More

  ಚೊಚ್ಚಲ ಪ್ರಶಸ್ತಿಗೆ ಪುಣೇರಿ-ಹರಿಯಾಣ ಸೆಣಸಾಟ ಇಂದು

  ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ೈನಲ್ ಪಂದ್ಯ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿದ್ದು, ಸತತ ಎರಡನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿರುವ ಪುಣೇರಿ ಪಲ್ಟಾನ್ ಹಾಗೂ ಹರಿಯಾಣ ಸ್ಟೀಲರ್ಸ್‌ ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ. ಯಾರೇ ಗೆದ್ದರೂ ಚೊಚ್ಚಲ ಬಾರಿ ಚಾಂಪಿಯನ್ ಎನಿಸಲಿದ್ದಾರೆ.

  ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದ ಪುಣೇರಿ ಪಲ್ಟಾನ್ ತಂಡ ಟೂರ್ನಿಯ ಲೀಗ್ ಹಂತದಿಂದಲೂ ಭರ್ಜರಿ ನಿರ್ವಹಣೆ ತೋರಿದ್ದು, ಸೆಮಿೈನಲ್‌ನಲ್ಲಿ 3 ಬಾರಿಯ ಚಾಂಪಿಯನ್ ಪಟನಾ ಪೈರೇಟ್ಸ್ ತಂಡವನ್ನು ಮಣಿಸಿದೆ. ಪ್ಲೇಆ್ಗೆ ಅಂತಿಮ ತಂಡವಾಗಿ ಎಂಟ್ರಿ ನೀಡಿದ ಹರಿಯಾಣ ಸ್ಟೀಲರ್ಸ್‌ ಹಾಲಿ ಚಾಂಪಿಯನ್ ಜೈಪುರ ಪಿಂಕ್‌ಪ್ಯಾಂಥರ್ಸ್‌ಗೆ ಶಾಕ್ ನೀಡಿ ಮೊದಲ ಬಾರಿ ೈನಲ್ ಪ್ರವೇಶಿಸಿದೆ. ಪುಣೇರಿ ಪಲ್ಟಾನ್ ತಂಡ ಕಳೆದ ಬಾರಿ ಕೈ ತಪ್ಪಿದ ಟ್ರೋಫಿಯನ್ನು ಈ ಬಾರಿ ತನ್ನದಾಗಿಸಿಕೊಳ್ಳುವ ಹಂಬಲದಲ್ಲಿದೆ. ಲೀಗ್ ಹಂತದಲ್ಲಿ ಆಡಿದ 22 ಪಂದ್ಯಗಳಲ್ಲಿ 17 ಗೆಲುವು, 2 ಸೋಲು, 3 ಟೈಗಳೊಂದಿಗೆ 96 ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಹರಿಯಾಣ ತಂಡ 22 ಪಂದ್ಯಗಳಲ್ಲಿ 13 ಗೆಲುವು, 8 ಸೋಲು, 1 ಟೈಗಳೊಂದಿಗೆ 70 ಅಂಕ ಕಲೆಹಾಕಿ 5ನೇ ಸ್ಥಾನದಲ್ಲಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts