More

    ಇನ್‌ಸ್ಟಗ್ರಾಂ ಪರಿಚಿತನಿಂದ ಹಣ ಕಳೆದುಕೊಂಡ ಪ್ರೊಫೆಸರ್

    ಉಡುಪಿ: ಇನ್‌ಸ್ಟಗ್ರಾಂನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಭಾರತಕ್ಕೆ ಆಗಮಿಸಿದ್ದೇನೆ ಎಂದು ಇಮಿಗ್ರೇಷನ್ ಚೆಕಿಂಗ್‌ಗೆ ಹಣ ಬೇಕೆಂಬ ನೆಪದಲ್ಲಿ ಮಣಿಪಾಲದ ಮಹಿಳಾ ಪ್ರೊಫೆಸರ್ ಒಬ್ಬರಿಗೆ 3.40 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

    ಮಣಿಪಾಲ ಆಕಾಡೆಮಿ ಆಫ್ ಹೈಯರ್ ಎಜುಕೇಶನ್ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಅಸಿಸ್ಟೆಂಟ್ ಪ್ರೊಫೆಸರ್ ಹರ್‌ಪ್ರೀತ್ ಕೌರ್ ಹಣ ಕಳೆದುಕೊಂಡ ಮಹಿಳೆ. ಎರಡು ತಿಂಗಳ ಹಿಂದೆ ಇನ್‌ಸ್ಟಗ್ರಾಂ ಮೂಲಕ ಗ್ರೆಗೋರಿ ಹಂಝಾ ಎಂಬಾತನ ಪರಿಚಯವಾಗಿದೆ. ಈತ ಲಂಡನ್‌ನಲ್ಲಿ ಅರ್ಥೋಪೆಡಿಕ್ ಸರ್ಜನ್ ಎಂದು ನಂಬಿಸಿ ಚಾಟ್ ಮಾಡಿ ಸ್ನೇಹ ಬೆಳೆಸಿದ್ದಾನೆ. ಮಾ.13ರಂದು ಹರ್‌ಪ್ರೀತ್‌ರನ್ನು ಭೇಟಿ ಮಾಡಲು ಭಾರತಕ್ಕೆ ಬರುವುದಾಗಿ ತಿಳಿಸಿದ್ದ. ಮಾ.11ರಂದು ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ ಗ್ರೆಗೋರಿ ಹಂಝಾ ಅವರು ಇಮಿಗ್ರೇಷನ್ ಚೆಕಿಂಗ್‌ಗೆ ಒಳಪಟ್ಟಿದ್ದು, ಹೆಚ್ಚು ಬ್ಯಾಗ್‌ಗಳನ್ನು ಮತ್ತು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದೇಶಿ ಕರೆನ್ಸಿ ತಂದಿದ್ದು, ಅದರ ಕ್ಲಿಯರಿಂಗ್‌ಗಾಗಿ ಶುಲ್ಕ ಪಾವತಿಸಬೇಕು ಎಂದು ಸೂಚಿಸಿ ಎಸ್‌ಬಿಐ ಖಾತೆ ಸಂಖ್ಯೆ ನೀಡಿದ್ದಾರೆ. ಅದನ್ನು ನಂಬಿದ ಮಹಿಳೆ 3 ಹಂತದಲ್ಲಿ 3,40,500 ರೂ. ಹಣ ಪಾವತಿಸಿ ವಂಚನೆಗೊಳಗಾಗಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts