More

    ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

    ಗುತ್ತಲ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಕೊರಡೂರ ಗ್ರಾಮದ ಅಂಬೇಡ್ಕರ್ ಕಾಲನಿಯ ನಿವಾಸಿಗಳು ಕಿತ್ತೂರ ಗ್ರಾ.ಪಂ.ಗೆ ಬೀಗ ಜಡಿದು ನಡೆಸುತ್ತಿರುವ ಧರಣಿ ಮಂಗಳವಾರ ಎರಡು ದಿನ ಪೂರೈಸಿದೆ. ಪರಿಹಾರ ನೀಡುವವರೆಗೆ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ‘ಇಲ್ಲಿಯವರೆಗೂ ಶಾಸಕರಾಗಲಿ ಅಥವಾ ಊರಿನವರೇ ಆದ ಜಿ.ಪಂ ಸದಸ್ಯರಾಗಲಿ ನಮ್ಮ ಸಮಸ್ಯೆ ಆಲಿಸಲು ಬಂದಿಲ್ಲ. ಆದರೆ, ನೂತನ ಗ್ರಾ.ಪಂ ಸದಸ್ಯರು ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ’ ಎಂದು ಧರಣಿ ನಿರತ ಮಹದೇವಪ್ಪ ಸಣ್ಣತಂಗೇರ ಹೇಳಿದರು.

    ಸಂಜಯಗಾಂಧಿ ಸಂಜೀವಣ್ಣನವರ, ಫಕೀರೇಶ ಮತ್ತೂರ, ಗ್ರಾ.ಪಂ. ಮಾಜಿ ಸದಸ್ಯ ಚನ್ನಪ್ಪ ಅರಳಿ, ನಿಂಗಪ್ಪ ಮಾಳಗಿ, ಸುನಿತಾ ಮಾಳಗಿ, ಮರಿಯವ್ವ ಸಣ್ಣತಂಗೇರ, ನೀಲವ್ವ ಸಂಕಮ್ಮನವರ, ಮರಿಯವ್ವ ಮಾಳಗಿ, ಪುಟ್ಟವ್ವ ಮುದಕಪ್ಪನವರ, ಶಾಂತವ್ವ ಸಣ್ಣತಂಗೇರ, ದುರಗವ್ವ ಮುದಕಪ್ಪನವರ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

    25 ಮನೆ ಪರಿಶೀಲನೆ: ತಹಸೀಲ್ದಾರ್ ಆದೇಶದ ಅನ್ವಯ ಪಿಡಿಒ ಶಾರದಾ ಜಾಲವಾಡಿ ಹಾಗೂ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಎಇ ಜಿ. ರಾಘವೇಂದ್ರ ಅವರು ಧರಣಿ ನಿರತ 42 ಜನರ ಮನೆಗಳ ಪೈಕಿ 25 ಮನೆಗಳನ್ನು ಮಂಗಳವಾರ ಪರಿಶೀಲಿಸಿದರು. ಉಳಿದ 17 ಮನೆಗಳ ಪೈಕಿ ಕೆಲವಕ್ಕೆ ಸಿ ಕೆಟಗರಿಯಲ್ಲಿ ಪರಿಹಾರ ವಿತರಣೆಯಾಗಿದ್ದರೆ, ಕೆಲವು ಅರ್ಜಿಗಳು ಗ್ರಾ.ಪಂ. ಹಂತದಲ್ಲಿಯೇ ತಿರಸ್ಕೃತಗೊಂಡ ಕಾರಣ ಪರಿಶೀಲಿಸಿಲ್ಲ ಎಂದು ರಾಘವೇಂದ್ರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts