More

    ಜಲಮೂಲಗಳ ರಕ್ಷಣೆ ಯುವಕರ ಜವಾಬ್ದಾರಿ

    ಕೋಲಾರ: ಜಲಮೂಲಗಳನ್ನು ರಸಿಕೊಳ್ಳುವ ಜವಾಬ್ದಾರಿ ಯುವಕರ ಮೇಲಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಹಸೀಲ್ದಾರ್​ ಹರ್ಷವರ್ಧನ್​ ಹೇಳಿದರು.

    ತಾಲೂಕಿನ ಲಕ್ಷ್ಮಿಸಾಗರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಹಾಗೂ ಬೆಗ್ಲಿ ಗ್ರಾಪಂ, ಲಕ್ಷ್ಮಿಸಾಗರ ಕೆರೆ ಅಭಿವೃದ್ಧಿ ಸಮಿತಿ, ಮತ್ತು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ 632ನೇ ನಮ್ಮೂರು ನಮ್ಮ ಕೆರೆ ಹಸ್ತಾಂತರ ಹಾಗೂ ಸಾಮೂಹಿಕ ಲಕ್ಷ್ಮಿ ಪೂಜೆಯಲ್ಲಿ ಮಾತನಾಡಿದರು. ಕೆರೆಗಳು ಪೂರ್ವಜರ ಆಸ್ತಿ. ಪ್ರತಿಯೊಬ್ಬರ ಜೀವನಾಡಿಯಾಗಿರುವ ಕೆರೆಗಳು ಮಾತ್ರ ಇತ್ತೀಚಿನ ದಿನಗಳಲ್ಲಿ ಒತ್ತುವರಿಗೆ ಒಳಗಾಗುತ್ತಿವೆ. ಕೆರೆಯ ಸ್ವರೂಪವನ್ನು ಹಾಳು ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
    ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕಸದ ಬುಟ್ಟಿಗಳಾಗಿರುವ ಕೆರೆಗಳನ್ನು ಧರ್ಮಸ್ಥಳ ಸಂಸ್ಥೆಯಿಂದ ಅಭಿವೃದ್ಧಿಪಡಿಸುವ ಮೂಲಕ ಜನರ ರಕ್ಷಣೆಗೆ ನೀಡುವ ಕೆಲಸವಾಗುತ್ತಿದೆ ಎಂದರು.
    ರಾಜ್ಯದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ 6 ಲಕ್ಷ 50 ಸಾವಿರ ಸಂಘಗಳು ಇದ್ದು, ಸುಮಾರು 3 ಕೋಟಿ 50 ಸಾವಿರ ಜನರನ್ನು ತಲುಪಿದೆ. ಕೋಲಾರ ತಾಲೂಕಿನಲ್ಲಿ ಸುಮಾರು 40 ಸಾವಿರ ಮಂದಿ ಸ್ವ ಸಹಾಯ ಸಂಘಗಳಲ್ಲಿ ಇದ್ದಾರೆ, ನಾನಾ ಸೌಲಭ್ಯವನ್ನು ಧರ್ಮಸ್ಥಳ ಸಂಸ್ಥೆಯಿಂದ ನೀಡಲಾಗಿದೆ. ಇದನ್ನು ಸರಿಯಾಗಿ ರೀತಿಯಲ್ಲಿ ಸದಸ್ಯರು ಸದುಪಯೋಗಪಡಿಸಿಕೊಳ್ಳುವ ಸ್ವಾವಲಂಬನೆ ಜೀವನಕ್ಕೆ ಸಾಕ್ಷಿಯಾಗಿ ಮಾದರಿಯಾಗಬೇಕು ಎಂದು ಕಿವಿಮಾತು ಹೇಳಿದರು.
    ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್​ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ಯಾವುದೇ ನದಿ ನಲೆಗಳು ಇಲ್ಲದೆ, ಇದ್ದರೂ 4 ಸಾವಿರದ 800 ಕೆರೆಗಳ ನಿಮಾರ್ಣದಲ್ಲಿ ಇತಿಹಾಸವನ್ನು ಮಾಡಿದೆ. ಇಂದು ಅರ್ಧದಷ್ಟು ಕೆರೆಗಳು ಸ್ವರೂಪವಿಲ್ಲದ ಹಂತದಲ್ಲಿದ್ದು, ಧರ್ಮಸ್ಥಳ ಸಂಸ್ಥೆಯಿಂದ ಕೆರೆಗಳ ಪ್ರಗತಿಗೆ ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
    ಬೆಗ್ಲಿಹೊಸಳ್ಳಿ ಗ್ರಾ.ಪಂ ಪಿಡಿಒ ರವಿ, ಉಪಾಧ್ಯಕ್ಷೆ ಪಾರ್ವತಮ್ಮ ಮುನಿಸ್ವಾಮಿ, ಸದಸ್ಯ ಚಲಪತಿ, ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್​, ಕೆರೆ ಸಮಿತಿ ಅಧ್ಯಕ್ಷ ಎಲ್​.ಆರ್​.ಮಂಜುನಾಥ್​, ಧರ್ಮಸ್ಥಳ ಸಂಸ್ಥೆ ಕೆರೆ ಅಭಿಯಂತ ಕೆ.ಅರುಣ್, ತಾಲೂಕು ಯೋಜನಾಧಿಕಾರಿ ಸಿದ್ದಗಂಗಯ್ಯ, ಸಂಸ್ಥೆಯ ವಿ.ಸಂಧ್ಯಾ, ಕೃಷಿ ಮೇಲ್ವಿಚಾರಕ ವಿಜಯ್​ ಕುಮಾರ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts