More

    ಏನಿದು ಮಹದೇವ ಬೆಟ್ಟಿಂಗ್ ಆ್ಯಪ್ ಕೇಸ್​? ರಣಬೀರ್​ ಬೆನ್ನಲ್ಲೇ ಶ್ರದ್ಧಾ​, ಕಪಿಲ್​, ಹುಮಾಗೆ ಇಡಿ ಸಮನ್ಸ್​

    ಮುಂಬೈ: ಆನ್​ಲೈನ್​ ಬೆಟ್ಟಿಂಗ್​ ಕೇಸ್​ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ) ನಟ ರಣಬೀರ್​ ಕಪೂರ್​ಗೆ ಸಮನ್ಸ್​ ನೀಡಿದ ಬೆನ್ನಲ್ಲೇ ನಟಿಯರಾದ ಶ್ರದ್ಧಾ ಕಪೂರ್​, ಹುಮಾ ಖುರೇಷಿ, ಹಿನಾ ಖಾನ್​ ಮತ್ತು ಕಾಮಿಡಿಯನ್​ ಕಪಿಲ್​ ಶರ್ಮಗೆ ಸಮನ್ಸ್​ ನೀಡಿದೆ.

    ಮಹದೇವ್​ ಬುಕ್​ ಬೆಟ್ಟಿಂಗ್​ ಆ್ಯಪ್​ ಪ್ರಚಾರದ ಮಾಡಿರುವ ಆರೋಪದ ಮೇಲೆ ತನಿಖಾ ಸಂಸ್ಥೆ ಹುಮಾ ಖುರೇಷಿ ಮತ್ತು ಹಿನಾ ಖಾನ್​ಗೆ ಸಮನ್ಸ್​ ನೀಡಿದೆ. ಕಳೆದ ಸೆಪ್ಟೆಂಬರ್​ನಲ್ಲಿ ದುಬೈನಲ್ಲಿ ನಡೆದಿದ ಮಹದೇವ್​ ಆ್ಯಪ್​ ಸಕ್ಸಸ್​ ಪಾರ್ಟಿಯಲ್ಲಿ ಕಪಿಲ್​ ಶರ್ಮ ಭಾಗವಹಿಸಿದ್ದಕ್ಕೆ ಅವರಿಗೆ ಸಮನ್ಸ್​ ನೀಡಲಾಗಿದೆ. ಅಕ್ಟೋಬರ್​ 6ರಂದು ಅಂದರೆ ಇಂದು ಕೇಂದ್ರದ ತನಿಖಾ ಸಂಸ್ಥೆ ಹಾಜರಾಗುವಂತೆ ಶ್ರದ್ಧಾ ಕಪೂರ್​ಗೆ ಹೇಳಲಾಗಿದೆ.

    ಗುರುವಾರವಷ್ಟೇ ರಣಬೀರ್​ ಕಪೂರ್​ಗೆ ಇದೇ ಕೇಸ್​ ಮೇಲೆ ಇಡಿ ಸಮನ್ಸ್ ನೀಡಿದೆ. ಆದರೆ, ವಿಚಾರಣೆಗೆ ಹಾಜರಾಗಲು ರಣಬೀರ್​ ಅವರು ಇಡಿ ಬಳಿ ಸಮ ಕೇಳಿದ್ದಾರೆಂದು ತಿಳಿದುಬಂದಿದೆ. ಆದರೆ, ಬಾಲಿವುಡ್​ ನಟನಿಗೆ ಅವರು ಕೇಳಿದಷ್ಟು ಸಮಯ ಸಿಕ್ಕಿದೆಯೇ ಎಂಬುದನ್ನು ತನಿಖಾ ಸಂಸ್ಥೆ ಇನ್ನು ನಿರ್ಧರಿಸಿಲ್ಲ ಎಂಬ ಮಾಹಿತಿ ಇದೆ. ರಣಬೀರ್ ಅವರು ಮಹದೇವ್ ಆ್ಯಪ್ ಅನ್ನು ಪ್ರಚಾರ ಮಾಡುವ ಹಲವಾರು ಜಾಹೀರಾತುಗಳನ್ನು ಮಾಡಿದ್ದಾರೆ ಮತ್ತು ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.

    ಮಹದೇವ್​ ಬುಕ್​ ಆ್ಯಪ್​ಗೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ಆನ್​ಲೈನ್​ ಬೆಟ್ಟಿಂಗ್​ ಕೇಸ್​ ತನಿಖೆಯಲ್ಲಿ​ ಕೇಂದ್ರ ತನಿಖಾ ಸಂಸ್ಥೆಯು ಅನೇಕ ಬಾಲಿವುಡ್​ ಕಲಾವಿದರು ಮತ್ತು ಗಾಯಕರನ್ನು ತನ್ನ ಕಣ್ಗಾವಲಿನಲ್ಲಿ ಇರಿಸಿದೆ. ಕಳೆದ ಫೆಬ್ರವರಿಯಲ್ಲಿ ಯುನೈಟೆಡ್​ ಅರಬ್​ ಎಮಿರೇಟ್​ ದೇಶದಲ್ಲಿ ನಡೆದ ಮಹದೇವ್​ ಬುಕ್​ ಆ್ಯಪ್​ ಪ್ರಚಾರಕ ಸೌರಭ್​ ಚಂದ್ರಕರ್​ ಅವರ ಅದ್ದೂರಿ ಮದುವೆಯಲ್ಲಿ ಬಾಲಿವುಡ್​ನ ಕಲಾವಿದರು ಮತ್ತು ಗಾಯಕರು ಭಾಗಿಯಾಗಿದ್ದರು.

    ಇದನ್ನೂ ಓದಿ: ವಿಶ್ವಕಪ್​ ಮೊದಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ರಚಿನ್​ ಯಾರು? ರಾಹುಲ್​-ಸಚಿನ್​, ಬೆಂಗಳೂರಿಗಿರುವ ಸಂಬಂಧವೇನು?

    ಮಹದೇವ್ ಆ್ಯಪ್ ಒಂದು ಅಂಬ್ರೆಲಾ ಸಿಂಡಿಕೇಟ್ ಆಗಿದ್ದು, ಹೊಸ ಬಳಕೆದಾರರನ್ನು ನೋಂದಾಯಿಸಲು ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಒದಗಿಸುತ್ತದೆ, ಬಳಕೆದಾರರ ಐಡಿಗಳನ್ನು ರಚಿಸುತ್ತದೆ ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಲೇಯರ್ಡ್ ವೆಬ್ ಮೂಲಕ ಹಣವನ್ನು ಅಕ್ರಮ ವರ್ಗಾವಣೆ ಮಾಡುತ್ತದೆ ಎಂದು ಇಡಿ ಆರೋಪಿಸಿದೆ.

    ಇತ್ತೀಚಿನ ಆನ್‌ಲೈನ್ ಗೇಮಿಂಗ್ ನಿಯಮಗಳ ಪ್ರಕಾರ ಬೆಟ್ಟಿಂಗ್ ಅನ್ನು ನಿಷೇಧಿಸಲಾಗಿದೆ. ಕಂಪನಿಯ ಪ್ರವರ್ತಕರಾದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಛತ್ತೀಸ್‌ಗಢದ ಭಿಲಾಯ್‌ ಮೂಲದವರು. ದುಬೈನಿಂದ ತಮ್ಮ ಆನ್​ಲೈನ್​ ಬೆಟ್ಟಿಂಗ್​ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಬೆಟ್ಟಿಂಗ್​ಗೆ ಸಂಬಂಧಿಸಿ ನಾಲ್ಕೈದು ಅಪ್ಲಿಕೇಶನ್‌ಗಳನ್ನು ಇವರು ನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು 200 ಕೋಟಿ ರೂಪಾಯಿ ಗಳಿಸುತ್ತಾರೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.

    ಹೊಸ ಬಳಕೆದಾರರು ಮತ್ತು ಫ್ರಾಂಚೈಸಿ ಹುಡುಕುವವರನ್ನು ಆಕರ್ಷಿಸಲು ಬೆಟ್ಟಿಂಗ್ ವೆಬ್‌ಸೈಟ್‌ಗಳ ಜಾಹೀರಾತಿಗಾಗಿ ಮಹದೇವ್​ ಬುಕ್​ ಆ್ಯಪ್​ ಭಾರತದಲ್ಲಿ ನಗದು ರೂಪದಲ್ಲಿ ದೊಡ್ಡ ವೆಚ್ಚವನ್ನು ಮಾಡುತ್ತಾರೆ ಎಂದು ಇಡಿ ಹೇಳಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್‌ಗೆ ಸಂಬಂಧಿಸಿದಂತೆ ಕಳೆದ ತಿಂಗಳು ಮುಂಬೈ, ಕೋಲ್ಕತ್ತ ಮತ್ತು ಭೋಪಾಲ್‌ನ 39 ಸ್ಥಳಗಳಲ್ಲಿ ದಾಳಿ ನಡೆಸಿ 417 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು.

    ಯುಎಇಯಲ್ಲಿ ಫೆಬ್ರವರಿ ತಿಂಗಳಲ್ಲಿ ಸೌರಭ್​ ಚಂದ್ರಕರ್​ ಅವರು ಅದ್ದೂರಿಗೆ ಮದುವೆಯಾದರು. ಇದಕ್ಕಾಗಿ ಅವರು 200 ಕೋಟಿ ರೂ. ವೆಚ್ಚ ಮಾಡಿದ್ದು, ಈ ಹಣವನ್ನು ಸಂಪೂರ್ಣ ನಗದು ರೂಪದಲ್ಲಿ ಪಾವತಿಸಿರುವುದರಿಂದ ಅವರ ಒಡೆತನದ ಮಹದೇವ್ ಬುಕ್​ ಆ್ಯಪ್ ಮೇಲೆ ಇಡಿ ಕಣ್ಗಾವಲು ಇಟ್ಟಿತು. (ಏಜೆನ್ಸೀಸ್​)

    ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ; ED ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೋರಿದ ರಣಬೀರ್

    ಉಗ್ರಾಣ ನಿಗಮದ ಅವ್ಯವಹಾರ ತನಿಖೆ; ಐಎಎಸ್​ ಸೇರಿ ವಿವಿಧ ವೃಂದದ ಅಧಿಕಾರಿಗಳ ವಿರುದ್ಧ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts