More

    ಜ್ಯೂಸ್, ಟೈರ್ ಅಂಗಡಿ ಮಾಲೀಕರು ನಿತ್ಯ 200 ಕೋಟಿ ಗಳಿಸುವ ಬೆಟ್ಟಿಂಗ್ ದಂಧೆಯ ರೂವಾರಿಗಳಾಗಿದ್ದು ಹೇಗೆ?

    ನವದೆಹಲಿ: ಮಹದೇವ್​ ಆನ್​ಲೈನ್​ ಬೆಟ್ಟಿಂಗ್​ ಆ್ಯಪ್​ ಕೇಸ್​ನಲ್ಲಿ ನಟ ರಣಬೀರ್​ ಕಪೂರ್​ ಸೇರಿದಂತೆ ಬಾಲಿವುಡ್​ನ ಕೆಲ ಕಲಾವಿದರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್​ ನೀಡಿರುವುದು ಭಾರೀ ಸಂಚಲನ ಸೃಷ್ಟಿಸಿದ್ದು, ಅಕ್ರಮ ಹಣ ವರ್ಗಾವಣೆಯಲ್ಲಿ ಮಹದೇವ್​ ಕಂಪನಿ ತೊಡಗಿರುವ ಆರೋಪವಿದೆ.

    ಮಹಾದೇವ್​ ಆನ್​ಲೈನ್​ ಬೆಟ್ಟಿಂಗ್​ ಆ್ಯಪ್​ ಎಂದರೇನು? ಅದರ ಪ್ರವರ್ತಕರು ಯಾರು? ಛತ್ತೀಸ್‌ಗಢದ ಜ್ಯೂಸ್ ಮತ್ತು ಟೈರ್ ಅಂಗಡಿ ಮಾಲೀಕರು ಬೃಹತ್ ಬೆಟ್ಟಿಂಗ್ ದಂಧೆಯ ರೂವಾರಿಯಾಗಳಾಗಿದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಆನ್​ಲೈನ್​​ ಬೆಟ್ಟಿಂಗ್​ ಕರಾಳ ಲೋಕದ ಹಿಂದೆ ಕಪ್ಪು ಹಣದ ಮಾಸ್ಟರ್​ ಮೈಂಡ್​​ಗಳಾದ ಸೌರಭ್​ ಚಂದ್ರಕರ್​ ಮತ್ತು ರವಿ ಉಪ್ಪಾಳ್​ ಹೆಸರು ಕೇಳಿಬಂದಿದೆ. ಇವರ ಬೆಟ್ಟಿಂಗ್​ ಜಾಲ ಭಾರತದಲ್ಲಿ ಮಾತ್ರವಲ್ಲ, ಯುಎಇ, ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನಕ್ಕೂ ಹರಡಿದೆ. ಈ ಇಬ್ಬರಿಗಾಗಿ ಇಡಿ ಹುಡುಕಾಟ ನಡೆಸುತ್ತಿರುವ ಇಡಿ, ಲುಕೌಟ್​ ನೋಟಿಸ್​ ಮತ್ತು ಜಾಮೀನು ರಹಿತ ವಾರೆಂಟ್​ಗಳನ್ನು ಜಾರಿ ಮಾಡಿದೆ. ಇಬ್ಬರೂ ಛತ್ತೀಸ್​ಗಢದ ಬಿಲಾಯಿ ನಿವಾಸಿಗಳು.

    ಇದನ್ನೂ ಓದಿ: ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕ್​ಗೆ ಮೊದಲ ಗೆಲುವು: ಭವಿಷ್ಯ ನುಡಿದ ಮಾಜಿ​ ಕ್ರಿಕೆಟರ್​​

    ಕೆಲ ವರ್ಷಗಳ ಹಿಂದೆ ಸೌರಭ್​ ಚಂದ್ರಕರ್ ಭಿಲಾಯಿಯ ನೆಹರೂ ನಗರದಲ್ಲಿ ಜ್ಯೂಸ್​ ಶಾಪ್​ ನಡೆಸುತ್ತಿದ್ದರು. ಇನ್ನೊಂದೆಡೆ ರವಿ ಉಪ್ಪಾಳ್​ ಟೈಯರ್​ ಶಾಪ್​ ಮಾಲೀಕರಾಗಿದ್ದರು. ಇಬ್ಬರು ಕೂಡ ಜೂಜಾಟದ ದಾಸರಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ತಮ್ಮ ಬಳಿಯಿದ್ದ ಉಳಿತಾಯ ಹಣವನ್ನು ತೆಗೆದುಕೊಂಡು ಇಬ್ಬರು ದೆಹಲಿಗೆ ತೆರಳಿ, ಓರ್ವ ಶೇಖ್​ ಮತ್ತು ಓರ್ವ ಪಾಕಿಸ್ತಾನಿ ಪ್ರಜೆಯನ್ನು ಭೇಟಿಯಾಗಿ ಕೊನೆಗೆ ಮಹದೇವ್​ ಆನ್​ಲೈನ್​ ಬೆಟ್ಟಿಂಗ್​ ಆ್ಯಪ್​ ತೆರೆಯಲು ಒಟ್ಟಿಗೆ ಕೆಲಸ ಮಾಡಿದರು. ಆ್ಯಪ್​ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಸೌರಭ್​ ಚಂದ್ರಕರ್​ ಮತ್ತು ರವಿ ಉಪ್ಪಾಳ್ ಬೆಟ್ಟಿಂಗ್​ ಲೋಕದಲ್ಲಿ ದೊಡ್ಡ ಹೆಸರು ಮಾಡಿದರು.

    ಈ ಇಬ್ಬರು ಭಾರತದಲ್ಲಿ ಆನ್​ಲೈನ್​ ಬೆಟ್ಟಿಂಗ್​ ಆ್ಯಪ್​ ಆಪರೇಟ್​ ಮಾಡಲು 4000 ಪ್ಯಾನೆಲ್​ ಆಪರೇಟರ್​ಗಳನ್ನು ನಿಯೋಜಿಸಿದ್ದಾರೆ. ಪ್ರತೀ ಪ್ಯಾನೆಲ್​ ಆಪರೇಟರ್​, ಬಾಜಿ ಕಟ್ಟುವ 20 ಗ್ರಾಹಕರನ್ನು ಹೊಂದಿದ್ದರು. ಇದೇ ಮಾದರಿಯನ್ನು ಅನುಸರಿಸಿ, ಪ್ರತಿದಿನ ಇಬ್ಬರು ಸುಮಾರು 200 ಕೋಟಿ ರೂ. ಸಂಪಾದಿಸುತ್ತಿದ್ದರು ಮತ್ತು ಯುಎಇನಲ್ಲಿ ಸಾಮ್ರಾಜ್ಯವನ್ನು ನಿರ್ಮಿಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದರು.

    ಇದರ ನಡುವೆ ಸೌರಭ್​ ಚಂದ್ರಕರ್​ ಕಳೆದ ಫೆಬ್ರವರಿಯಲ್ಲಿ ಯುಎಇಯಲ್ಲಿ ಸುಮಾರು 200 ಕೋಟಿ ರೂ. ಖರ್ಚು ಮಾಡಿ ಅದ್ದೂರಿಯಾಗಿ ವಿವಾಹವಾದರು. ಅದು ಕೂಡ 200 ಕೋಟಿ ರೂ. ನಗದು ರೂಪದಲ್ಲೇ ಪಾವತಿಸಿದ್ದಾರೆ. ಭಿಲಾಯಿ ಮತ್ತು ನಾಗ್ಪುರದಲ್ಲಿರುವ ಕುಟುಂಬಸ್ಥರು ಯುಎಇಗೆ ಆಗಮಿಸಲು ಖಾಸಗಿ ಜೆಟ್​ ಒಂದನ್ನು ಬಾಡಿಗೆ ಪಡೆದುಕೊಂಡಿದ್ದರು. ಹವಾಲ ಚಾನೆಲ್‌ಗಳ ಮೂಲಕ ಮದುವೆಯ ಯೋಜಕರು, ನರ್ತಕರು, ಅಲಂಕಾರಕಾರರು ಇತ್ಯಾದಿಗಳಿಗೆ ಪಾವತಿಸಲು ಬಳಸಲಾಗುತ್ತಿತ್ತು. ಹವಾಲ ವ್ಯವಹಾರವು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರವೇಶಿಸದೆ ಹಣವು ಕೈ ಬದಲಾಯಿಸಿದಾಗ ಅದು ಹಣಕಾಸಿನ ಅಪರಾಧವನ್ನು ಸೂಚಿಸುತ್ತದೆ.

    ಇದನ್ನೂ ಓದಿ: ವಿಶ್ವಕಪ್​ ಮೊದಲ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಶಾಕ್​: ಗಿಲ್​​ಗೆ​ ಡೆಂಘೆ, ಆಸಿಸ್​ ವಿರುದ್ಧ ಕಣಕ್ಕಿಳಿಯೋದು ಡೌಟು!

    ಇನ್ನು ಸೌರಭ್​ ಚಂದ್ರಕರ್​ ಅವರು ತಮ್ಮ ಮದುವೆ 14 ಬಾಲಿವುಡ್​ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದರು. ಇದೀಗ ಅವರೆಲ್ಲರೂ ಇಡಿ ರಾಡರ್​ನಲ್ಲಿದ್ದಾರೆ. ಹೊಸ ಬಳಕೆದಾರರು ಮತ್ತು ಫ್ರಾಂಚೈಸಿ ಹುಡುಕುವವರನ್ನು ಆಕರ್ಷಿಸಲು ಬೆಟ್ಟಿಂಗ್ ವೆಬ್‌ಸೈಟ್‌ಗಳ ಜಾಹೀರಾತಿಗಾಗಿ ಮಹದೇವ್​ ಬುಕ್​ ಆ್ಯಪ್​ ಭಾರತದಲ್ಲಿ ನಗದು ರೂಪದಲ್ಲಿ ದೊಡ್ಡ ವೆಚ್ಚವನ್ನು ಮಾಡುತ್ತಾರೆ ಎಂದು ಇಡಿ ಹೇಳಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದಂತೆ ಕಳೆದ ತಿಂಗಳು ಮುಂಬೈ, ಕೋಲ್ಕತ್ತ ಮತ್ತು ಭೋಪಾಲ್‌ನ 39 ಸ್ಥಳಗಳಲ್ಲಿ ದಾಳಿ ನಡೆಸಿ 417 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿತ್ತು.

    ಸದ್ಯ ಸೌರಭ್​ ಚಂದ್ರಕರ್​ ಮತ್ತು ರವಿ ಉಪ್ಪಾಳ್​ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಇಡಿ ಬಲೆ ಬೀಸಿದೆ. (ಏಜೆನ್ಸೀಸ್​)

    ಇಂದು ವೀಕ್ಷಕರೊಂದಿಗೆ ಚುನಾವಣಾ ಆಯೋಗದ ಮಹತ್ವದ ಸಭೆ…ಈ ವಿಷಯಗಳ ಕುರಿತು ಚರ್ಚೆ

    ದೇವಿ ಕುಂಭ ಹೊತ್ತ 108 ಪುರುಷರು! ಶಾಪ ವಿಮೋಚನೆಗೆ ಕಾಟೇನಹಳ್ಳಿ ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts