More

    ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಪ್ರದೀಪ್ ನರ್ವಾಲ್ ದುಬಾರಿ, ಕನ್ನಡಿಗರಿಗೂ ಬೇಡಿಕೆ

    ಮುಂಬೈ: ಟೂರ್ನಿ ಇತಿಹಾಸದಲ್ಲಿ ಅತ್ಯಧಿಕ ಅಂಕ ಕಲೆಹಾಕಿದ ದಾಖಲೆ ವೀರ ಪ್ರದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗರಿಷ್ಠ 1.65 ಕೋಟಿ ರೂಪಾಯಿ ಮೊತ್ತಕ್ಕೆ ಯುಪಿ ಯೋಧಾ ತಂಡಕ್ಕೆ ಮಾರಾಟವಾಗಿದ್ದಾರೆ. ಇದರಿಂದ ಟೂರ್ನಿ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

    ಪಟನಾ ಪೈರೇಟ್ಸ್ ತಂಡ 2016-17ರಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಜಯಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಪ್ರದೀಪ್, ಟೂರ್ನಿಯಲ್ಲಿ ಸರ್ವಾಧಿಕ 1,169 ಅಂಕ ಕಲೆಹಾಕಿದ ದಾಖಲೆಯನ್ನೂ ಹೊಂದಿದ್ದಾರೆ. 2018ರಲ್ಲಿ ಮೋನು ಗೋಯತ್ 1.51 ಕೋಟಿ ರೂ.ಗೆ ಹರಿಯಾಣ ಸ್ಟೀಲರ್ಸ್‌ ತಂಡ ಸೇರಿದ್ದು ಪ್ರೊ ಕಬಡ್ಡಿಯಲ್ಲಿ ಈ ಹಿಂದಿನ ಗರಿಷ್ಠ ಮೊತ್ತದ ಬಿಕರಿಯಾಗಿತ್ತು. 30 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಪ್ರದೀಪ್‌ಗೆ ತೆಲುಗು ಟೈಟಾನ್ಸ್ ತಂಡ 1.2 ಕೋಟಿ ರೂ. ಆರಂಭಿಕ ಬಿಡ್ ಸಲ್ಲಿಸಿತು. ಬಳಿಕ ಇತರ ಫ್ರಾಂಚೈಸಿಗಳೂ ಪೈಪೋಟಿ ನಡೆಸಿದವು.

    ಎ ಕೆಟಗೆರಿಯಲ್ಲಿ ಸಿದ್ಧಾರ್ಥ್ ದೇಸಾಯಿ ಕೋಟಿ ಮೌಲ್ಯ ಸಂಪಾದಿಸಿದ ಮತ್ತೋರ್ವ ಆಟಗಾರ ಎನಿಸಿದರು. ಸಿದ್ಧಾರ್ಥ್ 1.30 ಕೋಟಿ ರೂ.ಗೆ ತೆಲುಗು ಟೈಟಾನ್ಸ್ ಸೇರಿದರು. ಮಂಜೀತ್ 92 ಲಕ್ಷ ರೂ.ಗೆ ತಮಿಳ್ ತಲೈವಾಸ್ ಪಾಲಾದರೆ, ಸಚಿನ್ 84 ಲಕ್ಷ ರೂ.ಗೆ ಪಟನಾ ಪೈರೇಟ್ಸ್ ಸೇರಿದರು. ಹರಿಯಾಣ ಸ್ಟೀಲರ್ಸ್‌ ತಂಡ 83 ಲಕ್ಷ ರೂ.ಗೆ ರೋಹಿತ್ ಗುಲಿಯಾ ಅವರನ್ನು ಖರೀದಿಸಿತು. ಸುರ್ಜೀತ್ ಸಿಂಗ್ 75 ಲಕ್ಷ ರೂ.ಗೆ ತಮಿಳ್ ತಲೈವಾಸ್ ಸೇರಿದರು. ಗುಜರಾತ್ ಸೂಪರ್‌ಜೈಂಟ್ಸ್ ತಂಡ 74 ಲಕ್ಷ ರೂ.ಗೆ ರವೀಂದರ್ ಪಹಾಲ್ ಅವರನ್ನು ಖರೀಸಿತು. ಶ್ರೀಕಾಂತ್ ಜಾಧವ್ 72 ಲಕ್ಷ ರೂ.ಗೆ ಯುಪಿ ಯೋಧಾ ಸೇರಿದರು. ಅನುಭವಿ ಆಟಗಾರ ಮಂಜೀತ್ ಚಿಲ್ಲರ್ ಯಾವುದೇ ತಂಡಕ್ಕೆ ಮಾರಾಟವಾಗದೆ ನಿರಾಸೆ ಅನುಭವಿಸಿದರು. ದೀಪಕ್ ಹೂಡ 55 ಲಕ್ಷ ರೂ.ಗೆ ಜೈಪುರ ಪಿಂಕ್‌ಪ್ಯಾಂಥರ್ಸ್‌ ಸೇರಿದರು. ಬೆಂಗಳೂರು ಬುಲ್ಸ್ ಮಾಜಿ ನಾಯಕ ರೋಹಿತ್ ಕುಮಾರ್ 36 ಲಕ್ಷ ರೂ.ಗೆ ತೆಲುಗು ಟೈಟಾನ್ಸ್ ತಂಡದ ಪಾಲಾದರು. ಸಂದೀಪ್ ನರ್ವಾಲ್ 60 ಲಕ್ಷ ರೂ.ಗೆ ದಬಾಂಗ್ ದೆಹಲಿ ತಂಡಕ್ಕೆ ಸೇರ್ಪಡೆಯಾದರು.

    ವಿದೇಶಿಯರ ಬಿಕರಿ
    ವಿದೇಶಿ ಆಟಗಾರರಲ್ಲಿ ಇರಾನ್ ಆಟಗಾರ ಮೊಹಮದ್ರೆಜಾ ಶಡ್‌ಲೌಯಿ ಚಿಯಾನೆಹ್ ಗರಿಷ್ಠ 31 ಲಕ್ಷ ರೂ.ಗೆ ಪಟನಾ ಪೈರೇಟ್ಸ್ ಪಾಲಾದರು. ಅಬೊಜರ್ ಮಿಘನಿ 2ನೇ ಗರಿಷ್ಠ 30.50 ಲಕ್ಷ ರೂ.ಗೆ ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಮಾರಾಟವಾದರು. ಕೊರಿಯಾದ ಜಂಗ್ ಕುನ್ ಲೀ 20.5 ಲಕ್ಷ ರೂ.ಗೆ ಪಟನಾ ಪೈರೇಟ್ಸ್ ಸೇರಿದರೆ, ಇರಾನ್‌ನ ಮೊಹ್ಸೆನ್ 12.80 ಲಕ್ಷ ರೂ.ಗೆ ಯು ಮುಂಬಾ ತಂಡದ ಪಾಲಾದರು. ಒಟ್ಟು 22 ವಿದೇಶಿ ಆಟಗಾರರು ವಿವಿಧ ತಂಡಗಳ ಪಾಲಾದರು.

    ಇಂದು ಬಿ, ಸಿ, ಡಿ ಕೆಟಗರಿ ಆಟಗಾರರ ಹರಾಜು: ಆರಂಭ: ಬೆಳಗ್ಗೆ 10.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಟಾಪ್-5 ಸೇಲ್:

    *1.65 ಕೋಟಿ ರೂ.
    ಪ್ರದೀಪ್ ನರ್ವಾಲ್
    (ಯುಪಿ ಯೋಧಾ)
    *1.30 ಕೋಟಿ ರೂ.
    ಸಿದ್ಧಾರ್ಥ್ ದೇಸಾಯಿ
    (ತೆಲುಗು ಟೈಟಾನ್ಸ್)
    *92 ಲಕ್ಷ ರೂ.
    ಮಂಜೀತ್
    (ತಮಿಳ್ ತಲೈವಾಸ್)
    *84 ಲಕ್ಷ ರೂ.
    ಸಚಿನ್
    (ಪಟನಾ ಪೈರೇಟ್ಸ್)
    *83 ಲಕ್ಷ ರೂ.
    ರೋಹಿತ್ ಗುಲಿಯಾ
    (ಹರಿಯಾಣ ಸ್ಟೀಲರ್ಸ್‌)

    ಕನ್ನಡಿಗರಿಗೂ ಬೇಡಿಕೆ
    ಕರ್ನಾಟಕದ ಆಟಗಾರರೂ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಬಿಕರಿಯಾದರು. ಕನ್ನಡಿಗ ಪ್ರಶಾಂತ್ ಕುಮಾರ್ ರೈ 55 ಲಕ್ಷ ರೂ.ಗೆ ಪಟನಾ ಪೈರೇಟ್ಸ್ ಪಾಲಾದರೆ, ಕರ್ನಾಟಕದ ಮತ್ತೋರ್ವ ಆಟಗಾರ ಕೆ. ಪ್ರಪಂಚನ್ 71 ಲಕ್ಷ ರೂ.ಗೆ ತಮಿಳು ತಲೈವಾಸ್ ತಂಡ ಸೇರಿದರು.

    ಬೆಂಗಳೂರು ಬುಲ್ಸ್ ತಂಡ:
    ಚಂದ್ರನ್ ರಂಜಿತ್ (80 ಲಕ್ಷ ರೂ), ಮಹೇಂದರ್ ಸಿಂಗ್ (50 ಲಕ್ಷ ರೂ), ಅಬೊಲ್‌ಜ್ ಮ್ಸೋದ್‌ಲೌ ಮಹಲಿ (13 ಲಕ್ಷ ರೂ), ಡೊಂಗ್ ಗೆಯೊನ್ ಲೀ (12.5 ಲಕ್ಷ ರೂ.), ಝಿಯುರ್ ರೆಹಮಾನ್ (12.20 ಲಕ್ಷ ರೂ.).
    ರಿಟೇನ್: ಪವನ್ ಕುಮಾರ್ ಶೆರಾವತ್, ಅಮಿತ್ ಶೆರಾನ್, ಮೋಹಿತ್ ಶೆರಾವತ್, ಬಂಟಿ, ಸೌರಭ್ ನಂದಲ್.

    ಭಾರತಕ್ಕೆ ಜಾವೆಲಿನ್​ ಥ್ರೋನಲ್ಲೇ ಮತ್ತೊಂದು ಚಿನ್ನದ ಪದಕ! ವಿಶ್ವ ದಾಖಲೆ ರಚಿಸಿದ ಸುಮಿತ್​ ಅಂತಿಲ್​

    ಪ್ಯಾರಾಲಿಂಪಿಕ್ಸ್​: ವಿನೋದ್​ಕುಮಾರ್​ ಕೈತಪ್ಪಿದ ಕಂಚಿನ ಪದಕ

    p

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts