More

    ಸರಕು ವಾಹನಗಳಿಗೆ ಒಂದು ತಿಂಗಳು ಸಂಚಾರ ನಿಷೇಧ; ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಎಷ್ಟು ಸಮಯ?

    ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ-7) ಬೆಳಗ್ಗೆ 8.30ರಿಂದ 10.30ರ ವರೆಗೆ ಸರಕು ಸಾರಿಗೆ ವಾಹನಗಳ ಸಂಚಾರ 1 ತಿಂಗಳ ಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಶುಕ್ರವಾರದಿಂದ ಪ್ರಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗಿದ್ದು, ಒಂದು ತಿಂಗಳ ಸಾಧಕ-ಬಾಧನ ಪರಿಶೀಲನೆ ನಡೆಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.

    ಹೆಬ್ಬಾಳ, ಯಲಹಂಕ, ಚಿಕ್ಕಜಾಲ ಸೇರಿದಂತೆ ಈಶಾನ್ಯ ಪ್ರದೇಶದಲ್ಲಿ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಕ್ಷಿಪ್ರವಾಗಿ ಬೆಳೆಯುತ್ತಿವೆ. ಈ ಪ್ರದೇಶದಲ್ಲಿ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಸಾವಿರಾರು ಜನರು ಈ ರಸ್ತೆಯನ್ನು ಬಳಸುತ್ತಾರೆ. ನಗರಕ್ಕೆ ಗಣ್ಯ ಮತ್ತು ಅತಿಗಣ್ಯರು ಭೇಟಿ ನೀಡುವುದು ಸರ್ವೇಸಾಮಾನ್ಯ. ದೈನಂದಿನ ವಾಹನಗಳಿಗೆ ಸುಗಮ ಸಂಚಾರ ಒದಗಿಸಲು ಕಷ್ಟಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

    ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಪ್ರತಿದಿನ ಲಕ್ಷಾಂತರ ಸರಕು ಸಾರಿಗೆ ವಾಹನಗಳು ಸಂಚರಿಸುತ್ತಿವೆ. ಪೀಕ್ ಅವರ್ ಸಂಚಾರದಲ್ಲಿ ವ್ಯತ್ಯಯ ಆಗುತ್ತಿದೆ. ಈ ಸಲುವಾಗಿ ರಾಷ್ಟ್ರೀಯ ಹೆದ್ದಾರಿ-7ರ ಸಾದಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳ ಫ್ಲೈಓವರ್ ವರೆಗೆ ಪ್ರತಿದಿನ ಬೆಳಗ್ಗೆ 8.30ರಿಂದ 10.30ರ ವರೆಗೆ ಸರಕು ಸಾರಿಗೆ ವಾಹನಗಳನ್ನು ನಿಷೇಧಿಸಲಾಗಿದೆ. ಇದು ಪ್ರಾಯೋಗಿಕ ಮಾರ್ಪಾಡು ಆಗಿರುವ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಸಲೀಂ ಮನವಿ ಮಾಡಿದ್ದಾರೆ.

    ಸರಕು ವಾಹನಗಳಿಗೆ ಒಂದು ತಿಂಗಳು ಸಂಚಾರ ನಿಷೇಧ; ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ, ಎಷ್ಟು ಸಮಯ?

    ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

    ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts