More

    ಟ್ರಂಪ್​ ಬೆಂಬಲಿಗರ ಆಕ್ರೋಶ: ಯುಎಸ್ ಕ್ಯಾಪಿಟಲ್​ ಹಿಂಸಾಚಾರಕ್ಕೆ ಓರ್ವ ಬಲಿ, ಪ್ರಧಾನಿ ಮೋದಿ ಬೇಸರ

    ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ರಿಪಬ್ಲಿಕನ್​ ಪಕ್ಷದ ನಾಯಕ ಹಾಗೂ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರ​ ಸೋಲಿನಿಂದ ಕೋಪಗೊಂಡಿರುವ ಬೆಂಬಲಿಗರು ಯುಎಸ್​ ಕ್ಯಾಪಿಟಲ್​ (ಕ್ಯಾಪಿಟಲ್ ಕಟ್ಟಡವು ಯುಎಸ್ ಕಾಂಗ್ರೆಸ್ ಹೊಂದಿದ್ದು, ಯುಎಸ್ ಸರ್ಕಾರದ ಶಾಸಕಾಂಗ ಶಾಖೆಯ ಸ್ಥಾನವಾಗಿದೆ) ಕಟ್ಟಡಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು​ ಮತ್ತು ಬೆಂಬಲಿಗರ ನಡುವೆ ಉಂಟಾದ ಗಲಾಟೆಯಲ್ಲಿ ಓರ್ವ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ.

    ಭಾರತೀಯ ಕಾಲಮಾನ 4.15ರ ಸುಮಾರಿಗೆ ಟ್ರಂಪ್​ ಬೆಂಬಲಿಗರ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯ ಭಾಗವಾಗಿದ್ದ ಮಹಿಳೆಯೊಬ್ಬಳು ಕ್ಯಾಪಿಟಲ್​ ಕಟ್ಟಡದ ಒಳಗಡೆ ಗುಂಡಿನ ಚಕಮಕಿಯ ನಂತರ ರಕ್ತಸ್ರಾವ ಬಿದ್ದಿರುವ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಭುಜಕ್ಕೆ ಗುಂಡೇಟು ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

    ಇದನ್ನೂ ಓದಿರಿ: ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?

    ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡವನ್ನು ಮುತ್ತಿಗೆ ಹಾಕಿದರೆ, ಇನ್ನೊಂದೆಡೆ ಡೆಮೋಕ್ರೆಟಿಕ್​ ಪಕ್ಷದ ಜೋ ಬೈಡೆನ್ ಗೆಲುವನ್ನು ರದ್ದುಗೊಳಿಸುವ ಅಧ್ಯಕ್ಷರ ಬೇಡಿಕೆಯನ್ನು ತಮ್ಮದೇ ರಿಪಬ್ಲಿಕನ್​ ಪಕ್ಷದ ಉಪಾಧ್ಯಕ್ಷ ಮೈಕ್ ಪೆನ್ಸ್ ನಿರಾಕರಿಸಿದರು ಮತ್ತು ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಒತ್ತಾಯಿಸಿರುವ ಟ್ರಂಪ್​ ಬೆಂಬಲಿಗರ ನಡೆಯನ್ನು ಖಂಡಿಸಿದರು.

    ಪ್ರತಿಭಟನಾಕಾರರು ಕ್ಯಾಪಿಟಲ್​ ಕಟ್ಟಡ ಸುತ್ತ ಇದ್ದ ಬ್ಯಾರಿಕೇಡ್​ಗಳನ್ನು ಉರುಳಿಸಿದರು. ಬಳಿಕ ಕ್ಯಾಪಿಟಲ್ ಮೈದಾನದಲ್ಲಿ ಪೊಲೀಸರೊಂದಿಗೆ ಘರ್ಷಣೆಗಿಳಿದರು. ನವೆಂಬರ್ 3ರ ಚುನಾವಣೆಯಲ್ಲಿ ಟ್ರಂಪ್ ವಿರುದ್ಧದ ಬೈಡೆನ್ ವಿಜಯವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಶಾಸಕರು ಕ್ಯಾಪಿಟಲ್​ ಕಟ್ಟಡ ಒಳಗೆ ಹೋಗುವಾಗ ಟ್ರಂಪ್​ ಬೆಂಬಲಿಗರ ಆಕ್ರೋಶ ಭುಗಿಲೆದ್ದವು. ಈ ವೇಳೆ ಪೊಲೀಸರು ಅಧಿಕಾರಿಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಣಗಾಡಿದರು.

    ಇದನ್ನೂ ಓದಿ: ಮರ್ಡರ್ ಆದ ವೆಲ್ಡರ್​: ರಾತ್ರಿ ಮನೆಯಲ್ಲೇ ಇದ್ದ, ಬೆಳಗ್ಗೆ ತೋಟದಲ್ಲಿ ಹೆಣವಾಗಿ ಬಿದ್ದಿದ್ದ..!

    ರಿಪಬ್ಲಿಕನ್ ಶಾಸಕರ ತಂಡವು ಟ್ರಂಪ್ ಪರ ತಂದಿದ್ದ ಬೈಡೆನ್ ಅವರ ವಿಜಯದ ಬಗ್ಗೆ ಆಕ್ಷೇಪಣೆಗಳನ್ನು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ವ್ಯಕ್ತಪಡಿಸಲಾಯಿತು. ಟ್ರಂಪ್‌ರ ಅಧ್ಯಕ್ಷತೆಯ ನಾಲ್ಕು ವರ್ಷಗಳ ಅವಧಿಯಲ್ಲಿ ನಿಷ್ಠಾವಂತ ಉಪಾಧ್ಯಕ್ಷರಾಗಿದ್ದ ಪೆನ್ಸ್, ನವೆಂಬರ್ 3ರ ಚುನಾವಣಾ ಗೆಲುವನ್ನು ಔಪಚಾರಿಕವಾಗಿ ಪ್ರಮಾಣೀಕರಿಸಲು ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಪ್ರಾರಂಭಿಸಿದರು. ಈ ವೇಳೆ ರಿಪಬ್ಲಿಕನ್ ಶಾಸಕರ ತಂಡವು ಫಲಿತಾಂಶಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಅನೇಕ ಪ್ರಶ್ನೆಗಳನ್ನು ಕೇಳಿದರು.

    ಈ ವೇಳೆ ಮಧ್ಯ ಪ್ರವೇಶಸಿದ ಸೆನೆಟ್ ಬಹುಸಂಖ್ಯಾತ ನಾಯಕ ಮಿಚ್ ಮೆಕ್‌ಕಾನ್ನೆಲ್, “ಈ ಚುನಾವಣೆಯನ್ನು ಸೋತವರ ಇಲ್ಲಸಲ್ಲದ ಆರೋಪಗಳಿಂದ ರದ್ದುಗೊಳಿಸಿದರೆ, ನಮ್ಮ ಪ್ರಜಾಪ್ರಭುತ್ವವು ಸಾವಿನ ಸುರುಳಿಯನ್ನು ಪ್ರವೇಶಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

    ಪ್ರಧಾನಿ ಮೋದಿ ಬೇಸರ
    ಗಲಭೆ ಸುದ್ದಿ ತಿಳಿಯುತ್ತಿದ್ದಂತೆ ಟ್ವೀಟ್​ ಮೂಲಕ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ವಾಷಿಂಗ್ಟನ್ ಡಿಸಿಯಲ್ಲಿ ಗಲಭೆ ಮತ್ತು ಹಿಂಸಾಚಾರದ ಸುದ್ದಿ ನೋಡಿ ಬೇಸರವಾಯಿತು. ಅಧಿಕಾರದ ಕ್ರಮಬದ್ಧ ಮತ್ತು ಶಾಂತಿಯುತ ವರ್ಗಾವಣೆ ಮುಂದುವರಿಯಬೇಕು. ಕಾನೂನುಬಾಹಿರ ಪ್ರತಿಭಟನೆಗಳ ಮೂಲಕ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ!

    Web Exclusive | ಆದಿವಾಸಿಗಳಿಗೆ ಉರುಳಾದ ಪೋಕ್ಸೋ ಕಾಯ್ದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts