More

    ಉದಯೋನ್ಮುಖ ಆಟಗಾರರ ಖರೀದಿಗೆ ಪಿಕೆಎಲ್  ಫ್ರಾಂಚೈಸಿಗಳ ನಿರಾಸಕ್ತಿ

    ಮುಂಬೈ: ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜಿನ ಉದಯೋನ್ಮುಖ ಆಟಗಾರರ ಕೋಟಾದಡಿ ಪುಣೇರಿ ಪಲ್ಟಾನ್ ಇಬ್ಬರು, ತೆಲುಗು ಟೈಟಾನ್ಸ್ ಹಾಗೂ ಯುಪಿ ಯೋಧಾ ತಲಾ ಒಬ್ಬನನ್ನು ಕೊಂಡುಕೊಂಡಿವೆ. ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಭಾನುವಾರ ರೇಸ್‌ನಲ್ಲಿದ್ದ 97 ಆಟಗಾರರ ಪೈಕಿ 4 ಆಟಗಾರಷ್ಟೇ ಬಿಕರಿಯಾದರು. ರೈಡರ್ ಮೋಹಿತ್ ಗೋಯತ್ ಹಾಗೂ ಆಲ್ರೌಂಡರ್ ಗೋವಿಂದ್ ಗುರ್ಜರ್ ಪುಣೆ ತಂಡದ ಪಾಲಾದರೆ, ಡಿಫೆಂಡರ್ ಪ್ರಿನ್ಸ್ ತೆಲುಗು ಟೈಟಾನ್ಸ್ ಹಾಗೂ ನಿತಿನ್ ಪನ್ವಾರ್ ಯುಪಿ ಯೋಧಾ ತಂಡದ ಪಾಲಾದರು. ನಾಲ್ವರು ತಲಾ 8 ಲಕ್ಷ ರೂಪಾಯಿಗೆ ಬಿಕರಿಯಾದರು.

    2ನೇ ದಿನದ ಹರಾಜಿನಲ್ಲಿ ವಿದೇಶಿ ಹಾಗೂ ಎ ಕೆಟಗೆರಿ ಆಟಗಾರರಿಗೆ ಹರಾಜು ನಡೆಯಲಿದೆ. 12 ತಂಡಗಳಿಂದ 300 ಆಟಗಾರರಿಗೆ ಅವಕಾಶ ಲಭಿಸುತ್ತದೆ. ಪ್ರತಿ ತಂಡಗಳು ಕನಿಷ್ಠ 18 ಗರಿಷ್ಠ 25 ಆಟಗಾರರನ್ನು ಕೊಂಡುಕೊಳ್ಳಬಹುದು. ಪ್ರತಿ ತಂಡಕ್ಕೂ ಆಟಗಾರರನ್ನು ಕೊಂಡುಕೊಳ್ಳಲು ಗರಿಷ್ಠ 4.4 ಕೋಟಿ ರೂಪಾಯಿ ಬಜೆಟ್ ನಿಗದಿಪಡಿಸಲಾಗಿದೆ.

    ಎರಡನೇ ದಿನದ ಹರಾಜು ಆರಂಭ: ಮಧ್ಯಾಹ್ನ 3, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
    * ವಿದೇಶಿ ಹಾಗೂ ಎ ಕೆಟಗೆರಿ ಆಟಗಾರರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts