More

    ಆನ್​ಲೈನ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

    ಅಕ್ಕಿಆಲೂರ: ಐಟಿಐ ಆನ್​ಲೈನ್ ಪರೀಕ್ಷೆ ರದ್ದತಿಗೆ ಆಗ್ರಹಿಸಿ ಐಟಿಐ ಕಾಲೇಜ್ ವಿದ್ಯಾರ್ಥಿಗಳು ಎಬಿವಿಪಿ, ಎಸ್​ಎಫ್​ಐ ಘಟಕಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

    ‘ವಿವಿಧ ಕೋರ್ಸ್​ಗಳ ಆನ್​ಲೈನ್ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ. ಪರೀಕ್ಷೆ ಹಿಂದಿನ ದಿನ ರಾತ್ರಿ ಪರೀಕ್ಷೆ ಎಲ್ಲಿ? ಯಾವ ಸಮಯಕ್ಕೆ ?ಎಂದು ತಿಳಿಯುತ್ತಿದೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದಾರೆ. ಹಾವೇರಿ ಜಿಲ್ಲೆಯ ಐಟಿಐ ಪರೀಕ್ಷೆ ಕೇಂದ್ರಗಳಾದ ಅಕ್ಕಿಆಲೂರ, ಗುತ್ತಲಗಳಲ್ಲಿ ಆನ್​ಲೈನ್ ಮೂಲಕ ಪರೀಕ್ಷೆ ಬರೆಯಲು 30 ಕಂಪ್ಯೂಟರ್ ವ್ಯವಸ್ಥೆ ನೀಡಲಾಗಿದೆ. ಆನ್​ಲೈನ್ ಪರೀಕ್ಷೆಯಲ್ಲಿ ಸರಿ ಉತ್ತರ ನೀಡಿದರೂ ತಪ್ಪು ಉತ್ತರ ತೋರಿಸುತ್ತಿದೆ. 3 ಗಂಟೆ ಪರೀಕ್ಷೆ 2 ಗಂಟೆಗೆ ಸ್ಥಗಿತವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೆ ಆನ್​ಲೈನ್ ಪರೀಕ್ಷೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

    ಐಟಿಐ ಕಾಲೇಜ್​ಗಳ ಜಿಲ್ಲಾ ನೋಡಲ್ ಅಧಿಕಾರಿ ಸುಭಾಸ್ ಗೌಡರ್ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts