮಾತನಾಡಿ, ನಾವು ಅನೇಕ ಬಾರಿ ತಾಪಂ, ಗ್ರಾಪಂಗೆ ಮನವಿ ಸಲ್ಲಿಸಿದರೂ, ಸ್ಪಮದನೆ ಸಿಕ್ಕಿಲ್ಲ. ನಮ್ಮ ಹಕ್ಕಿಗಾಗಿ ಈ ಧರಣಿ ಮಾಡುತಿದ್ದೇವೆ ಎಂದರು.

    ತಾಪಂ ಇಒ ಜಗದೀಶ ಕಮ್ಮಾರ ಅವರು ಸಂಜೆಯ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದರು. ನಾನು ಇಂದು ಅಧಿಕಾರಿ ವಹಿಸಿಕೊಂಡಿದ್ದೇನೆ. ಗಟಾರ ಸ್ವಚ್ಛತೆ, ನೀರು ವ್ಯವಸ್ಥೆ, ಬೀದಿದೀಪಗಳ ವ್ಯವಸ್ಥೆಯನ್ನು ಜ. 17ರೊಳಗಾಗಿ ಮಾಡುತ್ತೇವೆ. ಇನ್ನೂ ಜೆಜೆಎಂ ಮಾಹಿತಿ ಹಾಗೂ ಅನುದಾನ ಬಳಕೆ ಬಗ್ಗೆ ಜ. 17ರಂದು ಇಲ್ಲಿಯೇ ಸಭೆ ಮಾಡಿ ಇತ್ಯರ್ಥಪಡಿಸುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು, ನೀವು ನಿಡಿದ ಸಮಯದೊಳಗಾಗಿ ಕಾರ್ಯವಾಗದಿದ್ದರೆ, ದೊಡ್ಡ ಹೋರಾಟ ಮಾಡುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

    ಸಮಿತಿ ತಾಲೂಕು ಉಪಾಧ್ಯಕ್ಷ ಅಶೋಕ ಸಂಶಿ, ತಾಲೂಕು ಉಸ್ತುವಾರಿ ಸಮಿತಿ ಸದಸ್ಯ ಪರಶುರಾಮ ವೀರನಾಯ್ಕರ, ಖಜಾಂಚಿ ನಾಗರಾಜ ಮಾದರ, ಜಿಲ್ಲಾಧ್ಯಕ್ಷ ಸಿದ್ದಾರ್ಥ ಮಲಮ್ಮನವರ, ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಮಲ್ಲಮ್ಮನವರ, ಹಿರಿಯರಾದ ಕೋಟೇಶ ಹಂಚಿನಮನಿ, ಆನಂದ ಮಾದರ, ಮಹಿಳೆಯರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts