More

    ಬೆಂಗಳೂರಿನಲ್ಲಿ ಆಫ್ರಿಕಾ ಮಹಿಳೆಯರ ವೇಶ್ಯಾವಾಟಿಕೆ ದಂಧೆ; ಪೊಲೀಸರ ಮುಂದೇ ಅರೆ ನಗ್ನಳಾಗಿ ಕೂಗಾಡಿದ ಮಹಿಳೆ

    ಬೆಂಗಳೂರು: ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳ ವಿರುದ್ಧ ಪೂರ್ವ ವಿಭಾಗ ಪೊಲೀಸರು ಸೋಮವಾರ (ಮಾ.16) ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿ 9 ಮಹಿಳೆಯರನ್ನು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ನ್ಡವಿ ಶಿಮಿಗೆ ಸೇಂಟಿ (26), ಉಗಾಂಡದ ನಸ್ಸಾಝಿ ಐಶಾ (34), ಮರಿಯಾ ನಲ್ವಾಡ (26), ತಾಂಜೇನಿಯಾದ ಮರಿಯಾ ಕೊಂಬಾ (33), ಉಗಾಂಡದ ನಮಿಯಾ ರೆಬೆಕ್ಕಾ (28), ತುಮೈನಿ (34), ನೈಜೀರಿಯಾದ ಮರಿಮಾ (26), ಲೊವೇತ್ (31), ಅಗಿಮ್ ಮೊನಿಕಾ (29) ಬಂಧಿತರು. ಇವರು ವಿರುದ್ಧ ಪ್ರತ್ಯೇಕ ಐದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೂರ್ವ ವಿಭಾಗ ಡಿಸಿಪಿ ಡಾ.ಎಸ್. ಡಿ. ಶರಣಪ್ಪ ತಿಳಿಸಿದ್ದಾರೆ.

    ಬಾಣಸವಾಡಿ ರಸ್ತೆಬದಿ ರಾತ್ರಿ ಸಮಯದಲ್ಲಿ ಈ ವಿದೇಶಿ ಮಹಿಳೆಯರು ನಿಂತು ಅಲ್ಲಿ ಓಡಾಡುವ ಪುರುಷರಿಗೆ ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದರು. ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ.

    ಬಂಧಿತರನ್ನು ವಿಚಾರಣೆ ನಡೆಸಿದಾಗ ಅಧಿಕೃತ ವೀಸಾ ಮತ್ತು ಪಾಸ್​ಪೋರ್ಟ್ ಇಲ್ಲ. ದೇಶದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಲಿಂಗರಾಜಪುರ, ಹೆಣ್ಣೂರು, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.

    ಅರೆ ನಗ್ನಳಾಗಿ ಕೂಗಾಟ: ನೈಜೀರಿಯಾದ ಮಕುಕೊ ದಂಪತಿ, 2016ರಲ್ಲಿ ಪ್ರವಾಸಿ ವೀಸಾದ ಮೇಲೆ ದೇಶಕ್ಕೆ ಬಂದು ಕೋಗಿಲು ಅಗ್ರಹಾರದಲ್ಲಿ ನೆಲೆಸಿದ್ದರು. ಬಳಿಕ ವಿದ್ಯಾರಣ್ಯಪುರದ ವಡೇರಹಳ್ಳಿಗೆ ಮನೆ ಬದಲಾಯಿಸಿದ್ದರು. ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದಿಂದ ಕೊಕೇನ್ ಖರೀದಿಸಿ ನಗರದಲ್ಲಿ 1 ಗ್ರಾಂಗೆ 3 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಕಳೆದ 4 ವರ್ಷಗಳಲ್ಲಿ ಆವಲಹಳ್ಳಿ, ಕೊತ್ತನೂರು, ಬಾಣಸವಾಡಿ ಮತ್ತು ಕೋಣನಕುಂಟೆ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ. ಈ ಮೊದಲು ಸಿಸಿಬಿ ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಬಂದ ಮೇಲೆ ಚಾಳಿ ಮುಂದುವರಿಸಿದ್ದರು. ಪತಿ ಬಂಧಿಸಲು ಸಿಸಿಬಿ ಪೊಲೀಸರು ಹೋದಾಗ ಆತನ ಪತ್ನಿ ಅರೆ ನಗ್ನಳಾಗಿ ಕೂಗಾಡಿದ್ದಾಳೆ.

    ಗಾಂಜಾ ಮಾರುತ್ತಿದ್ದವ ಸೆರೆ: ಡ್ರಗ್ಸ್ ಮಾಫಿಯಾ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಿದ ಪೂರ್ವ ವಿಭಾಗ ಪೊಲೀಸರು ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಾಣಸವಾಡಿಯ ಕೆ.ಜಿ. ಕಿರಣ್ (42) ಬಂಧಿತ. ಭಾನುವಾರ (ಮಾ.15) ರಾತ್ರಿ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಮಾದಕ ದ್ರವ್ಯ ಮಾರಾಟದ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಕಿರಣ್ ಸೆರೆಸಿಕ್ಕಿದ್ದಾನೆ. ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ 3.4 ಕೆಜಿ ಗಾಂಜಾ ಪತ್ತೆಯಾಗಿದೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಟಿಡಿಆರ್ ಆರೋಪಪಟ್ಟಿ ಸಲ್ಲಿಕೆ; 28 ಆರೋಪಿಗಳ ವಿರುದ್ಧ 6,500 ಪುಟಗಳ ಚಾರ್ಜ್​ಶೀಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts