More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

    ಸವಣೂರ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅನಿಲಕುಮಾರ ಜಿ. ಅವರಿಗೆ ಮನವಿ ಸಲ್ಲಿಸಿದರು.

    ನಿರಂತರ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ಹಾಳಾಗಿವೆ. ತಕ್ಷಣವೇ ಪರಿಹಾರ ನೀಡಬೇಕು. ತಾಲೂಕಿನ ರೈತರ ಪಹಣಿಯಲ್ಲಿರುವ ಸರ್ಕಾರದ 15 ವರ್ಷ ಪರಾಧೀನ ಮಾಡುವ ಷರತ್ತು, ಕಾಲಂ 6ರಲ್ಲಿ ಹಾಗೂ ಚಾಲ್ತಿ ಪಹಣಿಯಲ್ಲಿನ ತಪ್ಪು ತಿದ್ದುಪಡಿಗೆ ಅವಕಾಶ ಕಲ್ಪಿಸಬೇಕು. ಬಿದ್ದ ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಕೂಡಲೆ ಮರು ನಿರ್ವಣಕ್ಕೆ ಆದೇಶ ನೀಡಬೇಕು. ಸವಣೂರ ಏತ ನೀರಾವರಿ ಯೋಜನೆಯಡಿ ಪೈಪ್​ಲೈನ್ ಅಳವಡಿಸಲು ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ವಿತರಿಸಬೇಕು.

    ಅಲ್ಲಿಪುರ ಗ್ರಾಮದಲ್ಲಿಯೇ ಪಡಿತರ ವಿತರಣೆಗೆ ಕ್ರಮಕೈಗೊಳ್ಳಬೇಕು. ಗ್ರಾಮದ ಕೆರೆ ತುಂಬಿಸುವ ಯೋಜನೆ ಹಾಗೂ ಯಲವಿಗಿ ರೈಲು ಹಳಿ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೂವಿನಶಿಗ್ಲಿ-ಸಂತೆಶಿಗ್ಲಿ ರಸ್ತೆ ದುರಸ್ತಿಪಡಿಸಬೇಕು. ಶಿಗ್ಲಿ ಗ್ರಾಮದ ವಿರಕ್ತಮಠದ ಎದುರಿನ ಹಳ್ಳಕ್ಕೆ ಬ್ರಿಜ್ ನಿರ್ವಿುಸಬೇಕು ಎಂದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಮನವಿ ಸ್ವೀಕರಿಸಿದ ತಹಸೀಲ್ದಾರ್, ಬೆಳೆ ಹಾಗೂ ಮನೆ ಹಾನಿಗೆ ಪರಿಹಾರ ವಿತರಣೆ ಕಾರ್ಯ ನಡೆಯುತ್ತಿದೆ. ಉಳಿದ ಬೇಡಿಕೆ ಈಡೇರಿಸಲಾಗುವುದು ಎಂದರು.

    ಸಂಘದ ಪದಾಧಿಕಾರಿಗಳಾದ ಚನ್ನಪ್ಪ ಮರಡೂರ, ರಮೇಶ ದೊಡ್ಡೂರ, ಬಸನಗೌಡ ಅರಳಿಕಟ್ಟಿ, ನಾಗರಾಜ ಬಳ್ಳಾರಿ, ಫಕೀರಪ್ಪ ಜೋಗೇರ, ಸತೀಶ ದೇವಿಹೊಸೂರ, ಅಬ್ದುಲ ಬುಡಂಗಿ, ನೂರಅಹ್ಮದ ಮುಲ್ಲಾ, ಮಂಜುನಾಥ ಅರಕಾರಿ, ರವಿ ದೊಡ್ಡಮನಿ, ಶಂಕ್ರಪ್ಪ ಬಿಷ್ಟಣ್ಣನವರ, ಸುರೇಶ ವಾಲ್ಮೀಕಿ, ಶೇಖಪ್ಪ ಹಡಪದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts