More

    ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕ್​ಗೆ ಮೊದಲ ಗೆಲುವು: ಭವಿಷ್ಯ ನುಡಿದ ಮಾಜಿ​ ಕ್ರಿಕೆಟರ್​​

    ನವದೆಹಲಿ: ವಿಶ್ವಕಪ್​ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡವನ್ನು ಪಾಕಿಸ್ತಾನ ಮಣಿಸಲಿದೆ ಎಂದು ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಮೈಕೆಲ್ ಆಂಡ್ರ್ಯೂ ಅಥರ್ಟನ್ ಅವರು ಭವಿಷ್ಯ ನುಡಿದಿದ್ದಾರೆ.

    ಏಕದಿನ ವಿಶ್ವಕಪ್​ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕ್​ಗೆ ಮೊದಲ ಗೆಲುವು: ಭವಿಷ್ಯ ನುಡಿದ ಮಾಜಿ​ ಕ್ರಿಕೆಟರ್​​
    ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಮೈಕೆಲ್ ಆಂಡ್ರ್ಯೂ ಅಥರ್ಟನ್

    ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಂದರೆ ಇಡೀ ಜಗತ್ತೇ ತುದಿಗಾಲಲ್ಲಿ ಎದುರು ನೋಡುತ್ತಿರುತ್ತದೆ. ಉಭಯ ತಂಡಗಳು ಸಾಂಪ್ರದಾಯಿಕ ಎದುರಾಳಿಗಳು ಎಂದೇ ಗುರುತಿಸಿಕೊಂಡಿದ್ದು, ಅ. 14ರಂದು ನಡೆಯಲಿರುವ ಹೈವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾಗಲು ಕ್ರೀಡಾಭಿಮಾನಿಗಳು ದಿನಗಣನೆ ಮಾಡುತ್ತಿದ್ದಾರೆ.

    ಐಸಿಸಿ ವಿಶ್ವಕಪ್ ಟೂರ್ನಿಯ​ ಇತಿಹಾಸದಲ್ಲೇ ಭಾರತ ಮತ್ತು ಪಾಕಿಸ್ತಾನ ಏಳು ಬಾರಿ ಮುಖಾಮುಖಿಯಾಗಿವೆ. ಗಮನಾರ್ಹ ಸಂಗತಿ ಏನೆಂದರೆ, ಏಳು ಬಾರಿಯೂ ಭಾರತವೇ ವಿಜಯೋತ್ಸವ ಆಚರಿಸಿದೆ. 2019ರ ವಿಶ್ವಕಪ್​ ಟೂರ್ನಿಯಲ್ಲೂ ಭಾರತ 18 ರನ್​ಗಳ ಅಂತರದಿಂದ ಪಾಕ್​ ವಿರುದ್ಧ ಗೆಲುವು ಸಾಧಿಸಿತು. ಇತ್ತೀಚೆಗೆ ನಡೆದ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಸೂಪರ್​ 4 ಹಂತದ ಪಂದ್ಯದಲ್ಲೂ ಭಾರತ ಅಮೋಘ ಜಯ ದಾಖಲಿಸಿತು. ಅಲ್ಲದೆ, ಏಷ್ಯಾ ಕಪ್​ ಅನ್ನು ವಶಪಡಿಸಿಕೊಂಡಿತು.

    ಇದನ್ನೂ ಓದಿ: ಸಿಕ್ಕಿಂ ಪ್ರವಾಹ: 21 ಸಾವು, 100 ಕ್ಕೂ ಹೆಚ್ಚು ಮಂದಿ ನಾಪತ್ತೆ; ಮುಂದುವರಿದ ರಕ್ಷಣಾ ಕಾರ್ಯಾಚರಣೆ

    ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರತಿಬಾರಿ ಅವಕಾಶ ಸಿಕ್ಕರೂ ಭಾರತದ ಆರ್ಭಟದ ಎದುರು ಪಾಕ್​ ಮಂಕಾಗುತ್ತಿದೆ. ಈ ಬಾರಿ ಅಂದರೆ, ಅ. 14ರಂದು ಗುಜರಾತಿನ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮತ್ತೊಮ್ಮೆ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕಾಗಿ ಇಡೀ ಜಗತ್ತು ಎದುರು ನೋಡುತ್ತಿದೆ.

    ಇದರ ನಡುವೆ ಮೈಕೆಲ್ ಆಂಡ್ರ್ಯೂ ಅಥರ್ಟನ್ ಅವರು ಇಂಡೋ-ಪಾಕ್​ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಸ್ಕೈ ಸ್ಪೋರ್ಟ್ಸ್​ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಅಥರ್ಟನ್, ಈ ಬಾರಿ ಪಾಕಿಸ್ತಾನ ಭಾರತದ ವಿರುದ್ಧ ಗೆಲುವು ಸಾಧಿಸಲಿದೆ. ಕಳೆದ ಏಳು ವರ್ಷಗಳಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಈ ಬಾರಿ ದೀರ್ಘಕಾಲದ ಎದುರಾಳಿಯ ವಿರುದ್ಧ ಮೊದಲ ಗೆಲುವು ಪಡೆಯಲಿದೆ. ಅ.14ರಂದು ನಡೆಯುವ ಪಂದ್ಯ ಈ ವರ್ಷದ ವಿಶ್ವಕಪ್​ನ ಅತಿದೊಡ್ಡ ಪಂದ್ಯವಾಗಿರಲಿದೆ. ಒಂದು ವೇಳೆ ಸೆಮಿಫೈನಲ್​ ಮತ್ತು ಫೈನಲ್​ನಲ್ಲಿ ಏನಾದರೂ ಉಭಯ ತಂಡಗಳು ಎದುರಾದರೆ ಕ್ರೀಡಾಭಿಮಾನಿಗಳಿಗೆ ಅದೊಂದು ಹಬ್ಬವಾಗಿರಲಿದೆ ಎಂದು ಹೇಳಿದರು.

    ಅಂದಹಾಗೆ ಪಾಕಿಸ್ತಾನ ಅ.6ರಂದು ನೆದರ್ಲೆಂಡ್​ ವಿರುದ್ಧ ಸೆಣಸಾಡುವ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆರಂಭಿಸಲಿದೆ. ಇನ್ನೊಂದೆಡೆ ಭಾರತ ಅ.8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಅ.14ರಂದು ಎರಡು ತಂಡಗಳು ಏಷ್ಯಾ ಕಪ್​ ಬಳಿಕ ಮತ್ತೊಮ್ಮೆ ಮುಖಾಮುಖಿಯಾಗಲಿವೆ. (ಏಜೆನ್ಸೀಸ್​)

    ಏನಿದು ಮಹದೇವ ಬೆಟ್ಟಿಂಗ್ ಆ್ಯಪ್ ಕೇಸ್​? ರಣಬೀರ್​ ಬೆನ್ನಲ್ಲೇ ಶ್ರದ್ಧಾ​, ಕಪಿಲ್​, ಹುಮಾಗೆ ಇಡಿ ಸಮನ್ಸ್​

    ವಿಭಿನ್ನ ವಿಶೇಷ ವಿನೋದ; ಇಬ್ಬರು ನಾಯಕಿಯರ ಖಡಕ್ ‘ಫೈಟರ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts