More

    ಪದೋನ್ನತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ ರಾಜ್ಯ ಶುಶ್ರೂಷಾಧಿಕಾರಿಗಳ ಸಂಘ

    ಕಲಬುರಗಿ: ಆರೋಗ್ಯ ಇಲಾಖೆಯ ಶುಶ್ರೂಷ ಅಧಿಕಾರಿಗಳ ಪದೋನ್ನತಿಯ ವಿಚಾರದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮಾಡುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ರಾಜ್ಯ ಶುಶ್ರೂಷಾಧಿಕಾರಿಗಳ ಸಂಘ ವಾರದ ಗಡುವು ನೀಡಿದೆ.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ರಾಜ್ಯಾಧ್ಯಕ್ಷ ರಾಜಕುಮಾರ ಮಾಳಗೆ, ಸೆ.4, 5 ರಂದು ಆರೋಗ್ಯ ಇಲಾಖೆ ಶುಶ್ರೂಷ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ ರಾಜ್ಯದ ಕೆಲವೊಂದು ಸ್ವಾಯತ್ತ ಸಂಸ್ಥೆಗಳು ಪದೋನ್ಮತಿ ಪಡೆದ ಶುಶ್ರೂಷ ಅಧಿಕಾರಿಗಳಿಗೆ ವರದಿ ಮಾಡಿಕೊಳ್ಳಲು ಬಿಡುತ್ತಿಲ್ಲ.

    ಇದನ್ನೂ ಓದಿ: ಮಮ್ಮೂಟ್ಟಿ ಜತೆಗಿರುವ ಈ ಪುಟ್ಟ ಹುಡುಗಿ ಯಾರು ಹೇಳಿ ನೋಡೋಣ?

    ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಮನ್ವಯ ಕೊರತೆಯಿಂದ ಶುಶ್ರೂಷ ಅಧಿಕಾರಿಗಳು ಪರದಾಡಬೇಕಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ನಡೆಯುವ ಮೆಡಿಕಲ್ ಕಾಲೇಜು (ಸ್ವಾಯತ್ತ ಸಂಸ್ಥೆ) ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯ ಶುಶ್ರೂಷ ಅಧಿಕಾರಿಗಳು ಕೆಲಸ‌ ಮಾಡುತ್ತಿದ್ದಾರೆ. ಇವರಿಗೆ 30 ವರ್ಷಗಳ ನಂತರ ಇದೀಗ ಪದೋನ್ನತಿ ನೀಡಲಾಗಿದೆ. ಪದೋನ್ನತಿ ಪಡೆದ ಶುಶ್ರೂಷ ಅಧಿಕಾರಿಗಳು ವರದಿ ಮಾಡಿಕೊಳ್ಳಲು ಅವರು ಕೆಲಸ ಮಾಡುವ ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಬರುವ ಜಿಲ್ಲಾ ಆಸ್ಪತ್ರೆಗಳಿಗೆ ಹೋದರೆ ಅವಕಾಶ ಕೊಡುತ್ತಿಲ್ಲ ಎಂದು ದೂರಿದ್ದಾರೆ.

    ಇದನ್ನೂ ಓದಿ: ಮಾನಸಿಕ ಆರೋಗ್ಯ ಸೇವೆಗೆ ಟೋಲ್​ ಫ್ರೀ ಸಹಾಯವಾಣಿ ಆರಂಭಿಸಿದ ಕೇಂದ್ರ ಸರ್ಕಾರ

    ಸ್ವಾಯತ್ತ ಸಂಸ್ಥೆಗಳಲ್ಲಿ ಆರೋಗ್ಯ ಇಲಾಖೆ ಮುಂಬಡ್ತಿ ಹೊಂದಿರುವ ನೌಕರರಿಗೆ ಕರ್ತವ್ಯಕ್ಕೆ ಹಾಜರು ಪಡಿಸಲು ಅನುಮತಿ-ಚಾಲನಾದೇಶ ನೀಡಬೇಕೆಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ. ಆದರೆ ರಾಜ್ಯದ ಕೆಲ ಮೆಡಿಕಲ್ ಕಾಲೇಜು ನಿರ್ದೇಶಕರು ಹಾಗೂ ಡೀನ್ ಅವರು ಪದೋನ್ನತಿ ನೀಡಲು ನಿರಾಕರಿಸಿ ಸರ್ಕಾರದ ಆದೇಶ ಧಿಕ್ಕರಿಸುತ್ತಿದ್ದಾರೆ. ಪದೋನ್ನತಿ ಪಡೆದ ಆರೋಗ್ಯ ಇಲಾಖೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಬೇಕು ಇಲ್ಲವೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವಿಲೀನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಮಾದಕ ನಟಿಮಣಿಯರಿಬ್ಬರೂ ಒಂದೇ ಕೊಠಡಿಯಲ್ಲಿ; ‘ಬಿಟ್ರೆ, ಸಂಜನಾ ನನ್ನ ಸಾಯಿಸ್ತಾಳೆ’ ಎಂದ್ರು ರಾಗಿಣಿ

    ಒಂದು ವಾರದೊಳಗೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಮೊದಲ ಹಂತವಾಗಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಾಗುವುದು. ನಂತರ ರಾಜ್ಯದ ಎಲ್ಲ ಜಿಲ್ಲೆಗಳ ಶುಶ್ರೂಷ ಅಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರ ಜತೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ವಿವಿಧ ಕಳವು ಪ್ರಕರಣಗಳಲ್ಲಿ 30 ಲಕ್ಷ ರೂಪಾಯಿಗೂ ಅಧಿಕ ನಗ,ನಗದು, ವಾಹನ ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts