More

    ಬೇಡಿಕೆಗೆ ಸ್ಪಂದಿಸದಿದ್ರೆ ಎಲೆಕ್ಷನ್‌ನಲ್ಲಿ ಪಾಠ

    ಚಿಂಚೋಳಿ: ಗೊಂಡ ಸಮಾಜವನ್ನು ಕುರುಬ ಸಮುದಾಯದ ಪರ್ಯಾಯ ಪದವೆಂದು ಪರಿಗಣಿಸಬೇಕು, ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದಲ್ಲಿ ಕಾಗಿನೆಲೆ ಪೀಠ ಟ್ರಸ್ಟ್ ಹಾಗೂ ಗೊಂಡ ಕುರುಬ ಸಂಘದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಗೊಂಡ ಕುರುಬ ಸಂಘದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ಮಾತನಾಡಿ, ರಾಜ್ಯದ ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಗೊಂಡ ಸಮುದಾಯದವರು ಕುರುಬರೇ ಎಂದು ಶತಮಾನಗಳಿಂದ ಹೇಳುತ್ತಿದ್ದರು, ರಾಜಕೀಯ ಪಕ್ಷಗಳು, ಸರ್ಕಾರಗಳು ಪರಿಗಣಿಸುತ್ತಿಲ್ಲ. ಯಾವುದೇ ಸೌಕರ್ಯ ನೀಡದೆ ವಂಚಿಸುತ್ತಿವೆ ಎಂದು ದೂರಿದರು.

    ರಾಜ್ಯ ಸರ್ಕಾರ ಸಮಗ್ರ ವರದಿಯನ್ನು ಕೇಂದ್ರಕ್ಕೆ ಕಳಿಸಿದ್ದು, ಈ ಭಾಗದ ಕೇಂದ್ರ ಸಚಿವರು, ಸಂಸದರು ಧ್ವನಿ ಎತ್ತುವ ಮೂಲಕ ಗೊಂಡ ಕುರುಬರಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ನಿರ್ಲಕ್ಷ್ಮ ವಹಿಸದರೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ, ತಾಲೂಕು ಅಧ್ಯಕ್ಷರಾದ ಹಣಮಂತ ಪೂಜಾರಿ (ಚಿಂಚೋಳಿ), ರೇವಣಸಿದ್ದಪ್ಪ ಅಣಕಲ್ (ಕಾಳಗಿ) ಮಾತನಾಡಿದರು.

    ಪ್ರಮುಖರಾದ ಗೋಪಾಲ ಗಾರಂಪಳ್ಳಿ, ಕೃಷ್ಣಪ್ಪ ಮಿರಿಯಾಣ, ಸಂತೋಷ ಮಾಳಪ್ಪನೊರ, ರಾಜುಕುಮಾರ ಮರಪಳ್ಳಿ, ಮಹಾದೇವಪ್ಪ ಚಿಮ್ಮಇದಲಾಯಿ, ವೆಂಕಟೇಶ, ಬಾಬು ಪೂಜಾರಿ, ಅಶೋಕ ಪೂಜಾರಿ, ಪರಮೇಶ್ವರ ಪೂಜಾರಿ, ಮಲಕಪ್ಪ ಪೂಜಾರಿ, ಹಣಮಂತ ಬೆಂಕಿ, ಅಭಿಷೇಕ ಮಲಕನೂರ, ದೇವಿಂದ್ರಪ್ಪ ಸಾತನೂರ, ಗುರುನಾಥ ಪೂಜಾರಿ, ರಾಜು ಕನಕಪುರ, ಬಂಡೆಪ್ಪ ಅಣವಾರ, ಸುಭಾಷ ಐನೋಳ್ಳಿ, ಹಣಮಂತ ಹಿರೇಮನಿ, ಜಗನ್ನಾಥ ಪೆಚ್ಚಪಳ್ಳಿ, ನಾಗಪ್ಪ ಯಜ್ಮಡಗಿ, ಸೋಮಶೇಖರ ಚಿಂಚೋಳಿ, ರವಿ ಗೊಲ್ಲಾ, ಸಂಗಮೇಶ ಪಿ., ಚಂದ್ರಕಾಂತ ಮಿರಿಯಾಣ ಇತರರಿದ್ದರು.

    ಬಸ್ ನಿಲ್ದಾಣದಿಂದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಮಾಜದ ಕೆಲವರು ಆದಿವಾಸಿ ಬುಡಕಟ್ಟು ಜನಾಂಗದ ಉಡುಪಿನೊಂದಿಗೆ ಹೆಜ್ಜೆ ಹಾಕಿ ಗಮನಸೆಳೆದರು. ಶಿರಸ್ತೇದಾರ ರಘುನಾಥ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts